Crime News: ಚೆನ್ನೈನ ನರರೋಗ ತಜ್ಞ ಡಾ. ಸುಬ್ಬಯ್ಯ ಹತ್ಯೆ ಪ್ರಕರಣ; 7 ಆರೋಪಿಗಳಿಗೆ ಗಲ್ಲು ಶಿಕ್ಷೆ

| Updated By: ಸುಷ್ಮಾ ಚಕ್ರೆ

Updated on: Aug 04, 2021 | 10:22 PM

Dr Subbiah murder case: 2013ರ ಸೆಪ್ಟೆಂಬರ್ 14ರಂದು ಚೆನ್ನೈನ ಬಿಲ್‌ರೋತ್ ಆಸ್ಪತ್ರೆಯ ಎದುರಿನಲ್ಲೇ ನರರೋಗ ತಜ್ಞ ಡಾ. ಎಸ್‌.ಡಿ ಸುಬ್ಬಯ್ಯ ಅವರನ್ನು ಕೊಲೆ ಮಾಡಲಾಗಿತ್ತು. ಆ ಪ್ರಕರಣದ 7 ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲಾಗಿದೆ.

Crime News: ಚೆನ್ನೈನ ನರರೋಗ ತಜ್ಞ ಡಾ. ಸುಬ್ಬಯ್ಯ ಹತ್ಯೆ ಪ್ರಕರಣ; 7 ಆರೋಪಿಗಳಿಗೆ ಗಲ್ಲು ಶಿಕ್ಷೆ
ಸಾಂದರ್ಭಿಕ ಚಿತ್ರ
Follow us on

ಚೆನ್ನೈ: 8 ವರ್ಷಗಳ ಹಿಂದೆ ತಮಿಳುನಾಡಿನ ಚೆನ್ನೈನ ನರರೋಗ ತಜ್ಞ ಡಾ. ಎಸ್​.ಡಿ. ಸುಬ್ಬಯ್ಯ ಅವರನ್ನು ಆಸ್ಪತ್ರೆಗೆ ಹೊರಗೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಡಾ. ಸುಬ್ಬಯ್ಯ ಅವರ ಹತ್ಯೆ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ 7 ಮಂದಿಗೆ ಇಂದು ಚೆನ್ನೈನ ಸೆಷನ್ಸ್​ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.

2013ರ ಸೆಪ್ಟೆಂಬರ್ 14ರಂದು ಚೆನ್ನೈನ ಆರ್‌ಎ ಪುರಂನ ಬಿಲ್‌ರೋತ್ ಆಸ್ಪತ್ರೆಯ ಎದುರಿನಲ್ಲೇ ನರರೋಗ ತಜ್ಞ ಡಾ. ಎಸ್‌.ಡಿ ಸುಬ್ಬಯ್ಯ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ವಕೀಲರು ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸೆಷನ್ಸ್​ ಕೋರ್ಟ್ ತೀರ್ಪು ನೀಡಿದೆ. ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಿಟಿ ಟ್ರಯಲ್ ನ್ಯಾಯಾಧೀಶ ಐ.ಎಸ್. ಅಲ್ಲಿ ತೀರ್ಪು ಪ್ರಕಟಿಸಿದ್ದಾರೆ.

2013ರಲ್ಲಿ 58 ವರ್ಷದ ಡಾ. ಸುಬ್ಬಯ್ಯ ಮನೆಗೆ ತೆರಳಲು ಆಸ್ಪತ್ರೆಯಿಂದ ಪಾರ್ಕಿಂಗ್ ಏರಿಯಾದತ್ತ ಹೋಗುತ್ತಿದ್ದಾಗ ಸಾರ್ವಜನಿಕರ ಎದುರಿನಲ್ಲೇ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಡಾ. ಸುಬ್ಬಯ್ಯ ಅವರನ್ನು ಕನ್ಯಾಕುಮಾರಿ ಜಿಲ್ಲೆಯ ಅಂಜುಗ್ರಾಮಂ ಎಂಬಲ್ಲಿ 2.4 ಎಕರೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿತ್ತು. ಆರ್‌ಎ ಪುರಂ ಆಸ್ಪತ್ರೆಯ ಹೊರಗೆ ಮೂವರು ವ್ಯಕ್ತಿಗಳು ಡಾ. ಸುಬ್ಬಯ್ಯ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ಸುಬ್ಬಯ್ಯ 1 ವಾರದ ನಂತರ ಸಾವನ್ನಪ್ಪಿದರು.

ಇದನ್ನೂ ಓದಿ: Crime News: ಪ್ರೀತಿಗಾಗಿ ಗೆಳೆಯನ ತಲೆಯನ್ನೇ ಕತ್ತರಿಸಿದ 17 ವರ್ಷದ ಯುವಕ; ತ್ರಿಕೋನ ಪ್ರೇಮಕತೆಯ ದುರಂತ ಅಂತ್ಯ

Crime News: ಆನ್​ಲೈನ್​ ಗೇಮ್​ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ

(Crime News Chennai Court gives death penalty to 7 Accused Neurologist Dr Subbiah murder case)

Published On - 10:20 pm, Wed, 4 August 21