ಡ್ರಗ್ ಪೆಡ್ಲರ್ ಆದಿತ್ಯ ಅಗರ್ವಾಲ್ ಮತ್ತೆ ಸಿಸಿಬಿ ಕಸ್ಟಡಿಗೆ, ಅವನ ಜಾತಕ ಇಲ್ಲಿದೆ!
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಡ್ರಗ್ಸ್ ಪೆಡ್ಲರ್ ಆದಿತ್ಯ ಅಗರ್ವಾಲ್‌ನನ್ನು ಸಿಸಿಬಿ ಮತ್ತೆ ಕಸ್ಟಡಿಗೆ ಪಡೆದಿದೆ. ಆರೋಪಿ ವಿರೇನ್ ಖನ್ನಾ ಆಪ್ತನಾಗಿರುವ ಆದಿತ್ಯ ಅಗರ್ವಾಲ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಮೊದಲ ಆರೋಪಿಯಾಗಿದ್ದಾನೆ. ಹರಿಯಾಣದ ಪಂಚುಕುಲದ ನಿವಾಸಿ ಆದಿತ್ಯ ಅಗರ್ವಾಲ್‌ನನ್ನು ಹರಿಯಾಣದಲ್ಲಿಯೇ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಯುವತಿ ಜತೆ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದ ಅಗರ್‌ವಾಲ್ 2010ರಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ. ಡ್ರಗ್ಸ್ ದಂಧೆಯಲ್ಲಿ ವಿರೇನ್ ಖನ್ನಾಗೆ ಪಾರ್ಟ್‌ನರ್ ಆಗಿದ್ದ. ಜತೆಗೆ ಸಹಾಯಕನಾಗಿದ್ದ. ವಿರೇನ್ ಖನ್ನಾ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಡ್ರಗ್ಸ್ ಪೆಡ್ಲರ್ ಆದಿತ್ಯ ಅಗರ್ವಾಲ್‌ನನ್ನು ಸಿಸಿಬಿ ಮತ್ತೆ ಕಸ್ಟಡಿಗೆ ಪಡೆದಿದೆ. ಆರೋಪಿ ವಿರೇನ್ ಖನ್ನಾ ಆಪ್ತನಾಗಿರುವ ಆದಿತ್ಯ ಅಗರ್ವಾಲ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಮೊದಲ ಆರೋಪಿಯಾಗಿದ್ದಾನೆ.
ಹರಿಯಾಣದ ಪಂಚುಕುಲದ ನಿವಾಸಿ ಆದಿತ್ಯ ಅಗರ್ವಾಲ್‌ನನ್ನು ಹರಿಯಾಣದಲ್ಲಿಯೇ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಯುವತಿ ಜತೆ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದ ಅಗರ್‌ವಾಲ್ 2010ರಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ.
ಡ್ರಗ್ಸ್ ದಂಧೆಯಲ್ಲಿ ವಿರೇನ್ ಖನ್ನಾಗೆ ಪಾರ್ಟ್‌ನರ್ ಆಗಿದ್ದ. ಜತೆಗೆ ಸಹಾಯಕನಾಗಿದ್ದ. ವಿರೇನ್ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ.
ವಿರೇನ್ ಖನ್ನಾ ಡ್ರಗ್ಸ್ ಮಾಫಿಯಾಗೆ ಬೇನಾಮಿಯಾಗಿದ್ದ. 42 ಸಾವಿರ ರೂ.ಗೆ ಫ್ಲ್ಯಾಟ್ ಬಾಡಿಗೆ ಪಡೆದು ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿರುವ ಫ್ಲ್ಯಾಟ್‌ನಲ್ಲಿದ್ದನು. ಡ್ರಗ್ಸ್ ದಂಧೆಯಿಂದ ಐಷಾರಾಮಿ ಜೀವನ ನಡೆಸುತ್ತಿದ್ದ. ಡ್ರಗ್ಸ್ ಮಾಫಿಯಾ ಸುದ್ದಿ ಹೊರಗೆ ಬರುತ್ತಿದ್ದಂತೆ ಬೆಂಗಳೂರಿನಿಂದ ಹರಿಯಾಣಕ್ಕೆ ಪರಾರಿಯಾಗಿದ್ದ.
ನಂತರ ಪೊಲೀಸರು ಆದಿತ್ಯ ಅಗರ್ವಾಲ್‌ನನ್ನು ಬಂಧಿಸಿ ಕರೆತಂದಿದ್ದರು. ವಿಚಾರಣೆ ವೇಳೆ ತನಗೆ ಯಾರ ಜತೆ ಸಂಪರ್ಕವಿಲ್ಲ ಎಂದಿದ್ದ. ವಿರೇನ್ ಖನ್ನಾ ಯಾರೆಂದು ನನಗೆ ಗೊತ್ತಿಲ್ಲವೆಂದಿದ್ದ. ಆರೋಪಿ ಆದಿತ್ಯ ಅಗರ್ವಾಲ್ ತಂದೆ ನಿವೃತ್ತ ಬ್ರಿಗೇಡಿಯರ್ ಆಗಿದ್ದಾರೆ. ಆದಿತ್ಯ ಮೊಬೈಲ್‌ನಲ್ಲಿದ್ದ ಮಾಹಿತಿ ಸಂಪೂರ್ಣ ಡಿಲೀಟ್ ಮಾಡಿದ್ದಾರೆ. ವಿರೇನ್ ಖನ್ನಾ ಬೇನಾಮಿಯಾಗಿರುವ ಹಿನ್ನೆಲೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಹೀಗಾಗಿ 2 ದಿನಗಳ ಕಾಲ ಸಿಸಿಬಿ ಮತ್ತೆ ಕಸ್ಟಡಿಗೆ ಪಡೆದಿದೆ.
Drugs ಜಾಲ: ವಿರೇನ್ ಆಪ್ತ ಆದಿತ್ಯ ಅರೆಸ್ಟ್, A15 ಶೆಟ್ಟಿ ಪೊಲೀಸ್ ಕಸ್ಟಡಿಗೆ
Published On - 12:07 pm, Thu, 17 September 20