Road Accidents: ರಸ್ತೆ ಅಪಘಾತಗಳಿಂದ ಹೆಚ್ಚು ಸಾವು ಸಂಭವಿಸುವ ಟಾಪ್ 3 ನಗರಗಳಲ್ಲಿ ಬೆಂಗಳೂರು ಕೂಡ ಒಂದು

ಬೆಂಗಳೂರು ಸೇರಿದಂತೆ ದೇಶದ ಈ ಮೂರು ನಗರಗಳಲ್ಲಿ ಅತಿ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ

Road Accidents: ರಸ್ತೆ ಅಪಘಾತಗಳಿಂದ ಹೆಚ್ಚು ಸಾವು ಸಂಭವಿಸುವ ಟಾಪ್ 3 ನಗರಗಳಲ್ಲಿ ಬೆಂಗಳೂರು ಕೂಡ ಒಂದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 30, 2022 | 4:25 PM

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇತ್ತೀಚಿಗೆ ರಸ್ತೆ ಅಪಘಾತಗಳು (Road Accidents) ಹೆಚ್ಚುತ್ತಿದ್ದು, ಇದರಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (Ministry of Road Transport and Highways) “ಭಾರತದ ರಸ್ತೆ ಅಪಘಾತಗಳು-2021” ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಬೆಂಗಳೂರು (Bengaluru) ಸೇರಿದಂತೆ ದೇಶದ ಈ ಮೂರು ನಗರಗಳಲ್ಲಿ ಅತಿ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್ ವರದಿ ಮಾಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಸ್ಥಾನದಲ್ಲಿದ್ದು 1,239 ಜನರು ಮೃತ್ತಪಟ್ಟಿದ್ದಾರೆ. ಚನೈ ಮತ್ತು ಬೆಂಗಳೂರು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ವರದಿಪ್ರಕಾರ ಚೆನ್ನೈ ಮತ್ತು ಬೆಂಗಳೂರಲ್ಲಿ 998 ಮತ್ತು 654 ಮರಣ ಪ್ರಕರಣಗಳು ವರದಿಯಾಗಿವೆ.

ಟಾಪ್​ 10 ಪಟ್ಟಿಯಲ್ಲಿ ಬೆಂಗಳೂರು ನಂತರ ಜೈಪುರ, ಕಾನ್ಪುರ, ಆಗ್ರಾ, ಪ್ರಯಾಗರಾಜ್​ (ಅಲಹಾಬಾದ್) ಇಂದೋರ್, ಜೈಪುರ, ಮತ್ತು ಜಲಬಾಲಪುರ್​ಗಳಿವೆ. ಈ ಟಾಪ್​ 10 ನಗರಗಳಲ್ಲಿ ಶೇ 43.13 ಪ್ರತಿಶತದಷ್ಟು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ 50 ನಗರಗಳಲ್ಲಿ ಸರ್ವೆ ನಡೆಸಿದ್ದು ಈ 10 ನಗರಗಳು ಟಾಪ್​ನಲ್ಲಿವೆ.

ಶ್ರೀನಗರ, ಅಮೃತಸರ್​ ಮತ್ತು ಜಮ್ಶೆಡ್‌ಪುರ ನಗರಗಳಲ್ಲಿ 2021ರ ಸಾಲಿನಲ್ಲಿ ಅತಿ ಕಡಿಮೆ ರಸ್ತೆ ಅಪಘತಗಳಾಗಿವೆ. ಹೀಗಾಗಿ ಈ ಮೂರು ನಗರಗಳು ಕೊನೆ ಸ್ಥಾನಗಳಲ್ಲಿವೆ. ಕಳೆದ ವರ್ಷ ಬೆಂಗಳೂರಲ್ಲಿ ರಸ್ತೆ ಗುಂಡಿ (Pothole)ಮತ್ತು ಹದಗೆಟ್ಟ ರಸ್ತೆಗಳಿಂದಾಗಿ ಹಲವಾರು ಸಾವುಗಳು ಸಂಭವಿಸಿವೆ. ಕರ್ನಾಟಕ ಹೈಕೋರ್ಟ್ ಡಿಸೆಂಬರ್ ಮಧ್ಯದಲ್ಲಿ ರಸ್ತೆ ಗುಂಡಿಗಳಿಂದ ಉಂಟಾದ ಅಪಘಾತಗಳಿಗೆ ಸಂಬಂಧಿಸಿದ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Fri, 30 December 22