Crime News: ರಸ್ತೆಬದಿ ಗೋಲ್​ಗಪ್ಪ ತಿನ್ನುತ್ತಿದ್ದ ಅಕ್ಕತಂಗಿಯರ ಮೇಲೆ ಕಾರು ಹತ್ತಿಸಿದ ಕುಡುಕ; ಬಾಲಕಿ ಸಾವು

| Updated By: ಸುಷ್ಮಾ ಚಕ್ರೆ

Updated on: Nov 29, 2022 | 8:44 AM

ಮೂವರು ಅಕ್ಕ-ತಂಗಿಯರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾಗೇ, ಕಾರು ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ 6 ವರ್ಷದ ರಿಯಾ ಸೋಮವಾರ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾಳೆ.

Crime News: ರಸ್ತೆಬದಿ ಗೋಲ್​ಗಪ್ಪ ತಿನ್ನುತ್ತಿದ್ದ ಅಕ್ಕತಂಗಿಯರ ಮೇಲೆ ಕಾರು ಹತ್ತಿಸಿದ ಕುಡುಕ; ಬಾಲಕಿ ಸಾವು
ನೊಯ್ಡಾದಲ್ಲಿ ಕಾರು ಅಪಘಾತ
Follow us on

ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ಕಂಠಪೂರ್ತಿ ಕುಡಿದಿದ್ದ ಚಾಲಕನೊಬ್ಬ ರಸ್ತೆ ಬದಿಯ ವ್ಯಾಪಾರಿಯ ಬಳಿ ಗೋಲ್​ಗಪ್ಪ (Golgappa) ತಿನ್ನುತ್ತಾ ನಿಂತಿದ್ದ ಮೂವರು ಅಕ್ಕ-ತಂಗಿಯರ ಮೇಲೆ ತನ್ನ ಕಾರನ್ನು ಹತ್ತಿಸಿದ್ದಾನೆ. ಬಳಿಕ ಆ ಕಾರು ಮುಂದಕ್ಕೆ ಹೋಗಿ ಗೋಡೆಗೆ ಡಿಕ್ಕಿ (Car Accident) ಹೊಡೆದಿದೆ. ಈ ವೇಳೆ ಕಾರಿಗೆ ಸಿಕ್ಕಿ 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

ನೊಯ್ಡಾದ ಸೆಕ್ಟರ್-45ರ ಸದರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೋಲ್ಗಪ್ಪ ತಿನ್ನುತ್ತಿದ್ದ ಮೂವರು ಸಹೋದರಿಯರಾದ ರಿಯಾ, ಅನು ಮತ್ತು ಅಂಕಿತಾ ಅವರ ಬಳಿ ಅತಿವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ: ವಿಐಪಿ ನೋಂದಣಿ ಫಲಕ ಹೊಂದಿದ್ದ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದು ಸೈಕ್ಲಿಸ್ಟ್ ಸಾವು

ಈ ವೇಳೆ ಆ ಮೂವರು ಅಕ್ಕ-ತಂಗಿಯರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾಗೇ, ಕಾರು ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ 6 ವರ್ಷದ ರಿಯಾ ಸೋಮವಾರ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿ ರಾಜೀವ್ ಬಲ್ಯಾನ್ ತಿಳಿಸಿದ್ದಾರೆ.

15 ವರ್ಷದ ಅನುಗೆ ಬೆನ್ನುಮೂಳೆಯಲ್ಲಿ ಗಾಯಗಳಾಗಿವೆ. 18 ವರ್ಷದ ಅಂಕಿತಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂವರು ಮಕ್ಕಳ ಜೊತೆ ನಿಂತು ಗೋಲ್​ಗಪ್ಪ ಕೊಡಿಸುತ್ತಿದ್ದ ಅವರ ತಾಯಿ ಕಾರು ನುಗ್ಗಿದ ರಭಸದಿಂದ ಗಾಬರಿಯಾಗಿ ಪಕ್ಕಕ್ಕೆ ಜಿಗಿದಿದ್ದಾರೆ. ಇದರಿಂದ ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Attibele: ಅಪಘಾತದಿಂದ ಧರೆಗುರುಳಿದ ಕನ್ನಡದ ಗಡಿ ಗೋಪುರ- ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಕಟ್ಟಲಾಗಿದ್ದ ಏಕೈಕ ಮೈಲಿಗಲ್ಲು ಇದು!

4 ಮಂದಿ ಪ್ರಯಾಣಿಕರಿದ್ದ ಆ ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದಿದ್ದರಿಂದ ಗೋಲ್​ಗಪ್ಪ ಮಾರಾಟ ಮಾಡುತ್ತಿದ್ದ ಗಾಡಿ ಕೂಡ ಪಲ್ಟಿಯಾಗಿದೆ. ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಜನರು ಕಾರು ಚಾಲಕನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಚಾಲಕನನ್ನು ಬಂಧಿಸಿದ್ದು, ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ