ಬೆಂಗಳೂರು: ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡೀಶೀಟರ್ ಉಲ್ಲಾಳ ಕಾರ್ತಿಕ್ನನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. ಕಾರ್ತಿಕ್ ವಿರುದ್ಧ ಪಶ್ಚಿಮ ವಿಭಾಗದ ಅನೇಕ ಠಾಣೆಗಳಲ್ಲಿ ಪ್ರಕರಣಗಳಿದೆ ಎಂದು ತಿಳಿದುಬಂದಿದೆ.
ನಗರದ ಪಶ್ಚಿಮ ವಿಭಾಗ ಹಾಗೂ ರಾಮನಗರದಲ್ಲಿ ಆ್ಯಕ್ಟಿವ್ ಆಗಿದ್ದ ಆರೋಪಿ ಉಲ್ಲಾಳ ಕಾರ್ತಿಕ್ನನ್ನು ಪೊಲೀಸರು ಬಂಧಿಸಿದ್ದು, ಡ್ರಗ್ಸ್ ಸರಬರಾಜಿನಲ್ಲಿಯೂ ಈತ ತೊಡಗಿಸಿಕೊಂಡಿದ್ದ ಎಂದು ಹೇಳಲಾಗಿದೆ. ಬಂಧಿತನ ವಿರುದ್ಧ 5 ಕೊಲೆ, 3 ಕೊಲೆಯತ್ನ, 4 NDPS ಪ್ರಕರಣಗಳು ದಾಖಲಾಗಿದೆ. ಜೊತೆಗೆ, ಪೊಲೀಸರ ಮೇಲೆ ಹಲ್ಲೆ ಸಂಬಂಧ 2 ಪ್ರಕರಣಗಳು ದಾಖಲಾಗಿದ್ದು ಸದ್ಯ ಸಿಸಿಬಿ ಪೊಲೀಸರು ಕಾರ್ತಿಕ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
ದರೋಡೆಗೆ ಸ್ಕೆಚ್ ಹಾಕಿದ್ದ ನಟೋರಿಯಸ್ ರೌಡಿ RX ರವಿ ಬಂಧನ