ಕೋಲಾರ, ಜೂ.22: ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಓರ್ವ ಸ್ವಾಮೀಜಿ ಕೊಲೆಯಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು(Malur) ತಾಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮ(Ananda Marga Ashrama)ದಲ್ಲಿ ನಡೆದಿದೆ. ‘ಆಚಾರ್ಯ ಚಿನ್ಮಯಾನಂದ’ (65) ಹತ್ಯೆಯಾದ ಸ್ವಾಮೀಜಿ. ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪಿನಿಂದ ಹತ್ಯೆ ನಡೆದಿದೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಲೂರು ತಾಲ್ಲೂಕು ಸಂತಳ್ಳಿ ಗ್ರಾಮದ ನಾಲ್ಕು ಎಕರೆ ಆಶ್ರಮದ ಜಾಗಕ್ಕಾಗಿ ಬಹುದಿನಗಳಿಂದ ವಿವಾದ ನಡೆಯುತ್ತಿತ್ತು. ಕಳೆದ ಹಲವು ವರ್ಷಗಳಿಂದ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಬೆಳಿಗ್ಗೆ ಕೋರ್ಟ್ಗೆ ದಾಖಲೆ ಸಹಿತ ಹೋಗುವ ವೇಳೆ ಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಚಿನ್ಮಯಾನಂದ ಅವರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆ ಫಲಿಸಿದೇ ಕೊನೆಯುಸಿರೆಳೆದಿದ್ದಾರೆ. ಇದೀಗ ಆರೋಪಿಗಳಾದ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬುವವರನ್ನ ಮಾಲೂರು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಶಿವಪುರ ಗ್ರಾಮದಲ್ಲಿ ಬಡಿಗೆಯಿಂದ ಹೊಡೆದು ಪತ್ನಿಯನ್ನ ಬರ್ಬರ ಕೊಲೆಯಾದ ಘಟನೆ ನಡೆದಿದೆ. ನಾಗವ್ವ ಬೋವಿವಡ್ಡರ್(55) ಮೃತ ರ್ದುದೈವಿ. ಕಳೆದ ನಾಲ್ಕೈದು ತಿಂಗಳ ಹಿಂದೆ ಮಗ ಪೋಕ್ಸ್ ಕೇಸ್ನಲ್ಲಿ ಜೈಲು ಪಾಲಾಗಿದ್ದ. ಈ ಹಿನ್ನಲೆ ಮಗನನ್ನ ಬಿಡಿಸಿಕೊಂಡು ಬರಲು ಇಬ್ಬರ ಮಧ್ಯೆ ಜಗಳವಾಗಿತ್ತು. ಇಂದು(ಶನಿವಾರ) ಗಲಾಟೆ ತಾರಕಕ್ಕೇರಿ 62 ವರ್ಷದ ಶೇಖಪ್ಪ ಬೋವಿವಡ್ಡರ್ ಪತ್ನಿಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಶಿವಮೊಗ್ಗದ ಮಹಿಳೆ, ವಿಜಯಪುರದ ಯುವಕ: ಫೇಸ್‌ಬುಕ್ ಲವ್ ಕೊಲೆಯಲ್ಲಿ ಅಂತ್ಯ
ಶಿವಮೊಗ್ಗ: ಅಪ್ರಾಪ್ತ ಮಗನೇ ತನ್ನ ತಂದೆಯಯನ್ನಚೂರಿ ಇರಿದು ಕೊಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಅರಬಿಳಚಿ ಗ್ರಾಮದಲ್ಲಿ ನಡೆದಿದೆ. ಅಪ್ಪ-ಅಮ್ಮನ ಜಗಳದ ವಿಚಾರದಲ್ಲಿ ತಂದೆಯನ್ನೇ ಕೊಂದಿದ್ದಾನೆ.
ಸುಕ್ ರಾಜ್(53) ಕೊಲೆಯಾದ ವ್ಯಕ್ತಿ. ಸುಕ್ ರಾಜ್ ವೃತ್ತಿಯಲ್ಲಿ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ಗಾಂಜಾ ಸೇವಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Sat, 22 June 24