ಗುಜರಾತ್​​ನ ನವಸಾರಿಯಲ್ಲಿ ಭೀಕರ ಅಪಘಾತ; 9 ಜನ ಸಾವು, 32 ಮಂದಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: Dec 31, 2022 | 8:51 AM

ಈ ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 32 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ 32 ಮಂದಿಯಲ್ಲಿ 17 ಜನರನ್ನು ವಲ್ಸಾದ್‌ನ ಆಸ್ಪತ್ರೆಗೆ, 14 ಮಂದಿಯನ್ನು ನವಸಾರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಜರಾತ್​​ನ ನವಸಾರಿಯಲ್ಲಿ ಭೀಕರ ಅಪಘಾತ; 9 ಜನ ಸಾವು, 32 ಮಂದಿಗೆ ಗಾಯ
ಗುಜರಾತ್​​ನ ನವಸಾರಿಯಲ್ಲಿ ಅಪಘಾತ
Follow us on

ಅಹಮದಾಬಾದ್: ಗುಜರಾತ್‌ನ ನವಸಾರಿಯಲ್ಲಿ (Navasari Accident) ಇಂದು (ಶನಿವಾರ) ಮುಂಜಾನೆ ಬಸ್ ಮತ್ತು ಎಸ್‌ಯುವಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 32 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ 32 ಮಂದಿಯಲ್ಲಿ 17 ಜನರನ್ನು ವಲ್ಸಾದ್‌ನ ಆಸ್ಪತ್ರೆಗೆ, 14 ಮಂದಿಯನ್ನು ನವಸಾರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯಲ್ಲಿ ಗಾಯಗೊಂಡ ಇನ್ನೊಬ್ಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಸೂರತ್‌ಗೆ ಕರೆದೊಯ್ಯಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೇತನ್ ಜೋಶಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಮೃತಪಟ್ಟ 9 ಜನರ ಶವಗಳನ್ನು ಪೊಲೀಸ್ ತಂಡಗಳು ಹೊರತೆಗೆದು ಶವಪರೀಕ್ಷೆಗೆ ತೆಗೆದುಕೊಂಡು ಹೋಗಿದೆ.

ಇದನ್ನೂ ಓದಿ: Road Accidents: ರಸ್ತೆ ಅಪಘಾತಗಳಿಂದ ಹೆಚ್ಚು ಸಾವು ಸಂಭವಿಸುವ ಟಾಪ್ 3 ನಗರಗಳಲ್ಲಿ ಬೆಂಗಳೂರು ಕೂಡ ಒಂದು

ಎಸ್‌ಯುವಿ (ಫಾರ್ಚುನರ್) ಅಂಕಲೇಶ್ವರದ ಸಂಸ್ಥೆಯೊಂದರ ಉದ್ಯೋಗಿಗಳಾಗಿರುವ 9 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಬಸ್ ಅಹಮದಾಬಾದ್‌ನಿಂದ ವಲ್ಸಾದ್‌ಗೆ ಜನರನ್ನು ಕರೆದುಕೊಂಡು ಹೋಗುತ್ತಿತ್ತು. ಈ ವೇಳೆ ಎರಡೂ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ