ನಕಲಿ ಆರ್‌ಸಿ ಕಾರ್ಡ್, ಇನ್ಶೂರೆನ್ಸ್ ಸಿದ್ಧಪಡಿಸುತ್ತಿದ್ದ ಆರೋಪಿಗಳು ಅಂದರ್

ಬೆಂಗಳೂರು: ನಕಲಿ ಆರ್‌ಸಿ ಕಾರ್ಡ್, ಇನ್ಶೂರೆನ್ಸ್ ಸಿದ್ಧಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್, ಸಂತೋಷ್‌ ಬಂಧಿತ ಆರೋಪಿಗಳು. ಬಂಧಿತರಿಂದ 135 ಆರ್‌ಸಿ ಕಾರ್ಡ್, 500 ಇನ್ಶೂರೆನ್ಸ್ ಪ್ರತಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು RTIO ಕಚೇರಿಯಲ್ಲಿ DRC ಆದ ಸ್ಮಾರ್ಟ್ ಕಾರ್ಡ್​ಗಳನ್ನ ಕದಿಯುತ್ತಿದ್ದರು. ಬಳಿಕ ಅಸಲಿ ಮಾಲೀಕರ ಹೆಸರನ್ನ ಬದಲಾಯಿಸಿ ನಕಲಿ ಕಾರ್ಡ್ ತಯಾರಿಸುತ್ತಿದ್ದರು. ದ್ವಿಚಕ್ರವಾಹನಗಳಿಗೆ 3 ಸಾವಿರ ರೂ.ಗೆ ಆರ್‌ಸಿ ಕಾರ್ಡ್ ಮಾಡಿಕೊಡುತ್ತಿದ್ದರು. ₹500ರಿಂದ 1 ಸಾವಿರ ರೂ.ಗೆ ವಾಹನಕ್ಕೆ ಇನ್ಶೂರೆನ್ಸ್ […]

ನಕಲಿ ಆರ್‌ಸಿ ಕಾರ್ಡ್, ಇನ್ಶೂರೆನ್ಸ್ ಸಿದ್ಧಪಡಿಸುತ್ತಿದ್ದ ಆರೋಪಿಗಳು ಅಂದರ್
Follow us
ಆಯೇಷಾ ಬಾನು
|

Updated on:Jun 03, 2020 | 3:05 PM

ಬೆಂಗಳೂರು: ನಕಲಿ ಆರ್‌ಸಿ ಕಾರ್ಡ್, ಇನ್ಶೂರೆನ್ಸ್ ಸಿದ್ಧಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್, ಸಂತೋಷ್‌ ಬಂಧಿತ ಆರೋಪಿಗಳು. ಬಂಧಿತರಿಂದ 135 ಆರ್‌ಸಿ ಕಾರ್ಡ್, 500 ಇನ್ಶೂರೆನ್ಸ್ ಪ್ರತಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು RTIO ಕಚೇರಿಯಲ್ಲಿ DRC ಆದ ಸ್ಮಾರ್ಟ್ ಕಾರ್ಡ್​ಗಳನ್ನ ಕದಿಯುತ್ತಿದ್ದರು. ಬಳಿಕ ಅಸಲಿ ಮಾಲೀಕರ ಹೆಸರನ್ನ ಬದಲಾಯಿಸಿ ನಕಲಿ ಕಾರ್ಡ್ ತಯಾರಿಸುತ್ತಿದ್ದರು. ದ್ವಿಚಕ್ರವಾಹನಗಳಿಗೆ 3 ಸಾವಿರ ರೂ.ಗೆ ಆರ್‌ಸಿ ಕಾರ್ಡ್ ಮಾಡಿಕೊಡುತ್ತಿದ್ದರು. ₹500ರಿಂದ 1 ಸಾವಿರ ರೂ.ಗೆ ವಾಹನಕ್ಕೆ ಇನ್ಶೂರೆನ್ಸ್ ಮಾಡಿ ಕೊಡಲಾಗುತ್ತಿತ್ತು. ಈ ರೀತಿ ಮೋಸದಿಂದ ಹಣ ಮಾಡುತ್ತಿದ್ದವರು ಸದ್ಯ ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಸಿಕ್ಕಿಬಿದ್ದಿದ್ದಾರೆ.

Published On - 8:32 am, Wed, 3 June 20