ರಾತ್ರಿ ಹೊತ್ತು ಅದರಲ್ಲೂ ನಿರ್ಜನ ಪ್ರದೇಶಗಳಲ್ಲಿ ನೀವು ಹೋಗುತ್ತಿದ್ದೀರಿ ಎಂದಾದರೆ ಮೈಯೆಲ್ಲಾ ಕಣ್ಣಾಗಿರಬೇಕು. ಹೀಗೆ ತಂದೆ-ಮಗ ಇಬ್ಬರೂ ಹೋಗುತ್ತಿರುವಾಗ ಎದುರಿನಲ್ಲಿ ಹೋಗುತ್ತಿದ್ದ ಬೈಕ್ನಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ ಅವರ ಸಹಾಯಕ್ಕೆ ಇಬ್ಬರೂ ಧಾವಿಸಿದ್ದಾರೆ, ಆದರೆ ಅಲ್ಲಿ ನಡೆದಿದ್ದೇ ಬೇರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಈ ಘಟನೆ ನಡೆದಿದೆ, ಆ ಇಬ್ಬರು ಬೈಕ್ ಸವಾರರು ಬೇಕಂತಲೇ ಕೆಳಗೆ ಬಿದ್ದಿದ್ದರು. ಸಹಾಯಕ್ಕೆ ತಂದೆ-ಮಗ ಧಾವಿಸಿದಾಗ ಕೊರಳ ಬಳಿ ಚಾಕು ಇಟ್ಟು ಇಬ್ಬರ ಬಳಿ ಇದ್ದ ಹಣವೆನ್ನೆಲ್ಲಾ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರಸ್ವತಿ ನಗರ ಪ್ರದೇಶದಲ್ಲಿ ಮಧ್ಯರಾತ್ರಿಯಲ್ಲಿ ಘಟನೆ ಸಂಭವಿಸಿದೆ, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈ ಇಬ್ಬರು ತಂದೆ-ಮಗನ ಎದುರು ಬೀಳುವ ನಾಟವಾಡುತ್ತಾರೆ, ಹತ್ತಿರ ಹೋದಾಗ ಇದ್ದುದ್ದೆಲ್ಲವನ್ನೂ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೈಕ್ ಸವಾರರ ಹಿಂದೆ ಹೋಗುತ್ತಿದ್ದ ಸಂತ್ರಸ್ತರು ವಾಹನವನ್ನು ಮೇಲೆತ್ತಲು ಸಹಾಯ ಮಾಡಲು ಮುಂದಾದರು. ಆಗ ಚಾಕು ತೋರಿಸಿದ್ದಾರೆ.
ಮಗ ಓಡಿ ಹೋಗಿದ್ದಾನೆ, ಆದರೆ ತಂದೆಯನ್ನು ಹಿಡಿದುಕೊಂಡ ದುಷ್ಕರ್ಮಿಗಳು ನೆಲಕ್ಕೆ ದಬ್ಬಿದ್ದಾರೆ. ಆರೋಪಿಗಳ ಗುರುತು ಇನ್ನೂ ತಿಳಿದುಬಂದಿಲ್ಲ.
ಮತ್ತಷ್ಟು ಓದಿ: ಬೆಂಗಳೂರು: ದ್ವಿಚಕ್ರ ಸವಾರನಿಗೆ ಮಾರಕಾಸ್ತ್ರ ತೋರಿಸಿ ದರೋಡೆ! ಭೀತಿಗೊಳಿಸುವ ವಿಡಿಯೋ ಇಲ್ಲಿದೆ
ಇಬ್ಬರು ಯಾವುದೇ ದೂರು ದಾಖಲಿಸಿಲ್ಲವಾದರೂ ಘಟನೆಯ ಕುರಿತು ಸ್ಥಳಕ್ಕೆ ತೆರಳಿ ವಿಚಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಫೂಟೇಜ್‌ನಲ್ಲಿನ ದೃಶ್ಯಗಳು ಮಸುಕಾಗಿರುವುದರಿಂದ ಬೈಕ್‌ನ ಸಂಖ್ಯೆಯನ್ನು ಗಮನಿಸುವುದು ಕಷ್ಟಕರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Fri, 1 September 23