ವ್ಯಕ್ತಿಯೊಬ್ಬ ಕ್ಲುಲ್ಲಕ ಕಾರಣಕ್ಕೆ ಅಪ್ಪ, ಅಮ್ಮ, ಅಜ್ಜಿಯನ್ನು ಕೊಂದು, ದೇಹವನ್ನು ಸುಟ್ಟು ಹಾಕಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಉದಿತ್ ಭೋಯ್ ಮಾದಕ ವ್ಯಸನಿಯಾಗಿದ್ದು, ತಂದೆ ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಮನೆಯಲ್ಲಿದ್ದವರನ್ನೆಲ್ಲಾ ಹತ್ಯೆ ಮಾಡಿದ್ದಾನೆ.ಬಳಿಕ ಮೂವರ ದೇಹವನ್ನೂ ಮನೆಯ ಹಿಂಭಾಗ ಸುಟ್ಟು ಹಾಕಿದ್ದಾನೆ. ಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪುಟ್ಕಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 24 ವರ್ಷದ ಉದಿತ್ ಭೋಯ್ ಎಂದು ಗುರುತಿಸಲಾಗಿದ್ದು, ಮಾದಕ ವ್ಯಸನಿಯಾಗಿದ್ದು, ತಂದೆ ಹಣ ನಿರಾಕರಿಸಿದ ನಂತರ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ತಂದೆ ಪ್ರಭಾತ್ ಭೋಯ್ ತನ್ನ ಪತ್ನಿ, ತಾಯಿ ಮತ್ತು ಮಗನೊಂದಿಗೆ ವಾಸವಾಗಿದ್ದರು. ಉದಿತ್ ತನ್ನ ತಂದೆ-ತಾಯಿ ಮತ್ತು ಅಜ್ಜಿ ಮಲಗಲು ಹೋದಾಗ ಕೊಂದಿದ್ದಾನೆ. ದೊಣ್ಣೆಯಿಂದ ತಂದೆಯ ತಲೆಗೆ ಹೊಡೆದು ನಂತರ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಲಾಟೆಯಿಂದ ಎಚ್ಚರಗೊಂಡ ಅಜ್ಜಿ ಮೇಲೂ ಉದಿತ್ ಹಲ್ಲೆ ನಡೆಸಿದ್ದಾನೆ.
ಮತ್ತಷ್ಟು ಓದಿ: Mumbai: ತನ್ನ 2 ವರ್ಷದ ಮಗುವನ್ನು ಹತ್ಯೆ ಮಾಡಿ, ನದಿಗೆ ಎಸೆದ ಪಾಪಿ ತಂದೆ
ನಂತರ ಅವರ ಶವಗಳನ್ನು ಮನೆಯ ಬಾತ್ ರೂಂನಲ್ಲಿ ಇರಿಸಿದ್ದರು. ಮರುದಿನ, ಉದಿತ್ ಮನೆಯ ಹಿತ್ತಲಿನಲ್ಲಿ ಮರ ಮತ್ತು ಸ್ಯಾನಿಟೈಸರ್ ಬಳಸಿ ದೇಹಗಳಿಗೆ ಬೆಂಕಿ ಹಚ್ಚಿದ್ದ. ನಂತರ ಉದಿತ್ ಅವರು ಮೇ 12 ರಂದು ಸಿಂಗ್‌ಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ಇನ್ನೊಬ್ಬ ಮಗ ಅಮಿತ್ ರಾಯ್ಪುರದಲ್ಲಿ ಓದುತ್ತಿದ್ದ, ಆತ ಎಲ್ಲರೂ ನಾಪತ್ತೆಯಾಗಿರುವ ಬಗ್ಗೆ ಅನುಮಾನಗೊಂಡಿದ್ದ.
ಅವರು ಪುಟ್ಕಾದಲ್ಲಿರುವ ಅವರ ನಿವಾಸಕ್ಕೆ ಬಂದಾಗ, ಹಿತ್ತಲಿನಲ್ಲಿ ರಕ್ತದ ಕಲೆಗಳು, ಸುಟ್ಟ ಜಾಗ ಜತೆಗೆ ಮತ್ತು ಮಾನವ ಮೂಳೆಗಳು ಕಂಡುಬಂದವು. ಪರಿಸ್ಥಿತಿಯಿಂದ ಆತಂಕಗೊಂಡ ಅಮಿತ್ ತಕ್ಷಣ ಸಿಂಗ್‌ಪುರ ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಉದಿತ್ ಭೋಯ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆರಂಭದಲ್ಲಿ ಪೊಲೀಸರಿಗೆ ಅಸ್ಪಷ್ಟ ಉತ್ತರ ನೀಡಿ ದಾರಿತಪ್ಪಿಸಲು ಯತ್ನಿಸಿದ ಆತ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ