ಚಿಕ್ಕಮಗಳೂರು: ಪೊಲೀಸರಿಂದ ಅಮಾಯಕನ ಮೇಲೆ ಹಲ್ಲೆ ಆರೋಪ: ಇಬ್ಬರು ಕಾನ್ಸ್​ಟೇಬಲ್​​​ಗಳು ಸಸ್ಪೆಂಡ್​

| Updated By: ವಿವೇಕ ಬಿರಾದಾರ

Updated on: Feb 14, 2023 | 12:14 PM

ವ್ಯಕ್ತಿಯೋರ್ವನ ಮೇಲೆ ಅನವಶ್ಯಕವಾಗಿ ಹಲ್ಲೆ ಮಾಡಿದ ಆರೋಪದಡಿ, ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸ್​ ಪೇದೆ​​​ಗಳನ್ನು ಚಿಕ್ಕಮಗಳೂರು ಎಸ್​​​ಪಿ ಉಮಾ ಪ್ರಶಾಂತ್ ಸಸ್ಪೆಂಡ್ ಮಾಡಿದ್ದಾರೆ.

ಚಿಕ್ಕಮಗಳೂರು: ಪೊಲೀಸರಿಂದ ಅಮಾಯಕನ ಮೇಲೆ ಹಲ್ಲೆ ಆರೋಪ: ಇಬ್ಬರು ಕಾನ್ಸ್​ಟೇಬಲ್​​​ಗಳು ಸಸ್ಪೆಂಡ್​
ಮೂಡಿಗೆರೆ ಪೊಲೀಸ್​​ ಠಾಣೆ (ಎಡಚಿತ್ರ) ಸಂತ್ರಸ್ತನ ದೂರಿನ ಪ್ರತಿ (ಬಲಚಿತ್ರ)
Follow us on

ಚಿಕ್ಕಮಗಳೂರು: ವ್ಯಕ್ತಿಯೋರ್ವನ ಮೇಲೆ ಅನವಶ್ಯಕವಾಗಿ ಹಲ್ಲೆ ಮಾಡಿದ ಆರೋಪದಡಿ, ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸ್​ ಪೇದೆ​​​ಗಳನ್ನು ಚಿಕ್ಕಮಗಳೂರು ಎಸ್​​​ಪಿ ಉಮಾ ಪ್ರಶಾಂತ್ ಸಸ್ಪೆಂಡ್ ಮಾಡಿದ್ದಾರೆ. ವಸಂತ್​ ಮತ್ತು ಲೋಹಿತ್​​ ಅಮಾನತಾದ ಕಾನ್ಸ್​ಟೇಬಲ್​​​ಗಳು. ಹಾಗೇ ಮೂಡಿಗೆರೆ ಸಬ್​ಇನ್ಸ್​​ಪೆಕ್ಟರ್​ ಆದರ್ಶ​ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಏನಿದು ಘಟನೆ ?

ಕಳ್ಳತನ ಪ್ರಕರಣ ಸಂಬಂಧ ಪೊಲೀಸ್​ ಪೇದೆಗಳು ದಾರದಹಳ್ಳಿ ನಿವಾಸಿ ಮಂಜು ಎಂಬುವರನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆಂದು, ಮಂಜು ಪತ್ನಿ ಯಶೋಧ ಎಸ್​​ಪಿ ಉಮಾ ಪ್ರಶಾಂತ್ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಕಾನ್ಸ್​ಟೇಬಲ್​​​ಗಳನ್ನು ಸಸ್ಪೆಂಡ್​ ಮಾಡಿದ್ದು, ಸಬ್​ಇನ್ಸ್​​ಪೆಕ್ಟರ್​ ಆದರ್ಶ​ ವಿರುದ್ಧ ತನಿಖೆಗೆ ಆದೇಶ ನೀಡಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ, ಮಂಜುಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಡಿದ ಮತ್ತಿನಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ

ಬೆಂಗಳೂರು: ಕುಡಿದ ಮತ್ತಿನಲ್ಲಿ ಮಚ್ಚಿನಿಂದ ವ್ಯಕ್ತಿಯನ್ನು 21 ಬಾರಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಗರದ ಅಲಸಹಳ್ಳಿ ಮುಖ್ಯ ರಸ್ತೆಯ ಬಾರ್ ಬಳಿ ನಡೆದಿದೆ. ಕೊಲೆ ಮಾಡಿದ ದೃಶ್ಯ ಬಾರ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶ್ರೀಧರ್ ಕೊಲೆ ಆರೋಪಿ. ಮುನಿಯಪ್ಪ (45) ಕೊಲೆಯಾದ ವ್ಯಕ್ತಿ. ಶ್ರೀಧರ್ ಹಾಗೂ ಮುನಿಯಪ್ಪ ಒಂದೇ ಓಣಿಯಲ್ಲಿ ವಾಸವಿದ್ದರು. ಸದ್ಯ ವರ್ತೂರು ಠಾಣೆ ಪೊಲೀಸರು ಆರೋಪಿ ಶ್ರೀಧರ್​ನನ್ನು ಬಂಧಿಸಿದ್ದಾರೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮೇಲೆ ಜನ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ವಿಷ ಕುಡಿದಿದ್ದ ವ್ಯಕ್ತಿಯನ್ನು ಚಿಕಿತ್ಸೆಗೆ ಜನ ಕರೆದುಕೊಂಡು ಬಂದಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಪರಿಸ್ಥಿತಿ ಗಂಭೀರ ಇದೆ ಬೇರೆ ಆಸ್ಪತ್ರೆಗೆ ಹೋಗುವಂತೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆ ಆಸ್ಪತ್ರೆಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ರೋಗಿ ಸಾವನ್ನಪ್ಪಿದ್ದಾನೆ. ಹೀಗಾಗಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆಸ್ಪತ್ರೆಯ ಪೀಠೋಪಕರಣ ಧ್ವಂಸ ಮಾಡಲಾಗಿದೆ. ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ