ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕಣದಲ್ಲಿ ಜೈಲುಪಾಲಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ (Muruga Mutt Shivamurthy Sharan) ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸರಿಂದ ಇಂದು(ಅಕ್ಟೋಬರ್ 27) 694 ಪುಟದ ಚಾರ್ಜ್‌ಶೀಟ್ ಕೋರ್ಟ್ಗೆ ಸಲ್ಲಿಕೆಯಾಗಿದೆ.
2ನೇ ಪೊಕ್ಸೊ ಪ್ರಕರಣ: ಜಿಲ್ಲಾ ನ್ಯಾಯಾಧೀಶರ ಎದುರು ಸಂತ್ರಸ್ತ ಬಾಲಕಿಯರ ಹೇಳಿಕೆ, ಜಾಮೀನು ವಿಚಾರಣೆ ಮುಂದೂಡಿಕೆ
ಸದ್ಯಕ್ಕೆ ಶ್ರೀಗಳೂ ಸೇರಿ ಮೂವರ ವಿರುದ್ಧ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. 2 ತಿಂಗಳ ಬಳಿಕ ಒಂದು ಹಂತದ ಎ1 ಆರೋಪಿ ಮುರುಘಾಶ್ರೀ, ಎ2 ಲೇಡಿ ವಾರ್ಡನ್ ಮತ್ತು ಎ3 ಪರಮಶಿವಯ್ಯ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ರೆ, ಎ3 ಕಿರಿಯ ಸ್ವಾಮೀಜಿ ಹಾಗೂ ಎ5 ಗಂಗಾಧರ್ ವಿರುದ್ಧ ಸಹ ಆರೋಪ ಕೇಳಿಬಂದಿದ್ದು, ದೌರ್ಜನ್ಯದಲ್ಲಿ ಈ ಇಬ್ಬರೂ ಭಾಗಿದಾರಿಕೆ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ಆಗಸ್ಟ್ 28ರಂದು ಮುರುಘಾಶ್ರೀ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿತ್ತು. ಬಳಿಕ ಚಿತ್ರದುರ್ಗ ಪೊಲೀಸರು ಸೆಪ್ಟೆಂಬರ್ 1ರಂದು ಮುರುಘಾಶ್ರೀಗಳನ್ನು ಬಂಧಿಸಿದ್ದರು. ಇದೀಗ 2 ತಿಂಗಳ ಬಳಿಕ ಒಂದು ಹಂತದ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಪೊಲೀಸರು ಬರೋಬ್ಬರಿ 694 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಏನೆಲ್ಲ ಅಂಶಗಳನ್ನು ಉಲ್ಲೇಖಿಸಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
Published On - 7:53 pm, Thu, 27 October 22