ಅಕ್ರಮವಾಗಿ ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್ ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲು
ಗರ್ಭಪಾತವೇ ಅಪರಾಧ. ಆಸ್ಪತ್ರೆಗಳಲ್ಲಿ ಕೂಡ ಗರ್ಭಪಾತ ಮಾಡುವಂತಿಲ್ಲ. ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ 2002 ಮತ್ತು 2003 ರ ನಿಯಮಗಳ ಅನುಸಾರ, ಗರ್ಭಪಾತದ ಮಾತ್ರೆಗಳು ಕೇವಲ ಆಸ್ಪತ್ರೆಗಳಲ್ಲಿ ಮಾತ್ರ ಇರಬೇಕು.
ಯಾವುದೇ ಮಾನ್ಯ ದಾಖಲೆಗಳು ಇಲ್ಲದೆ, ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್ ಸಂಸ್ಥೆಯೊಂದರ ವಿರುದ್ಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇ-ಕಾಮರ್ಸ್ ಸಂಸ್ಥೆ ಹೀಗೆ ಅಕ್ರಮವಾಗಿ ಅಬಾರ್ಶನ್ ಕಿಟ್ನ್ನು ಮಾರಾಟ ಮಾಡುತ್ತಿದೆ ಎಂಬ ಮಾಹಿತಿ ಬೇರೆ ಮೂಲದಿಂದ ಸಿಕ್ಕಿತ್ತು. ಅದು ಸತ್ಯವೋ, ಕಂಪನಿ ಮಾರಾಟ ಮಾಡುತ್ತಿರುವುದು ನಿಜವಾ ಎಂದು ಪರಿಶೀಲನೆ ನಡೆಸಲು ನಾವೇ ಖುದ್ದಾಗಿ ಒಂದು ಕಿಟ್ಗೆ ಆರ್ಡರ್ ಮಾಡಿದ್ದೆವು. ಇದರಿಂದಾಗಿ ಗರ್ಭಪಾತ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ ಎಂದು ಎಫ್ಡಿಎ ಸಹಾಯಕ ಆಯುಕ್ತ ಗಣೇಶ್ ರೋಕಡೆ ತಿಳಿಸಿದ್ದಾರೆ.
ಅಂದಹಾಗೇ, ಈ ಗರ್ಭಪಾತಕ್ಕೆ ಸಂಬಂಧಪಟ್ಟು ಸಂಸ್ಥೆ ಮಾರಾಟ ಮಾಡುವ ಕಿಟ್ಗೆ ಹಣ ಪಡೆಯುತ್ತದೆಯೇ ಹೊರತು ಅದಕ್ಕೆ ಬಿಲ್ ಮಾಡುವುದಿಲ್ಲ. ಅಂದರೆ ಈ ಇ ಕಾಮರ್ಸ್ ವೇದಿಕೆಯಲ್ಲಿ ನೋಂದಣಿ ಮಾಡಿಕೊಂಡಿರುವ ನಿರ್ಧಿಷ್ಟ ಮಾರಾಟಗಾರರು ಒಡಿಶಾದ ಔಷಧಿ ಅಂಗಡಿಯೊಂದರ ದಾಖಲೆಯನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಗಣೇಶ್ ಹೇಳಿದ್ದಾರೆ.
ಗರ್ಭಪಾತವೇ ಅಪರಾಧ. ಆಸ್ಪತ್ರೆಗಳಲ್ಲಿ ಕೂಡ ಗರ್ಭಪಾತ ಮಾಡುವಂತಿಲ್ಲ. ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ 2002 ಮತ್ತು 2003 ರ ನಿಯಮಗಳ ಅನುಸಾರ, ಗರ್ಭಪಾತದ ಮಾತ್ರೆಗಳು ಕೇವಲ ಆಸ್ಪತ್ರೆಗಳಲ್ಲಿ ಮಾತ್ರ ಇರಬೇಕು. ಅದೂ ಕೂಡ ತರಬೇತಿ ಪಡೆದ ತಜ್ಞರು ಮಾತ್ರ ಅದರ ಮೇಲ್ವಿಚಾರಣೆ ವಹಿಸಿಕೊಳ್ಳಬೇಕು. ಸದ್ಯ ಇ -ಕಾಮರ್ಸ್ ಸಂಸ್ಥೆ ಮತ್ತು ಅಬಾರ್ಶನ್ ಕಿಟ್ ಮಾರುತ್ತಿದ್ದ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Parashuram Jayanti 2022: ಪರಶುರಾಮನ ಬಗ್ಗೆ 10 ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ..!