ಬ್ಯಾಟರಾಯನಪುರದಲ್ಲಿ ಆಟೋ ಚಾಲಕನ ಕೊಲೆ ಕೇಸ್​: 11 ಜನರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2023 | 4:52 PM

ಡಿ. 6ರಂದು ಬ್ಯಾಟರಾಯನಪುರದಲ್ಲಿ ಕೊಲೆಯಾಗಿದ್ದ 24 ವರ್ಷದ ಆಟೋ  ಚಾಲಕ ಅರುಣ್​​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಗಂಬೀರತೆ ಅರಿತು ಎಸಿಪಿಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿರಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ.

ಬ್ಯಾಟರಾಯನಪುರದಲ್ಲಿ ಆಟೋ ಚಾಲಕನ ಕೊಲೆ ಕೇಸ್​: 11 ಜನರ ಬಂಧನ
ಮೃತ ಅರುಣ್​
Follow us on

ಬೆಂಗಳೂರು, ಡಿಸೆಂಬರ್​​ 11: ಡಿ. 6ರಂದು ಬ್ಯಾಟರಾಯನಪುರ (Byatarayanapura) ದಲ್ಲಿ ಕೊಲೆಯಾಗಿದ್ದ 24 ವರ್ಷದ ಆಟೋ  ಚಾಲಕ ಅರುಣ್​​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹರೀಶ್, ಹರೀಶ್ ಸಹೋದರ ಮಧು, ಪ್ರಶಾಂತ್ ಅಲಿಯಾಸ್ ಅಪ್ಪು ಸೇರಿದಂತೆ 11 ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಚಾಮರಾಜಪೇಟೆ ಬಾರ್ ಬಳಿ ಕಾಟನ್ ಪೇಟೆ ಭಕ್ಷಿ ಗಾರ್ಡನ್ ಹುಡುಗರ ಜೊತೆಗೆ ಹರೀಶ್ ಗಲಾಟೆ ಮಾಡಿಕೊಂಡಿದ್ದ.

ಈ ವೇಳೆ ಗಾರ್ಡನ್ ಹುಡುಗರು ಅರುಣ್​ ಸಂಪರ್ಕ ಮಾಡಿದ್ದರು. ಹರೀಶ್ ಬಗ್ಗೆ ವಿಚಾರಿಸಿದ್ದ ಗಾರ್ಡನ್ ಹುಡುಗರು ಈ ವೇಳೆ ಹರೀಶ್ ತನಗೆ ಗೊತ್ತು ಎಂದು ಅರುಣ್ ಹೇಳಿದ್ದಾರೆ. ಮನೆ ಬಳಿ ಹೋಗುವುದು ಹರೀಶ್ ಪತ್ನಿಗೆ ಹರೀಶ್ ಬಂದಿದ್ದಾನಾ ಎಂದು ವಿಚಾರ ಮಾಡುವ ಕೆಲಸ ಮಾಡುತ್ತಿದ್ದ ಅರುಣ್​.

ಇದನ್ನೂ ಓದಿ: ರಿಕವರಿ ಹಣ ದುರುಪಯೋಗ ಆರೋಪ: ಸಿಸಿಬಿ ಇನ್ಸ್​ಪೆಕ್ಟರ್ ಶಂಕರ ನಾಯಕ್ ವಿರುದ್ಧ ಮತ್ತೆರಡು ದೂರು

ಈ ವಿಚಾರಕ್ಕೆ ಹರೀಶ್ ಮತ್ತು ಆತನ ಸಹೋದರ ಮಧು ಕೋಪಗೊಂಡಿದ್ದಾರೆ. ಈ ವಿಚಾರವನ್ನು ಪ್ರಶಾಂತ್ ಅಲಿಯಾಸ್ ಅಪ್ಪು ಜೊತೆಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ತನ್ನ ಹಳೇ ದ್ವೇಷ ಹೇಳಿದ್ದು, ಈ ಹಿಂದೆ ಮಣಿಕಂಠನ ಕೊಲೆ ಕೇಸ್​ನಲ್ಲಿ ಅರುಣ್ ಅರೆಸ್ಟ್ ಆಗಿದ್ದ. ಈ ವೇಳೆ ಪ್ರಶಾಂತ್ ಪಾತ್ರ ಇಲ್ಲವಾದರು ಪೊಲೀಸ್ ಮುಂದೆ ಪ್ರಶಾಂತ್ ಸಹ ಕೊಲೆಯ ಭಾಗವಾಗಿದ್ದಾನೆ ಎಂದು ಹೇಳಿದ್ದ. ಈ ವೇಳೆ ಪ್ರಶಾಂತ್ ಅರೆಸ್ಟ್ ಆಗಿದ್ದ. ಹೀಗಾಗಿ ಅರುಣ್ ಏರಿಯಾಗೆ ಬಂದರೆ ಮಾಹಿತಿ ನೀಡುವಂತೆ ಹುಡುಗರ ಸೆಟ್ ಮಾಡಿದ್ದ.

ಇದನ್ನೂ ಓದಿ: ನನಗೆ ನೀನು ಬೇಕು ಅಷ್ಟೇ.. ಹೀಗಂತ ವಿವಾಹಿತ ಯುವತಿಗೆ ಪೀಣ್ಯದಲ್ಲಿ ಭಗ್ನ ಪ್ರೇಮಿಯಿಂದ ನಿರಂತರ ಕಾಟ

ಕೊಲೆ ನಡೆದ ದಿನ ಆರೋಪಿಗಳು ಸ್ಮಶಾನದಲ್ಲಿ ಕುಳಿತು ಏಣ್ಣೆ ಹೊಡೆಯುತಿದ್ದರು. ಅದೇ ಸಮಯದಲ್ಲಿ ಏರಿಯಾಗೆ ಅರುಣ್ ಬಂದಿರುವ ವಿಚಾರ ಗೊತ್ತಾಗಿದೆ. ಸ್ಮಶಾನದಿಂದ ಹುಡುಗರ ಸಹಿತ ದೇವಸ್ಥಾನ ಒಂದರಲ್ಲಿ ಇಟ್ಟಿದ್ದ ಮಚ್ಚು ಲಾಂಗು ಸಹಿತ ಬಂದಿದ್ದ ಆರೋಪಿಗಳು ಟಿಂಬರ್ ಯಾರ್ಡ್​ನ ರಸ್ತೆಯಲ್ಲಿ ಅರುಣ್​ನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಪ್ರಕರಣದ ಗಂಬೀರತೆ ಅರಿತು ಎಸಿಪಿಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿರಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.