ಒಂದೇ ಒಂದು ಮಿಸ್ಡ್ ಕಾಲ್ನಿಂದ ಶುರುವಾದ ಪ್ರೀತಿ ಆತನ ಜೀವವನ್ನೇ ತೆಗೆಯಿತು!
ನೆಲಮಂಗಲ: ಗೃಹಿಣಿಯೊಬ್ಬಳಿಗೆ ಮಿಸ್ಡ್ ಕಾಲ್ನಿಂದ ಶುರುವಾದ ಪ್ರೀತಿ ಅಕ್ರಮ ಸಂಬಂಧವಾಗಿ ಮಾರ್ಪಟ್ಟು, ಪತಿಯೇ ಪ್ರಿಯಕರನನ್ನು ಕೊಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾದೇವಿ ಅಗ್ರಹಾರದ ಬಳಿ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರ ನಿವಾಸಿ ಚಂದ್ರಶೇಖರ್ (20) ಮೃತ ದುರ್ದೈವಿ. ಚೆನ್ನಾದೇವಿ ಅಗ್ರಹಾರದ ನಿವಾಸಿಯಾದ ರಘು ಪತ್ನಿಗೆ ಅಚಾನಕ್ ಆಗಿ ಒಂದು ಮಿಸ್ಡ್ ಕಾಲ್ ಕೊಟ್ಟಿದ್ದಾನೆ. ಅದೇ ಮಿಸ್ಡ್ ಕಾಲ್ ಪ್ರೀತಿಯ ವ್ಯಾಮೋಹಕ್ಕೆ ತಿರುಗಿ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. 15ದಿನದ ಹಿಂದೆ ಕುಡಿದ ಮತ್ತಿನಲ್ಲಿ ರಘು ನಿಂದಿಸಿದ್ದಕ್ಕೆ ರಘುವನ್ನ […]
ನೆಲಮಂಗಲ: ಗೃಹಿಣಿಯೊಬ್ಬಳಿಗೆ ಮಿಸ್ಡ್ ಕಾಲ್ನಿಂದ ಶುರುವಾದ ಪ್ರೀತಿ ಅಕ್ರಮ ಸಂಬಂಧವಾಗಿ ಮಾರ್ಪಟ್ಟು, ಪತಿಯೇ ಪ್ರಿಯಕರನನ್ನು ಕೊಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾದೇವಿ ಅಗ್ರಹಾರದ ಬಳಿ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರ ನಿವಾಸಿ ಚಂದ್ರಶೇಖರ್ (20) ಮೃತ ದುರ್ದೈವಿ.
ಚೆನ್ನಾದೇವಿ ಅಗ್ರಹಾರದ ನಿವಾಸಿಯಾದ ರಘು ಪತ್ನಿಗೆ ಅಚಾನಕ್ ಆಗಿ ಒಂದು ಮಿಸ್ಡ್ ಕಾಲ್ ಕೊಟ್ಟಿದ್ದಾನೆ. ಅದೇ ಮಿಸ್ಡ್ ಕಾಲ್ ಪ್ರೀತಿಯ ವ್ಯಾಮೋಹಕ್ಕೆ ತಿರುಗಿ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. 15ದಿನದ ಹಿಂದೆ ಕುಡಿದ ಮತ್ತಿನಲ್ಲಿ ರಘು ನಿಂದಿಸಿದ್ದಕ್ಕೆ ರಘುವನ್ನ ತೊರೆದು ರಾಧಾ ಮನೆ ಬಿಟ್ಟು ಚಂದ್ರಶೇಖರ್ ಜೊತೆ ವಾಸವಿದ್ದರು.
ಪತ್ನಿ ರಾಧಾ ನಡೆಯಿಂದ ಹೈರಾಣಾದ ಪತಿ ರಘು ತನ್ನ ತಮ್ಮ ದೀಪುನನ್ನು ಜೊತೆಯಲ್ಲಿ ಕರೆದುಕೊಂಡು ಪತ್ನಿ ಹಾಗೂ ಆಕೆಯ ಪ್ರಿಯಕರ ವಾಸವಿದ್ದ ಮಾದವಾರಕ್ಕೆ ಬಂದು ಜಗಳ ಪ್ರಾರಂಭಿಸಿದ್ದಾನೆ. ಈ ನಡುವೆ ಜಗಳ ವಿಕೋಪಕ್ಕೆ ತಿರುಗಿ ಮನೆಯ ಬಳಿಯೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಅಲ್ಲಿಂದ ನಾಲ್ಕು ಜನ ಚೆನ್ನಾದೇವಿ ಅಗ್ರಹಾರಕ್ಕೆ ಹೋಗುತ್ತಾರೆ. ಅಲ್ಲಿ ಮತ್ತೆ ಗಲಾಟೆ ನಡೆದು ಚಂದ್ರಶೇಖರ್‌ಗೆ ಮಾರಣಾಂತಿಕ ಗಾಯಗಳಾಗುತ್ತವೆ.
ಆಗ ಮೃತ ಚಂದ್ರಶೇಖರ್ ಸಾಯುತ್ತಾನೆ ಎನ್ನುವ ಭಯದಲ್ಲಿ ಸ್ವತಃ ರಘು ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸುತ್ತಾನೆ. ಆಸ್ಪತ್ರೆಯಲ್ಲಿ ಅಪಘಾತ ಎಂದು ಬಿಂಬಿಸುವ ಮುಖಾಂತರ ಚಂದ್ರಶೇಖರ್ನನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ಅದ್ರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ್ ಕೊನೆಯುಸಿರು ಎಳೆಯುತ್ತಾನೆ.
ಆ ಬಳಿಕ ಅಲ್ಲಿಂದ ರಘು ಕಾಲ್ಕಿತ್ತಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Published On - 11:17 am, Tue, 2 June 20