ಎತ್ತು ಮಾರುವ ವಿಚಾರವಾಗಿ ಅಣ್ಣ ತಮ್ಮನ ನಡುವೆ ಜಗಳ; ಚಾಕುವಿನಿಂದ ಇರಿದು ತಮ್ಮನಿಂದಲೇ ಅಣ್ಣನ ಭೀಕರ ಕೊಲೆ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 19, 2022 | 4:59 PM

ಬಸ್​ಗಾಗಿ ಕಾಯುತ್ತಿದ್ದ ಯುವತಿ ಜೊತೆ ಅನುಚಿತವಾಗಿ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಸಾರ್ವಜನಿಕರು ಥಳಿಸಿರುವಂತಹ ಘಟನೆ ಉಡುಪಿಯ ಪುರಭವನ ಬಳಿ ನಡೆದಿದೆ.

ಎತ್ತು ಮಾರುವ ವಿಚಾರವಾಗಿ ಅಣ್ಣ ತಮ್ಮನ ನಡುವೆ ಜಗಳ; ಚಾಕುವಿನಿಂದ ಇರಿದು ತಮ್ಮನಿಂದಲೇ ಅಣ್ಣನ ಭೀಕರ ಕೊಲೆ
ತಮ್ಮ ಬಸವರಾಜ್​, ಅಣ್ಣ ಮೈಲಾರಿ
Follow us on

ರಾಯಚೂರು: ಎತ್ತು ಮಾರಬೇಡ ಅದರಿಂದಲೇ ಕೃಷಿ ಮಾಡುತ್ತೇನೆ ಅಂದಿದ್ದಕ್ಕೆ ಚಾಕುವಿನಿಂದ ಇರಿದು ತಮ್ಮನಿಂದಲೇ ಅಣ್ಣನ ಭೀಕರ ಕೊಲೆ (Murder) ಯಾಗಿರುವಂತಹ ಘಟನೆ ಮಾರ್ಚ್ 19ರಂದು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮದರಕಲ್​ನಲ್ಲಿ ನಡೆದಿದೆ. ಮೈಲಾರಿ(38) ಕೊಲೆಯಾದ ಅಣ್ಣ ಅಣ್ಣನನ್ನು ಹತ್ಯೆ ಮಾಡಿದ್ದ ಆರೋಪಿ ತಮ್ಮ ಬಸವರಾಜ್​ನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿಗೆ ಕೆಲಸಕ್ಕೆಂದು ಗೂಳೆ ಹೋಗಿದ್ದ ಮೈಲಾರಿ ಹಾಗೂ ಪತ್ನಿ ಮಾನಮ್ಮ ದಂಪತಿ, ಆಗಾಗ ಮದರಕಲ್ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಪದೇ ಪದೇ ಕರೋನಾ ಲಾಕ್ ಡೌನ್ ಹಿನ್ನೆಲೆ ಕಳೆದ ವರ್ಷ ಬೆಂಗಳೂರು ಬಿಟ್ಟು ಮದರಕಲ್ ಗ್ರಾಮಕ್ಕೆ ಶಿಫ್ಟ್ ಆಗಿದ್ದ. ಆತ ಬೆಂಗಳೂರಿನಲ್ಲಿದ್ದಾಗ ಗ್ರಾಮದಲ್ಲಿ ತಮ್ಮ ಬಸವರಾಜ್ ಕೃಷಿ ಕೆಲಸ ನೋಡಿಕೊಳ್ಳುತ್ತಿದ್ದ. ಆ ಬಳಿಕ ಇನ್ಮುಂದೆ ನಾನೇ ಜಮೀನಿನಲ್ಲಿ ಉಳಿಮೆ ಮಾಡುತ್ತೇನೆ ಎಂದು ಮೈಲಾರಿ ಹೇಳಿದ್ದ. ಇದೇ ಮಾರ್ಚ್ 19 ರಂದು ಕದ್ದು ಮುಚ್ಚಿ ಎತ್ತುಗಳ ಮಾರಾಟಕ್ಕೆ ಹೋಗಿದ್ದ ತಮ್ಮ ಬಸವರಾಜ್, ಇದೇ ಕಾರಣಕ್ಕೆ ಮೈಲಾರಿ ಹಾಗೂ ಬಸವರಾಜ್ ನಡುವೆ ಗಲಾಟೆಯಾಗಿದೆ. ಈ ವೇಳೆ ಅಣ್ಣನ ಮೇಲೆ ಅಟ್ಯಾಕ್ ಮಾಡಿ, ಚಾಕುವಿನಿಂದ ಇರಿದು ಬಸವರಾಜ್ ಕೊಂದಿದ್ದಾನೆ. ನಂತರ ಅತ್ತಿಗೆ ಮಾನಮ್ಮಳಿಗೆ ಆಸ್ತಿ ಕೊಡ್ತಿನಿ ದೂರು ನೀಡಬೇಡ ಅಂತ ಆರೋಪಿ ಪುಸಲಾಯಿಸಿದ್ದಾನೆ. ಈ ಬಗ್ಗೆ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಸಾರ್ವಜನಿಕರಿಂದ ಥಳಿತ;

ಉಡುಪಿ: ಬಸ್​ಗಾಗಿ ಕಾಯುತ್ತಿದ್ದ ಯುವತಿ ಜೊತೆ ಅನುಚಿತವಾಗಿ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಸಾರ್ವಜನಿಕರು ಥಳಿಸಿರುವಂತಹ ಘಟನೆ ಉಡುಪಿಯ ಪುರಭವನ ಬಳಿ ನಡೆದಿದೆ. ನೀಲ್ ಗಾಮಾ ಎಂಬಾತನಿಂದ ಯುವತಿಗೆ ಕಿರುಕುಳ ನೀಡಲಾಗಿದೆ. ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯ ಮೇಲೆ ಕಾಮುಕರು ಮುಗಿಬಿದಿದ್ದು, ಕೂಡಲೇ ರಕ್ಷಣೆಗಾಗಿ ವಿದ್ಯಾರ್ಥಿನಿ ಬೊಬ್ಬೆ ಹೊಡೆದಿದ್ದಾಳೆ. ಸಹಾಯಕ್ಕಾಗಿ ಸಾರ್ವಜನಿಕರು ಧಾವಿಸಿದ್ದು, ಕಾಮುಕನಿಗೆ ಬಿಸಿಬಿಸಿ ಕಜ್ಜಾಯ ಕೊಟ್ಟು ಪೊಲೀಸ್ ಜೀಪು ಹತ್ತಿಸಿದ್ದಾರೆ. ಆರೋಪಿಯನ್ನು ಉಡುಪಿ ಮಹಿಳಾ ಠಾಣೆಗೆ ಒಪ್ಪಿಸಲಾಗಿದೆ.

ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿಟ್ಟಗೊಂಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ರಂಭಾ(21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಡಿಕೆ ತಟ್ಟೆ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೇಪಾಳಿ ಮೂಲದ ಗಣೇಶ್ ಭಂಡಾರಿ ಎಂಬುವರ ಪತ್ನಿ ರಂಭಾ 21 ನೇಣಿಗೆ ಶರಣಾಗಿದ್ದಾರೆ. ರಂಭಾ ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದರು ಎನ್ನಲಾಗಿದೆ. ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ಸಾವು:
ತುಮಕೂರು ತಾಲೂಕಿನ ನಂದಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮೇಲ್ಸೇತುವೆ ಕಂಬಿಗಳಿಗೆ ಬೈಕ್ ಡಿಕ್ಕಿ ಹೊಡೆದು ವೈದ್ಯ ವಿದ್ಯಾರ್ಥಿ ಮೋಕ್ಷಿತ್ ಹೆಗಡೆ(21) ಮೃತಪಟ್ಟಿದ್ದಾರೆ. ತಿಪಟೂರು ತಾಲೂಕಿನ ರಾಮಚಂದ್ರಪುರ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿಗೆ ತೆರಳುವಾಗ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:

ಇನ್ಮುಂದೆ ಹೋಟೆಲುಗಳಲ್ಲಿ ರಾತ್ರಿ ಹೊತ್ತು ಸಹ ಸಿಗಲಿದೆ ಊಟ-ತಿಂಡಿ: ರಾಜ್ಯ ಸರ್ಕಾರ ಹೊಸ ಆದೇಶ, ಇನ್ನೂ ಏನೇನು ತೆರೆದಿರುತ್ತೆ?