ಪತ್ನಿಯನ್ನ ಹತ್ಯೆಗೈದು ಠಾಣೆಗೆ ಬಂದು ಶರಣಾದ ಪತಿ! ಅನುಮಾನ ಎಂಬ ಪಿಶಾಚಿಗೆ ಬಲಿಯಾದ್ಲಾ ಹೆಂಡತಿ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 22, 2023 | 4:38 PM

ಅವರಿಬ್ಬರು ಪತಿ-ಪತ್ನಿಯಾಗಿ ಬರೋಬ್ಬರಿ 25 ವರ್ಷಗಳ ದಾಂಪತ್ಯ ಜೀವನ ಮುಗಿಸಿದ್ದರು. ಆದ್ರೆ, ಇವತ್ತು ಬೆಳಿಗ್ಗೆ ಏಳುವಷ್ಟರಲ್ಲಿ ಅದೆನಾಯ್ತೋ ಗೊತ್ತಿಲ್ಲ. ಪತ್ನಿ ಮಾತ್ರ ಮಲಗಿದ್ದಲೇ ಭೀಕರ ಹತ್ಯೆಯಾಗಿದ್ದಳು. ಇತ್ತ ಪತ್ನಿಯನ್ನ ಕೊಂದವ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ. ಹಾಗಾದರೆ ಕೊಲೆಗೆ ಕಾರಣ ಏನು ಅಂತೀರಾ? ಇಲ್ಲಿದೆ.

ಪತ್ನಿಯನ್ನ ಹತ್ಯೆಗೈದು ಠಾಣೆಗೆ ಬಂದು ಶರಣಾದ ಪತಿ! ಅನುಮಾನ ಎಂಬ ಪಿಶಾಚಿಗೆ ಬಲಿಯಾದ್ಲಾ ಹೆಂಡತಿ?
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ, ಡಿ.22: ಜಿಲ್ಲೆಯ ಚಿಂಚೋಳಿ(Chincholi) ತಾಲೂಕಿನ ಅಲ್ಲಾಪುರ ಎಂಬ ಗ್ರಾಮದಲ್ಲಿ ಆರೋಪಿ ಮಾರುತಿ ಈಳಿಗೇರ್ ಎಂಬ ವ್ಯಕ್ತಿ. ತನ್ನ ಜೊತೆ ಹಲವು ವರ್ಷದಿಂದ ಸಂಸಾರ ಮಾಡಿದ್ದ ಪತ್ನಿಯನ್ನು ಕೊಚ್ಚಿ ಕೊಂದಿ(Murder)ದ್ದಾನೆ. ಬಳಿಕ ಸೀದಾ ರಟಕಲ್ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ.‌ ಇನ್ನು ಈ ಆಸಾಮಿ, ಈ ಇಳಿ ವಯಸ್ಸಿನಲ್ಲೂ ಪತ್ನಿಯ ಮೇಲೆ‌ ಅನುಮಾನ ಪಡುತ್ತಿದ್ದನಂತೆ. ಆ ಕಾರಣಕ್ಕಾಗಿಯೇ ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದ ಮಾರುತಿ, ನಿನ್ನೆ(ಡಿ.21) ರಾತ್ರಿಯೂ ಕುಡಿದು ಬಂದು ಜಗಳ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಬೆಳಿಗ್ಗೆ ಆಗುವುದರೊಳಗೆ ಪತ್ಮಿ ಹೆಣವಾಗಿ ಬಿಟ್ಟಿದ್ದಾಳೆ.

ಇನ್ನು ಮಾರುತಿ ಈಳಿಗೇರ್ ಹಾಗೂ ಕೊಲೆಯಾಗಿರುವ ಕಾಶಮ್ಮಗೆ ಮೂರು ಜನ ಮಕ್ಕಳಿದ್ದು, ಮಗಳು ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿದ್ದರೇ, ಇತ್ತ ಇಬ್ಬರು ಪುತ್ರರು ಇವನ ಉಪಟಳ ತಾಳದೇ ಮನೆ ಬಿಟ್ಟು ಬೇರೆ ಕಡೆ ಜೀವನ ನಡೆಸುತ್ತಿದ್ದರು. ಮೊದಲಿನಿಂದಲೂ ಜಗಳ ಮಾಡುತ್ತಿದ್ದ ಹಿನ್ನಲೆ ಇಬ್ಬರು ಇಬ್ಬರು ಮಕ್ಕಳು ಮನೆ ಬಿಟ್ಟು ಹೋಗಿದ್ದರು.‌ ನಾಲ್ಕು ಎಕರೆ ಜಮೀನು ಬಿಟ್ಟು ಕೂಲಿ ನಾಲಿ ಮಾಡಿಕೊಂಡು ಮಕ್ಕಳು ಜೀವನ ಮಾಡುತ್ತಿದ್ದರು. ಆದ್ರೆ, ಇಂದು ಬೆಳಿಗ್ಗೆ ಏಳುತ್ತಿದ್ದಂತೆ ಅಲ್ಲಾಪುರ ಗ್ರಾಮದಿಂದ ಪೋನ್ ಕರೆ ಬಂದಿದೆ. ಮನೆಯಲ್ಲಿ ತಾಯಿ ಹೆಣವಾಗಿದ್ದಾಳೆ ಎಂಬ ಮಾತು ಕೇಳುತ್ತಿದಂತೆ. ಮಕ್ಕಳು, ಸಂಬಂಧಿಕರು ಗ್ರಾಮಕ್ಕೆ ಬಂದಿದ್ದಾರೆ.‌

ಇದನ್ನೂ ಓದಿ:ಮಂಡ್ಯ: ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಗಲಾಟೆ; ರಾಡ್​​ನಿಂದ ಹೊಡೆದು ಪತ್ನಿಯ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಟಕಲ್ ಪೊಲೀಸರು, ತನೀಖೆ ನಡೆಸುತ್ತಿದ್ದಾರೆ‌. ಪತ್ನಿ ಕೊಂದಿರುವ ಮಾರುತಿ ಕಂಬಿ ಎಣಿಸುವಂತಾಗಿದ್ದರೆ, ಇತ್ತ ಇಳಿ ವಯಸ್ಸಿನ ಕೊಲೆ ನೋಡಿ ಗ್ರಾಮವೇ ಆತಂಕ ಪಟ್ಟಿದೆ. ಅದು ಏನೇ ಇರಲಿ ಕ್ಷುಲಕ್ಕ ಕಾರಣಕ್ಕಾಗಿ ಇಷ್ಟು ದಿನ ಕಷ್ಟ ಸುಖದಲ್ಲಿ ಸಂಗಾತಿಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿದ್ದು ನಿಜಕ್ಕೂ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ