ದರೋಡೆಗೆ ಸಂಚು ರೂಪಿಸಿದ್ದ 5 ಆರೋಪಿಗಳು ಸಿಸಿಬಿ ಬಲೆಗೆ
ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯಲಹಂಕದ ಅಳ್ಳಾಳಸಂದ್ರದಲ್ಲಿ ನಗರಾಜ್, ಶ್ರೇಯಸ್, ನಂದನ್ ಪ್ರೇಮ್‌ಕುಮಾರ್, ಕೆವಿನ್ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ರಾತ್ರಿ ಹೊತ್ತು ಓಡಾಡುವವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಅವರಿಂದ ಚಿನ್ನಾಭರಣ ಸೇರಿ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು. ನಿನ್ನೆ ಯಲಹಂಕದ ಅಳ್ಳಾಳಸಂದ್ರದ ಕೆರೆ ಬಳಿ ದರೋಡೆಗೆ ಸಂಚು ರೂಪಿಸಿದ್ದರು. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯಲಹಂಕದ ಅಳ್ಳಾಳಸಂದ್ರದಲ್ಲಿ ನಗರಾಜ್, ಶ್ರೇಯಸ್, ನಂದನ್ ಪ್ರೇಮ್‌ಕುಮಾರ್, ಕೆವಿನ್ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಇವರು ರಾತ್ರಿ ಹೊತ್ತು ಓಡಾಡುವವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಅವರಿಂದ ಚಿನ್ನಾಭರಣ ಸೇರಿ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು. ನಿನ್ನೆ ಯಲಹಂಕದ ಅಳ್ಳಾಳಸಂದ್ರದ ಕೆರೆ ಬಳಿ ದರೋಡೆಗೆ ಸಂಚು ರೂಪಿಸಿದ್ದರು. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 10:33 am, Tue, 26 May 20