IPL 2022: ನೀನು ಹೇಳಿದಂತೆ ಮಾಡಿದ್ದೇನೆ…ಅಕ್ಕನಿಗೆ ಹರ್ಷಲ್ ಪಟೇಲ್ ಭಾವುಕ ಸಂದೇಶ
IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
IPL 2022: ಐಪಿಎಲ್ ಸೀಸನ್ 15 ವೇಳೆ ಕೇಳಿ ಬಂದ ಆಘಾತಕಾರಿ ಸುದ್ದಿ ಎಂದರೆ ಹರ್ಷಲ್ ಪಟೇಲ್ (Harshal Patel) ಅವರ ಸಹೋದರಿ ಅರ್ಚಿತಾ ಪಟೇಲ್ ಅವರ ನಿಧನ. ಏಪ್ರಿಲ್ 9 ರಂದು ಹರ್ಷಲ್ ಅವರ ಸಹೋದರಿ ವಿಧಿವಶರಾಗಿದ್ದರು. ಇತ್ತ ಅಂದು ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯವಾಡುತ್ತಿದ್ದ ಪಟೇಲ್, ಮ್ಯಾಚ್ ಮುಗಿಯುತ್ತಿದ್ದಂತೆ ಮನೆಗೆ ಹಿಂತಿರುಗಿದ್ದರು. ಅಲ್ಲದೆ ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾಗ್ಯೂ ಒಂದೇ ವಾರದಲ್ಲಿ ಹರ್ಷಲ್ ಪಟೇಲ್ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದರು. ಅಂದರೆ ಸಹೋದರಿಯ ವಿಧಿಕಾರ್ಯಗಳನ್ನು ಮುಗಿಸಿ ಹರ್ಷಲ್ ಪಟೇಲ್ ಕ್ವಾರಂಟೈನ್ಗೆ ಒಳಗಾಗಿದ್ದರು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸಿದ್ದರು.
ಸಹೋದರಿ ನಿಧನರಾದ ಒಂದೇ ವಾರದೊಳಗೆ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ಖುದ್ದು ಹರ್ಷಲ್ ಪಟೇಲ್ ಬಹಿರಂಗಪಡಿಸಿದ್ದಾರೆ. ಅದು ಕೂಡ ಅಕ್ಕನಿಗೆ ಬರೆದ ಭಾವುಕ ಸಂದೇಶದ ಮೂಲಕ ಎಂಬುದು ವಿಶೇಷ. ಹರ್ಷಲ್ ಪಟೇಲ್ ಅವರ ಭಾವುಕ ಸಂದೇಶ ಹೀಗಿದೆ….
ಅಕ್ಕ, ನಮ್ಮ ಜೀವನದ ಅತ್ಯಂತ ಕರುಣಾಮಯಿ ಮತ್ತು ಅತ್ಯಂತ ಸಂತೋಷದಾಯಕ ವ್ಯಕ್ತಿಗಳಲ್ಲಿ ನೀವು ಒಬ್ಬರು. ನಿಮ್ಮ ಕೊನೆಯ ಉಸಿರಿನವರೆಗೂ ನಗುವಿನೊಂದಿಗೆ ನೀವು ಜೀವನದಲ್ಲಿ ನಂಬಲಾಗದ ಕಷ್ಟಗಳನ್ನು ಎದುರಿಸಿದ್ದೀರಿ. ನಾನು ಭಾರತಕ್ಕೆ ಹಿಂತಿರುಗುವ ಮೊದಲು ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಇದ್ದಾಗ ನೀವು ನನ್ನ ಆಟದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದೀರಿ. ಆ ಮಾತುಗಳೇ ನಾನು ಶೀಘ್ರವಾಗಿ ಮತ್ತೆ ಮೈದಾನಕ್ಕಿಳಿಯಲು ಕಾರಣ. ನಿನ್ನನ್ನು ನೆನಪಿಸಿಕೊಳ್ಳಲು ಮತ್ತು ಗೌರವಿಸಲು ಇದನ್ನಷ್ಟೇ ಮಾಡಬಲ್ಲೆ. ನೀವು ನನ್ನ ಬಗ್ಗೆ ಹೆಮ್ಮೆಪಡುವಂತಹ ಕೆಲಸವನ್ನು ಮಾಡುವುದುನ್ನು ಮುಂದುವರಿಸುತ್ತೇನೆ. ನನ್ನ ಜೀವನದ ಪ್ರತಿ ಕ್ಷಣದಲ್ಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಲವ್ ಯು ಸೋ ಮಚ್..ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಹರ್ಷಲ್ ಪಟೇಲ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಅಕ್ಕನ ಮಾತಿನಂತೆ ಹರ್ಷಲ್ ಪಟೇಲ್ ಒಂದೇ ವಾರದೊಳಗೆ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಸ್ಲೋ ವೇರಿಯೇಷನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಿದ್ದಾರೆ. ಸದ್ಯ 5 ಪಂದ್ಯಗಳಿಂದ 6 ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಇದುವರೆಗೆ 20 ಓವರ್ಗಳಲ್ಲಿ ನೀಡಿದ್ದು ಕೇವಲ 128 ರನ್ಗಳು ಮಾತ್ರ ಎಂಬುದು ವಿಶೇಷ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ
Published On - 4:52 pm, Tue, 19 April 22