ರೌಡಿಶೀಟರ್ಗಳಿಗೆ ಸಿಂಹಸ್ವಪ್ನವಾದ ಖಾಕಿ, ರಾತ್ರೋರಾತ್ರಿ ರೌಡಿಗಳ ಮನೆ ಮೇಲೆ raid!
ಬೆಂಗಳೂರು: ನಗರದ ಸುತ್ತಮುತ್ತಿಲಿನ ಏರಿಯಾಗಳಲ್ಲಿ ಕೊರೊನಾ ಆರ್ಭಟದ ಜೊತೆ ರೌಡಿಗಳ ಹಾವಳಿ ಜೋರಾಗಿದೆ. ಹಾಗಾಗಿ, ಇವರಿಗೆ ತಕ್ಕ ಶಾಸ್ತಿ ಮಾಡಲು ಖಾಕಿ ಮುಂದಾಗಿದೆ. ರೌಡಿಶೀಟರ್ಗಳ ಮನೆ ಮೇಲೆ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿದ್ದಾರೆ. ನೆಲಮಂಗಲ ಉಪ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು 70ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಜೊತೆಗೆ, ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಹಾಗೂ ನೆಲಮಂಗಲ ತಾಲೂಕಿನ 4 ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾರೆ. ಕುಖ್ಯಾತ ರೌಡಿಶೀಟರ್ಗಳಾದ ಬಂಡೆ ಮಂಜ, ಹುಸ್ಕೂರು […]
ಬೆಂಗಳೂರು: ನಗರದ ಸುತ್ತಮುತ್ತಿಲಿನ ಏರಿಯಾಗಳಲ್ಲಿ ಕೊರೊನಾ ಆರ್ಭಟದ ಜೊತೆ ರೌಡಿಗಳ ಹಾವಳಿ ಜೋರಾಗಿದೆ. ಹಾಗಾಗಿ, ಇವರಿಗೆ ತಕ್ಕ ಶಾಸ್ತಿ ಮಾಡಲು ಖಾಕಿ ಮುಂದಾಗಿದೆ. ರೌಡಿಶೀಟರ್ಗಳ ಮನೆ ಮೇಲೆ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿದ್ದಾರೆ.
ನೆಲಮಂಗಲ ಉಪ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು 70ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಜೊತೆಗೆ, ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಹಾಗೂ ನೆಲಮಂಗಲ ತಾಲೂಕಿನ 4 ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾರೆ.
ಕುಖ್ಯಾತ ರೌಡಿಶೀಟರ್ಗಳಾದ ಬಂಡೆ ಮಂಜ, ಹುಸ್ಕೂರು ಶಿವ, ಬೆತ್ತನಗೆರೆ ಮಂಜ, poison ರಾಮ, ಖಾಸಿಮ್ , ಶರವಣ ಮನೆಗಳ ಮೇಲೆ ದಾಳಿನಡೆದಿದ್ದು ಇದಲ್ಲದೆ ನಾಗರಾಜ್ ರವಿ, ನಿಂಗೇಗೌಡ, ಹರೀಶ್, ಬೆಂಕಿ ಮಹದೇವ್ ಸೇರಿ 70ಕ್ಕೂ ಹೆಚ್ಚು ಇತರೆ ರೌಡಿಶೀಟರ್ಗಳ ಮನೆಗಳ ಮೇಲೆ ಖಾಕಿ ದಾಳಿ ನಡೆಸಿದೆ.
ರೌಡಿಶೀಟರ್ಗಳ ಮನೆಗಳಿಂದ ಮಾರಕಾಸ್ತ್ರಗಳನ್ನ ಸಹ ಜಪ್ತಿ ಮಾಡಲಾಗಿದೆ. ರೌಡಿಗಳ ಅಕ್ರಮ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
Published On - 8:13 am, Sat, 8 August 20