ಬಾಲಕಿ ಮೇಲೆ 9 ತಿಂಗಳು ಸಾಮೂಹಿಕ ಅತ್ಯಾಚಾರ; 13 ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಣೆ

ಬಾಲಕಿ ಮೇಲೆ 9 ತಿಂಗಳು ಸಾಮೂಹಿಕ ಅತ್ಯಾಚಾರ; 13 ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಣೆ
ಅತ್ಯಾಚಾರ

ಪೂಜಾ ತನ್ನನ್ನು ಜಲಾವರ್‌ಗೆ ಕರೆದೊಯ್ದಳು. ಅಲ್ಲಿ ಒಂಬತ್ತು ದಿನಗಳ ಕಾಲ ತನ್ನ ಮೇಲೆ ಅತ್ಯಾಚಾರ ನಡೆಸಲಾಯಿತು. ಒಬ್ಬರ ನಂತರ ಒಬ್ಬರಂತೆ ಹಲವಾರು ಜನರ ಬಳಿ ನನ್ನನ್ನು ಕಳುಹಿಸಲಾಯಿತು ಎಂದು ಸಂತ್ರಸ್ತ ಬಾಲಕಿ ತನ್ನ ದೂರಿನಲ್ಲಿ ಆರೋಪಿಸಿದ್ದಳು.

TV9kannada Web Team

| Edited By: Sushma Chakre

Dec 19, 2021 | 12:40 PM

ಕೋಟಾ: ಈ ವರ್ಷದ ಆರಂಭದಲ್ಲಿ 15 ವರ್ಷದ ಬಾಲಕಿಯ ಮೇಲೆ 9 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 13 ಜನರಿಗೆ ತಲಾ 20 ವರ್ಷ ಮತ್ತು ಇತರ ಇಬ್ಬರಿಗೆ ತಲಾ 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ರಾಜಸ್ಥಾನದ ಕೋಟಾ ನ್ಯಾಯಾಲಯ ಶನಿವಾರ ಈ ತೀರ್ಪು ನೀಡಿದ್ದು, ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.

ಪೋಕ್ಸೊ ಕಾಯ್ದೆಯಡಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶೋಕ್ ಚೌಧರಿ ತೀರ್ಪು ನೀಡಿದ್ದಾರೆ. ಬಾಲಕಿಯನ್ನು ಆಕೆಯ ಮನೆಯಿಂದ ಅಪಹರಿಸಿ, ಅತ್ಯಾಚಾರಿಗಳಿಗೆ ಮಾರಾಟ ಮಾಡಿದ್ದ ಮಹಿಳೆಗೆ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಆಕೆಯ ಮನೆಯಿಂದ ಬಾಲಕಿಯನ್ನು ಅಪಹರಿಸಿ ಆಕೆ ಮಾರಾಟ ಮಾಡಿದ್ದಳು. ಆ ಬಾಲಕಿಯನ್ನು ಜಲಾವರ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿತ್ತು.

16 ಜನರಿಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ, ಅಪರಾಧದಲ್ಲಿ ಭಾಗಿಯಾಗಿರುವ ಇತರ 12 ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ನಾಲ್ವರು ಅಪ್ರಾಪ್ತ ಅಪರಾಧಿಗಳು ಇನ್ನೂ ಸ್ಥಳೀಯ ಬಾಲ ನ್ಯಾಯ ಮಂಡಳಿಯಲ್ಲಿ ಪ್ರತ್ಯೇಕವಾಗಿ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಎಎಸ್‌ಜೆ ಚೌಧರಿ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸುವಾಗ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾದವರಿಗೆ ತಲಾ 10,000 ರೂ. ಮತ್ತು ನಾಲ್ಕು ವರ್ಷಗಳ ಶಿಕ್ಷೆಗೆ ಒಳಗಾದವರಿಗೆ 7,000 ರೂ. ದಂಡ ವಿಧಿಸಿದ್ದಾರೆ.

ಈ ವರ್ಷದ ಮಾರ್ಚ್ 6ರಂದು ಸುಕೇತ್ ಪೊಲೀಸ್ ಠಾಣೆಯಲ್ಲಿ 15 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಫ್‌ಐಆರ್ ದಾಖಲಿಸಲಾಗಿದೆ. ತನ್ನನ್ನು ಕೋಟಾದಲ್ಲಿ ಬುಲ್ಬುಲ್ ಅಲಿಯಾಸ್ ಪೂಜಾ ಜೈನ್ ಎಂಬ ಮಹಿಳೆಯೊಬ್ಬಳು ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದಳು ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಳು.

ಪೂಜಾ ತನ್ನನ್ನು ಜಲಾವರ್‌ಗೆ ಕರೆದೊಯ್ದಳು. ಅಲ್ಲಿ ಒಂಬತ್ತು ದಿನಗಳ ಕಾಲ ತನ್ನ ಮೇಲೆ ಅತ್ಯಾಚಾರ ನಡೆಸಲಾಯಿತು. ಒಬ್ಬರ ನಂತರ ಒಬ್ಬರಂತೆ ಹಲವಾರು ಜನರ ಬಳಿ ನನ್ನನ್ನು ಕಳುಹಿಸಲಾಯಿತು ಎಂದು ಸಂತ್ರಸ್ತ ಬಾಲಕಿ ತನ್ನ ದೂರಿನಲ್ಲಿ ಆರೋಪಿಸಿದ್ದಳು.

ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಕೋಟಾ ಪೊಲೀಸರು ಮೇ 7ರಂದು ನ್ಯಾಯಾಲಯಕ್ಕೆ 1750 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದರು. ಆ ವಿಚಾರಣೆಯನ್ನು ತ್ವರಿತವಾಗಿ ನಡೆಸಿ ಕೋರ್ಟ್ ಶನಿವಾರ ತನ್ನ ತೀರ್ಪು ನೀಡಿದೆ ಎಂದು ಪ್ರಾಸಿಕ್ಯೂಷನ್ ವಕೀಲ ಪ್ರೇಮ್ ನಾರಾಯಣ್ ನಾಮದೇವ್ ಹೇಳಿದ್ದಾರೆ.

ಇದನ್ನೂ ಓದಿ: Shocking News: ಪಕ್ಕದಲ್ಲಿ ಮಲಗಿದ್ದ 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ!

Crime News: ಅಪ್ರಾಪ್ತೆ ಅತ್ಯಾಚಾರ; ಮೂವರ ಬಂಧನ, ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ ಶರಣು

Follow us on

Related Stories

Most Read Stories

Click on your DTH Provider to Add TV9 Kannada