AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCB List ನಲ್ಲಿ ಮುಂದಿನ ಹೆಸರುಗಳು ಆ ಹಿರಿಯ ಸ್ಟಾರ್ ನಟ ಮತ್ತು ಸೋದರರದ್ದು!

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ನಟ ನಟಿಯರ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಸಿಬಿ ಇನ್ನೂ ಕೆಲವರ ಮೇಲೆ ಕಣ್ಣು ನೆಟ್ಟಿದೆ. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸ್ಟಾರ್ ನಟ ಮತ್ತು ಸಹೋದರರು ಭಾಗಿಯಾಗಿರುವ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಆ ಇಬ್ಬರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ. ಸ್ಯಾಂಡಲ್​ವುಡ್​ನ ಫ್ಯಾಮಿಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈ ಸಹೋದರ ನಟರ ಪೈಕಿ 2017ರ ಗಾಂಜಾ ಪ್ರಕರಣ ಹಾಗೂ ಅಪಘಾತ ಸಂದರ್ಭದಲ್ಲಿ ಇದೇ ಕುಟುಂಬದ ಒಬ್ಬರನ್ನ ಜಯನಗರ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. […]

CCB List ನಲ್ಲಿ ಮುಂದಿನ ಹೆಸರುಗಳು ಆ ಹಿರಿಯ ಸ್ಟಾರ್ ನಟ ಮತ್ತು ಸೋದರರದ್ದು!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 17, 2020 | 10:05 AM

Share

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ನಟ ನಟಿಯರ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಸಿಬಿ ಇನ್ನೂ ಕೆಲವರ ಮೇಲೆ ಕಣ್ಣು ನೆಟ್ಟಿದೆ.

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸ್ಟಾರ್ ನಟ ಮತ್ತು ಸಹೋದರರು ಭಾಗಿಯಾಗಿರುವ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಆ ಇಬ್ಬರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ. ಸ್ಯಾಂಡಲ್​ವುಡ್​ನ ಫ್ಯಾಮಿಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈ ಸಹೋದರ ನಟರ ಪೈಕಿ 2017ರ ಗಾಂಜಾ ಪ್ರಕರಣ ಹಾಗೂ ಅಪಘಾತ ಸಂದರ್ಭದಲ್ಲಿ ಇದೇ ಕುಟುಂಬದ ಒಬ್ಬರನ್ನ ಜಯನಗರ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು.

ಆತನೂ ಕೂಡ 3 ದಶಕಗಳಿಂದ ಸ್ಯಾಂಡಲ್​ವುಡ್​ನಲ್ಲಿ ನಟನೆ ಮಾಡಿರುವವರೇ! ಅಂದು ಸಾಕ್ಷಾಧಾರಗಳ ಕೊರತೆಯಿಂದ ಬಿಟ್ಟು ಕಳುಹಿಸಿದ್ದರು. ನಟರ ತಂದೆಯೂ ಕೂಡ ಮೂರು ದಶಕಗಳಿಂದ ಸ್ಯಾಂಡಲ್​ವುಡ್​ನಲ್ಲಿ ನಟನೆ ಮಾಡಿರುವವರೇ! ಈಗ ಈ ನಂಟಿನಲ್ಲಿ ಸಹೋದರರ ಹೆಸರು ಕೂಡ ಪ್ರಮುಖವಾಗಿ ಕೇಳಿಬಂದಿದೆ. ಹಾಗಾಗಿ ಸಿಸಿಬಿ ಪೊಲೀಸರಿಂದ ಆ ಸ್ಟಾರ್ ನಟ ಹಾಗೂ ಸಹೋದರನಿಗೂ ನೋಟಿಸ್ ನೀಡುವ ಸಾಧ್ಯತೆಯಿದೆ.

ಈ ಇಬ್ಬರು ಸಹೋದರರು ನೈಟ್ ಪಾರ್ಟಿಯಲ್ಲಿ ಉದ್ಯಮಿಗಳು ಮತ್ತು ರಾಜಕಾರಣಿಗಳ ಮಕ್ಕಳ ಜೊತೆ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು