ಹಳೆ ಕಾಯಿನ್ ಗೆ ಕೋಟ್ಯಂತರ ರೂ ಆಮಿಷ! 26 ಲಕ್ಷ ಕೊಟ್ಟು ಮೋಸ ಹೋದ ವ್ಯಕ್ತಿ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡ್ಕೊಂಡ

ಹಳೆಯ 1 ರೂಪಾಯಿ ಕಾಯಿನ್ ಕೊಟ್ರೇ 58 ಲಕ್ಷ ರೂಪಾಯಿ ಕೊಡ್ತೀವಿ ಅಂತಂದಿದ್ದ ಅನ್ ಲೈನ್ ವಂಚಕರ ಮಾತು ನಂಬಿ ಅರವಿಂದ್, ತನ್ನ ಬಳಿ ಇದ್ದ ಹಳೆಯ ಕಾಲದ 1 ರೂಪಾಯಿಯ ಕಾಯಿನ್ ಮಾರಾಟ ಮಾಡಲು ಮುಂದಾಗಿದ್ದಾನೆ. ಆದ್ರೆ ಇದಕ್ಕೆ ಪ್ರೊಸೆಸಿಂಗ್ ಫೀಸ್, ಆ ಫೀಸ್, ಈ ಫೀಸ್ ಕೊಡಬೇಕು ಅಂತ ಅರವಿಂದ್ ಬಳಿಯೇ ವಂಚಕ ತಂಡ ಸರಿಸುಮಾರು 26 ಲಕ್ಷ ರೂಪಾಯಿ ವಸೂಲಿ ಮಾಡಿದೆ

ಹಳೆ ಕಾಯಿನ್ ಗೆ ಕೋಟ್ಯಂತರ ರೂ ಆಮಿಷ! 26 ಲಕ್ಷ ಕೊಟ್ಟು ಮೋಸ ಹೋದ ವ್ಯಕ್ತಿ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡ್ಕೊಂಡ
ಹಳೆ ಕಾಯಿನ್ ನಿಂದ ಕೋಟ್ಯಂತರ ಬರುವ ಅಮಿಷ: 26 ಲಕ್ಷ ಕೊಟ್ಟು ಮೋಸ ಹೋದ ವ್ಯಕ್ತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 03, 2022 | 2:31 PM

ನಿಮ್ಮ ಬಳಿ ಹಳೆಯ ಕಾಲದ 1 ರೂಪಾಯಿ, 2ರೂಪಾಯಿ, 5 ರೂಪಾಯಿಯ ಕಾಯಿನ್ ಇದೆಯಾ… ಹಾಗಿದ್ರೆ ನಿಮಗೆ ಕೋಟಿ‌ ಕೋಟಿ ಸಿಗುತ್ತೆ… ಹಳೆಯ ಕಾಲದ ಕಾಯಿನ್ ಗಳಿಗೆ ಕೋಟಿ ಕೋಟಿ ಬೆಲೆ ಇದೆ… ಹಳೆ ಕಾಲದ ಕಾಯಿನ್ ಕೊಟ್ರೇ ನಿಮಗೆ ಕೋಟಿ ಕೋಟಿ ಕೊಡ್ತೀವಿ ಅಂತ ನಂಬಿಸಿದ (antique coin fraud) ಅನ್ ಲೈನ್ ವಂಚಕರ ತಂಡ, ವ್ಯಾಪಾರಿಯೊರ್ವನ ಬಳಿಯೇ ಲಕ್ಷ ಲಕ್ಷ ಪೀಕಿದ್ದಾರೆ… ಆಮಿಷಕ್ಕೆ ಬಲಿಯಾಗಿ 1 ರೂಪಾಯಿ ಹಳೆಯ ಕಾಯಿನ್ ಮಾರಲು ಹೋದ ವ್ಯಾಪಾರಿಯೊರ್ವ ಅನ್ ಲೈನ್ ವಂಚಕರಿಂದ ಮೋಸಕ್ಕೆ ಒಳಗಾಗಿ ಈಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಇದೆಲ್ಲಾ ಅದದ್ದೆಲ್ಲಿ ಅಂತೀರಾ? ಈ ವರದಿ ನೋಡಿ (chikkaballapur trader suicide)

ಅಲ್ಲೊಂದು ಜಾಗದಲ್ಲಿ ಸುಟ್ಟು ಕರಕಲಾಗಿರೋ ಮೃತದೇಹ, ಮೃತದೇಹದ ಪಕ್ಕದಲ್ಲಿರೋ ಬೈಕ್, ಸಾವಿನ ಸತ್ಯವನ್ನ ಬಯಲು ಮಾಡಿದ ಡೆತ್ ನೋಟ್ ಬಿದ್ದಿತ್ತು. ಹೀಗೆ ಸುಟ್ಟು ಕರಕಲಾಗಿರುವ ಚಿಕ್ಕಬಳ್ಳಾಪುರ ನಗರದ ಶಂಕರಮಠದ ಬಡಾವಣೆ ನಿವಾಸಿ ಅರವಿಂದ್, ನಗರದ ಬಜಾರ್ ರಸ್ತೆಯಲ್ಲಿ ಅರವಿಂದ್ ಗಿಫ್ಟ್ ಸೆಂಟರ್ ಅನ್ನೊ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದ. ಅರವಿಂದ್, ವ್ಯಾಪಾರ ಮಾಡೋದ್ರಲ್ಲಿ ಬಹಳ ಬುದ್ದಿವಂತ… ಆದ್ರೆ ಇದೇ ಬುದ್ದಿವಂತ ಅರವಿಂದ್, ಈಗ ಅನ್ ಲೈನ್ ವಂಚಕರು ಮಾಡಿದ ಮಹಾಮೋಸದ ಜಾಲಕ್ಕೆ ಸಿಲುಕಿ, ತನ್ನ ಪ್ರಾಣವನ್ನೇ ತಾನೇ ತೆಗೆದುಕೊಂಡಿದ್ದಾನೆ. ಹೌದು! ಹಳೆಯ 1 ರೂಪಾಯಿ ಕಾಯಿನ್ ಕೊಟ್ರೇ 58 ಲಕ್ಷ ರೂಪಾಯಿ ಕೊಡ್ತೀವಿ ಅಂತಂದಿದ್ದ ಅನ್ ಲೈನ್ ವಂಚಕರ ಮಾತು ನಂಬಿ ಅರವಿಂದ್, ತನ್ನ ಬಳಿ ಇದ್ದ ಹಳೆಯ ಕಾಲದ 1 ರೂಪಾಯಿಯ ಕಾಯಿನ್ ಮಾರಾಟ ಮಾಡಲು ಮುಂದಾಗಿದ್ದಾನೆ. ಆದ್ರೆ ಇದಕ್ಕೆ ಪ್ರೊಸೆಸಿಂಗ್ ಫೀಸ್, ಆ ಫೀಸ್, ಈ ಫೀಸ್ ಕೊಡಬೇಕು ಅಂತ ಅರವಿಂದ್ ಬಳಿಯೇ ವಂಚಕ ತಂಡ ಸರಿಸುಮಾರು 26 ಲಕ್ಷ ರೂಪಾಯಿ ವಸೂಲಿ ಮಾಡಿದೆ.

ಗೌರಿಬಿದನೂರಿಗೆ ಹೋಗುವ ಕಣಿವೆ ಪ್ರದೇಶದ ನಿರ್ಜನ ಜಾಗದಲ್ಲಿ… ಹೌದು, ಅನ್ ಲೈನ್ ವಂಚಕರಿಗೆ ಹಣ ಕೊಡೋಕೆ ಅಂತ ಅರವಿಂದ್ ತಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲ ಆಡವಿಟ್ಟಿದ್ದಾನೆ. ಸಾಲದು ಅಂತ ಹಲವರ ಬಳಿ ಕೈ ಸಾಲ ಸಹ ಮಾಡಿದ್ದಾನೆ. ಆದ್ರೆ ಇತ್ತ ಹಣ ಪಡೆದ ಅನ್ ಲೈನ್ ವಂಚಕರು ಮಾತ್ರ, ಪಡೆದ ಹಣ ವಾಪಾಸ್ ಮಾಡಿಲ್ಲ. ಬದಲಾಗಿ ಮತ್ತಷ್ಟು ಹಣ ಕೊಡುವಂತೆ ಅರವಿಂದ್ ಗೆ ಒತ್ತಡ ಹಾಕಿದ್ದಾರೆ. ಇದ್ರಿಂದ ಏನು ಮಾಡೋದು ಅಂತ ದಿಕ್ಕು ತೋಚದ ಅರವಿಂದ್, ಚಿಕ್ಕಬಳ್ಳಾಪುರ ನಗರದಿಂದ ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಳಿ ನಿರ್ಜನ ಜಾಗಕ್ಕೆ ತೆರಳಿ, ಅಲ್ಲಿ ನಿನ್ನೆ ರಾತ್ರಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದ್ರಿಂದ ಅರವಿಂದ್ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

ಓಟ್ನಲ್ಲಿ ಹಳೆಯ ಕಾಯಿನ್ ಗೆ ಕೋಟಿ ಕೋಟಿ ಕೊಡ್ತೀವಿ, ಅನ್ನೋ ಅನ್ ಲೈನ್ ವಂಚಕರ ಮಾತು ನಂಬಿದ ಅರವಿಂದ್, ಧಿಡೀರ್ ಶ್ರೀಮಂತನಾಗಲು ಹೋಗಿ, ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕೆ ಹೇಳೋದು ಅನ್‌ಲೈನ್ ನಲ್ಲಿ ಆ ಆಫರ್ ಈ ಆಫರ್ ಅಂತ ಕರೆ ಮಾಡಿ ಗಿಮಿಕ್ ಮಾಡೋ ನಯವಂಚಕರನ್ನ ನಂಬಬೇಡಿ, ನಂಬಿದ್ರೆ ನಿಮಗೂ ಅರವಿಂದ್ ಗತಿಯೆ ಬಂದೀತು ಎಚ್ಚರ ಎಚ್ಚರ. -ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್