ಬೆಂಗಳೂರು: ಕಿಡ್ನಾಪರ್ಸ್ಗೆ ಸಾಥ್ ನೀಡಿದ್ದ ಪ್ರೋಬೇಶನರಿ ಪಿಎಸ್ಐ ಅರೆಸ್ಟ್
ಪ್ರೋಬೇಶನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದರು. ಈ ವೇಳೆ ಸಿದ್ಧಾರೂಢ ಅವರಿಗೆ ರಾಜ್ ಕಿಶೋರ್ ಪರಿಚಯವಾಗುತ್ತದೆ. ತಾನು ಹೋಮ್ ಗಾರ್ಡ್ ಎಂದು ರಾಜ್ ಕಿಶೋರ್ ಪರಿಚಯಿಸಿಕೊಂಡಿದ್ದನು. ಇಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಇದೇ ವರ್ಷ ಜುಲೈ 20 ರಾಜ್ ಕಿಶೋರ್ ಪ್ರೋಬೇಶನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಅವರ ಠಾಣೆಗೆ ಬಂದಿದ್ದನು. ಇವರಿಬ್ಬರ ಸ್ನೇಹದಿಂದ ಮುಂದೆಯಾದ ಅನಾಹುತವೇನು? ಈ ಸ್ಟೋರಿ ಓದಿ
ಬೆಂಗಳೂರು ನ.20: ಕಿಡ್ನಾಪರ್ಸ್ಗೆ (Kidnappers) ಸಾಥ್ ನೀಡಿದ ಆರೋಪದ ಮೇಲೆ ಪ್ರೋಬೇಶನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಅವರನ್ನು ಸಿಸಿಬಿ (CCB) ಪೊಲೀಸರು (Police) ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಲ್ಲಾಬಾಕಾಶ್ ಮತ್ತು ರಾಜ್ ಕಿಶೋರ್ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಪ್ರೋಬೇಶನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದರು. ಈ ವೇಳೆ ಸಿದ್ಧಾರೂಢ ಅವರಿಗೆ ರಾಜ್ ಕಿಶೋರ್ ಪರಿಚಯವಾಗುತ್ತದೆ. ತಾನು ಹೋಮ್ ಗಾರ್ಡ್ ಎಂದು ರಾಜ್ ಕಿಶೋರ್ ಪರಿಚಯಿಸಿಕೊಂಡಿದ್ದನು. ಇಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಇದೇ ವರ್ಷ ಜುಲೈ 20 ರಾಜ್ ಕಿಶೋರ್ ಪ್ರೋಬೇಶನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಅವರ ಠಾಣೆಗೆ ಬಂದಿದ್ದನು.
ಈ ವೇಳೆ ಸಿದ್ಧಾರೂಢ ಬಿಜ್ಜಣನವರ್ ಬೈಕ್ ಸ್ಟಾರ್ಟ್ ಮಾಡಲು ಯತ್ನಸುತ್ತಿದ್ದರು. ಇದನ್ನು ಕಂಡ ರಾಜ್ ಕಿಶೋರ್ “ನಾನು ತಾನೆ ರಿಪೇರಿ ಮಾಡಿಸುತ್ತೇನೆ ಎಂದು ಸಿದ್ದಾರೂಢ ಅವರಿಗೆ ಹೇಳಿದ್ದಾನೆ. ಅಲ್ಲದೆ ಇದೇ ವೇಳೆ ನಮ್ಮ ಅಣ್ಣನಿಗೆ, ಕಾರ್ತಿಕ್ ಎಂಬಾತ ಹಣ ನೀಡಬೇಕು, ನೀವು ಬಂದು ಹಣ ಕೊಡಿಸಿ ಸರ್ ಎಂದು ಮನವಿ ಮಾಡಿದ್ದಾನೆ.
ರಾಜ್ ಕಿಶೋರ್ ಮಾತನಿಗೆ ಒಪ್ಪಿ ಪ್ರೋಬೇಶನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಕಾನ್ಸ್‌ಟೇಬಲ್ ಅಲ್ಲಾಬಾಕಾಶ್ ಸ್ಥಳಕ್ಕೆ ಹೋಗಿದ್ದಾರೆ. ಬಳಿಕ ಕಾರ್ತಿಕ್ನನ್ನು ಹೆಚ್ಎಸ್ಆರ್ ಲೇಔಟ್ನಿಂದ ಕಿಡ್ನಾಪ್ ಮಾಡಿದ್ದಾರೆ. ಬಳಿಕ ಕೆಜಿ ಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆರೋಪಿಗಳು ಕಾರ್ತಿಕ್ಗೆ ಒಂದುವರೆ ಕೋಟಿ ಕ್ರಿಪ್ಟೊ ಕರೆನ್ಸಿ ಮತ್ತು 20 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಬೆದರಿದ ಕಾರ್ತಿಕ್ ಆರೋಪಿಗಳ ಅಕೌಂಟ್ಗೆ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ವಹಿವಾಟು ನಡೆಸುತ್ತಿದ್ದ ಜಾಲ ಭೇದಿಸಿದ ಸಿಸಿಬಿ
ಘಟನೆ ಬಳಿಕ ಕಾರ್ತಿಕ್ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಜಿಹಳ್ಳಿ ಪೊಲೀಸರು ತನಿಖೆ ಸರಿಯಾಗಿ ನಡೆಸದ ಕಾರಣ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಘಟನೆಯಲ್ಲಿ ಸಿದ್ಧಾರೂಢ ಬಿಜ್ಜಣ್ಣನವರ್ ಕೂಡ ಶಾಮಿಲಾಗಿರುವುದನ್ನು ಪತ್ತೆ ಹಚ್ಚುತ್ತಾರೆ. ಬಳಿಕ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಮೂವರು ಅರೆಸ್ಟ್ ಮಾಡುತ್ತಾರೆ. ಅಲ್ಲದೆ ಆರೋಪಿಗಳ ಅಕೌಂಟ್ನಲ್ಲಿದ್ದ 20 ಲಕ್ಷ ರೂ. ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಬಂಧಿತರಾಗಿದ್ದ ವಂಶಿ ಕೃಷ್ಣ. ವಿನೋದ್ ನಾಯಕ, ಕಿರಣ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದೀಗ ಸಿಸಿಬಿ ಪೊಲೀಸರು ಇವರ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಕರಣದ ತನಿಖೆ ನಡೆದಿದ್ದು, ನಾಲ್ವರು ಅರೋಪಿಗಳು ಬಂಧಿಸಿದ್ದೇವೆ: ಸಿಸಿಬಿ ಡಿಸಿಪಿ
ಪ್ರಕರಣ ಸಂಬಂಧ ಸಿಸಿಬಿ ಡಿಸಿಪಿ ಆರ್ ಶ್ರೀನಿವಾಸ ಗೌಡ ಮಾತನಾಡಿ ” ಪ್ರಕರಣದ ತನಿಖೆ ನಡೆದಿದೆ. ನಾಲ್ವರು ಅರೋಪಿಗಳು ಬಂಧಿಸಿದ್ದೇವೆ. ಪ್ರಕರಣದಲ್ಲಿ ಕಿಡ್ಯ್ನಾಪ್ ಮಾಡಿ ಹಣ ವಸೂಲಿ ಮಾಡಲು ಸಹಕರಿಸಿದ್ದ ಒರ್ವ ಪಿಎಸ್ಐ, ಒರ್ವ ಪಿಸಿ ಸೇರಿದಂತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಸುಮಾರು ಒಂದುವರೆ ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಮತ್ತು ಇಪತ್ತು ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ಉಳಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Mon, 20 November 23