ಗಂಡ-ಹೆಂಡತಿ ಜಗಳದಲ್ಲಿ RDX ಸ್ಫೋಟಿಸುವುದಾಗಿ ಬೆದರಿಕೆ ಮೆಸೇಜ್ ರವಾನೆ ಮಾಡಿದ್ದು ಯಾರು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Dec 05, 2023 | 1:56 PM

ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಮೆಸೇಜ್ ಪೊಲೀಸರಿಗೆ ರವಾನೆಯಾಗಿದೆ. ಖುದ್ದು ಪತ್ನಿ ವಿದ್ಯಾರಾಣಿಯೇ ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಕಳುಹಿಸಿದ್ದಾರೆ. ಬಳಿಕ ಗಂಡನ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿ, ಜಾಣತನ ತೋರಿದ್ದಾರೆ.

ಗಂಡ-ಹೆಂಡತಿ ಜಗಳದಲ್ಲಿ RDX ಸ್ಫೋಟಿಸುವುದಾಗಿ ಬೆದರಿಕೆ ಮೆಸೇಜ್ ರವಾನೆ ಮಾಡಿದ್ದು ಯಾರು ಗೊತ್ತಾ?
ಗಂಡ-ಹೆಂಡತಿ ಜಗಳದಲ್ಲಿ RDX ಸ್ಫೋಟಗೊಳಿಸುವುದಾಗಿ ಬೆದರಿಕೆ ಮೆಸೇಜ್ ರವಾನೆ
Follow us on

ಆನೇಕಲ್: ಗಂಡ ಮತ್ತು ಹೆಂಡತಿ (couple) ಮಧ್ಯೆ ನಡೆದ ಜಗಳವದು. ಅಷ್ಟಕ್ಕೇ RDX ಇಟ್ಟು ಸ್ಫೋಟಗೊಳಿಸುವುದಾಗಿ (hoax bomb blast) ಪೊಲೀಸ್ ಮತ್ತಿತರ ಕೇಂದ್ರ ತನಿಖಾ ಸಂಸ್ಥೆಗಳಿಗೆ ಹೇಳಿ ಬೆದರಿಕೆ ಮೆಸೇಜ್ ಕಳಿಸಲಾಗಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ (anekal police) ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ವಾಸವಿದ್ದರು. ಸೋಷಿಯಲ್ ಮೀಡಿಯಾ ಆ್ಯಪ್‌ ಮೂಲಕ ವಿದ್ಯಾರಾಣಿಗೆ ರಾಮ್‌ಪ್ರಸಾದ್ ಅನ್ನೋ ವ್ಯಕ್ತಿಯ ಪರಿಚಯವಾಗಿದೆ. ರಾಮ್‌ಪ್ರಸಾದ್ ಜೊತೆ ವಿದ್ಯಾರಾಣಿ ನಿರಂತರ ಚ್ಯಾಟಿಂಗ್ ಮಾಡ್ತಿದ್ದರು. ಇದು ಗಂಡ ಕಿರಣ್‌ಗೆ ಗೊತ್ತಾಗಿ ಮೊಬೈಲ್ ಒಡೆದು ಹಾಕಿದ್ದರು.

ಇನ್ನು ಈ ವಿಚಾರವನ್ನು ಬೇರೆ ನಂಬರ್ ಮೂಲಕ ರಾಮ್‌ಪ್ರಸಾದ್‌ಗೆ ವಿದ್ಯಾರಾಣಿ ತಿಳಿಸಿದ್ದಾರೆ. ಅಷ್ಟಕ್ಕೇ ವಿದ್ಯಾರಾಣಿ ಗಂಡನಿಗೆ ಬುದ್ಧಿ ಕಲಿಸಲು ಪ್ಲಾನ್ ಮಾಡಿದ್ದಾನೆ ರಾಮಪ್ರಸಾದ್. ಆದರೆ ಖದೀಮತನ ತೋರಿರುವ ರಾಮಪ್ರಸಾದ, ತಾನು ಕಳುಹಿಸುವ ಮೆಸೇಜ್‌ ಅನ್ನು ಗಂಡ ಕಿರಣ್ ಮೊಬೈಲ್​​​ ನಂಬರ್‌ನಿಂದ ಫಾರ್ವಡ್ ಮಾಡು ಅಂತ ಸೂಚನೆ ನೀಡಿದ್ದಾನೆ!

ಇದನ್ನೂ ಓದಿ: ಕೇರಳದ ಕಳಮಶ್ಶೇರಿ ಬಾಂಬ್ ಸ್ಫೋಟದ ಆರೋಪಿ ಅಸಾಧಾರಣ ಬುದ್ಧಿವಂತ – ಪೊಲೀಸ್

ಅದಾಗುತ್ತಿದ್ದಂತೆ ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಮೆಸೇಜ್ ಪೊಲೀಸರಿಗೆ ರವಾನೆಯಾಗಿಬಿಟ್ಟಿದೆ. ಖುದ್ದು ಪತ್ನಿ ವಿದ್ಯಾರಾಣಿಯೇ ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಕಳುಹಿಸಿದ್ದಾರೆ. ಬಳಿಕ ಗಂಡನ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿ, ಜಾಣತನ ತೋರಿದ್ದಾರೆ. ಇತ್ತ ರಂಗಕ್ಕೆ ಇಳಿದ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮೆಸೇಜ್ ಬಂದಿದ್ದ ನಂಬರ್‌ನ ಮೂಲ ಹುಡುಕಿ ಹೊರಟಿದ್ದಾರೆ. ಸೀದಾ ಕಿರಣನ ಮನೆಗೆ ಬಂದು ಪೊಲೀಸರು ದಂಪತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಆಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ