AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಡಿ ಹೋದ ಪ್ರೇಮಿಗಳ ಕುಟುಂಬದ ನಡುವೆ ಗಲಾಟೆ; ನ್ಯಾಯ ಪಂಚಾಯ್ತಿ ಮಾಡಲು ಹೋಗಿ ಕೊಲೆಯಾದ

ಆ ಗ್ರಾಮದ ಪ್ರೇಮಿಗಳಿಬ್ಬರು ಏಕಾಏಕಿ ಗ್ರಾಮ ಬಿಟ್ಟು ಹೋಗಿದ್ದರು. ಪರಿಣಾಮ ಯುವಕ ಮತ್ತು ಯುವತಿಯ ಕುಟುಂಬಗಳ ನಡುವೆ ಗಲಾಟೆ ಜೋರಾಗಿತ್ತು. ಈ ಗಲಾಟೆ ಬಿಡಿಸಿ‌ ಬುದ್ಧಿವಾದ ಹೇಳಲು ಹೋದ ವ್ಯಕ್ತಿ ಮಾತ್ರ ಹಲ್ಲೆಗೊಳಗಾಗಿ ಬಲಿಯಾದ ಘಟನೆ ಕೋಟೆನಾಡಿನಲ್ಲಿ‌ ನಡೆದಿದೆ.

ಓಡಿ ಹೋದ ಪ್ರೇಮಿಗಳ ಕುಟುಂಬದ ನಡುವೆ ಗಲಾಟೆ; ನ್ಯಾಯ ಪಂಚಾಯ್ತಿ ಮಾಡಲು ಹೋಗಿ ಕೊಲೆಯಾದ
ಮೃತ ಬೊಮ್ಮಲಿಂಗಪ್ಪ(30)
TV9 Web
| Edited By: |

Updated on:Mar 03, 2023 | 2:19 PM

Share

ಚಿತ್ರದುರ್ಗ: ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಗೊಲ್ಲರಹಟ್ಟಿಯ ಪ್ರೇಮಜೋಡಿಯೊಂದು ನಿನ್ನೆ(ಫೆ.28) ಊರು ತೊರೆದಿದೆ. ಪರಿಣಾಮ ಯುವಕ ಮತ್ತು ಯುವತಿಯ ಕುಟುಂಬಗಳ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಗ್ರಾಮದ ಬೊಮ್ಮಲಿಂಗಪ್ಪ(30) ಗಲಾಟೆ ಬಿಡಿಸಿ ಬುದ್ದಿವಾದ ಹೇಳಿದ್ದಾನೆ. ಆದರೆ ಯುವತಿಯ ಪೋಷಕರಾದ ತಿಪ್ಪಯ್ಯ ಮತ್ತಿತರರು ಬೊಮ್ಮಲಿಂಗಪ್ಪ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಯುವಕ ಸಿದ್ದೇಶ ಕುಟುಂಬದ ಪರವಹಿಸಿದ್ದಾನೆಂದು ಭಾವಿಸಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ತಲೆ ಮತ್ತು ಎದೆ ಸೇರಿ ಗುಪ್ತಾಂಗ ಭಾಗಕ್ಕೆಲ್ಲಾ ಹೊಡೆದ ಕಾರಣಕ್ಕೆ ಬೊಮ್ಮಲಿಂಗಪ್ಪ ತೀವ್ರ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನ ಆಸ್ಪತ್ರೆಗೆ‌ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬೊಮ್ಮಲಿಂಗಪ್ಪ ಕೊನೆಯುಸಿರೆಳೆದಿದ್ದಾನೆ.

ಮೃತ ಬೊಮ್ಮಲಿಂಗಪ್ಪ ಪೈಪ್ ಲೈನ್ ಕೆಲಸ ಮಾಡಿಕೊಂಡು ಹಾಯಾಗಿದ್ದವನು. ತಾನಾಯ್ತು ತನ್ನ ಕೆಲಸವಾಯ್ತು ಎಂದು ಬದುಕಿದ್ದ ಸಜ್ಜನ ವ್ಯಕ್ತಿ. ಪುಟ್ಟ ಮಗುವಿನ ತಂದೆ ಆಗಿದ್ದ ಬೊಮ್ಮಲಿಂಗಪ್ಪ ತನ್ನದಲ್ಲದ ತಪ್ಪಿಗೆ ದುರಂತ ಸಾವಿಗೀಡಾಗಿದ್ದು ಕುಟುಂಬ ಕಂಗಾಲಾಗಿದೆ. ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Bengaluru: ಪ್ರೀತಿಸಿ ಅವೈಡ್ ಮಾಡಿದ ಪ್ರಿಯತಮೆ; ಮನಸೋ ಇಚ್ಛೆ ಇರಿದು ಯುವತಿಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ!

ಒಟ್ಟಾರೆಯಾಗಿ ಕೋಟೆನಾಡು‌ ಚಿತ್ರದುರ್ಗ ತಾಲೂಕಿನ ಜೋಡಿ‌ಚಿಕ್ಕೇನಹಳ್ಳಿ ಗೊಲ್ಲರಹಟ್ಟಿಯಲ್ಲಿ‌ ದುರಂತವೊಂದು ನಟೆದಿದೆ. ಅಮಾಯಕ ವ್ಯಕ್ತಿ‌ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾನೆ. ಪಾಪಿ ತಿಪ್ಪಯ್ಯ ಮತ್ತು ಇತರರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Fri, 3 March 23