AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ವಿಐಪಿ ನೋಂದಣಿ ಫಲಕ ಹೊಂದಿದ್ದ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದು ಸೈಕ್ಲಿಸ್ಟ್ ಸಾವು

ಬಿಎಂಡಬ್ಲ್ಯು ಚಾಲಕನ ವಿರುದ್ಧ ಅಜಾಗರೂಕತೆಯಿಂದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಚಾಲಕನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ

ದೆಹಲಿ: ವಿಐಪಿ ನೋಂದಣಿ ಫಲಕ ಹೊಂದಿದ್ದ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದು ಸೈಕ್ಲಿಸ್ಟ್ ಸಾವು
ಕಾರು ಡಿಕ್ಕಿ ಹೊಡೆದು ಸೈಕ್ಲಿಸ್ಚ್ ಸಾವು
TV9 Web
| Edited By: |

Updated on: Nov 27, 2022 | 8:28 PM

Share

ದೆಹಲಿ: ಬಿಎಂಡಬ್ಲ್ಯು(BMW) ಕಾರು ಡಿಕ್ಕಿ ಹೊಡೆದು ಸೈಕ್ಲಿಸ್ಟ್ (cyclist) ಸಾವನ್ನಪ್ಪಿರುವ ಘಟನೆ ದಿಲ್ಲಿಯಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಭೇಂದು ಚಟರ್ಜಿ (50) (Subhendu Chatterjee) ಅವರು ಮಹಿಪಾಲ್‌ಪುರ ಮೇಲ್ಸೇತುವೆ ಬಳಿ ಸೈಕ್ಲಿಂಗ್ ಮಾಡುವಾಗ ಬಿಳಿ ಐಷಾರಾಮಿ ಸೆಡಾನ್ ಡಿಕ್ಕಿ ಹೊಡೆದಿದೆ. ಪೊಲೀಸರ ಪ್ರಕಾರ, ಕಾರಿನ ಚಾಲಕ ಟೈರ್ ಸ್ಫೋಟಗೊಂಡ ನಂತರ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಹೇಳಿದರು. ಸಂತ್ರಸ್ತರನ್ನು ಕಾರಿನ ಚಾಲಕ ಆಸ್ಪತ್ರೆಗೆ ಕರೆದೊಯ್ದಿದ್ದು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಚಟರ್ಜಿ ಗುರುಗ್ರಾಮ್ ನಿವಾಸಿಯಾಗಿದ್ದು, ದೆಹಲಿಯ ಧೌಲಾ ಕುವಾನ್ ಕಡೆಗೆ ಸವಾರಿ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕನನ್ನು ಪೊಲೀಸರು ಗುರುತಿಸಿಲ್ಲ, ಆದರೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಡಬ್ಲ್ಯು ವಿಐಪಿ ನೋಂದಣಿ ಫಲಕವನ್ನು ಹೊಂದಿತ್ತು. ಅದರ ಮೇಲೆ “ಅಧ್ಯಕ್ಷ ಹಣಕಾಸು ಸಮಿತಿ, ದೆಹಲಿ ಕಂಟೋನ್ಮೆಂಟ್ ಬೋರ್ಡ್” ಎಂದು ಸ್ಟಿಕ್ಕರ್ ಇತ್ತು. ಪೊಲೀಸರು ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಪ್ರಕರಣವನ್ನು ದಾಖಲಿಸಿದ್ದಾರೆ. ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಪ್ರಕಾರ ಬೆಳಿಗ್ಗೆ ವಸಂತ್ ಕುಂಜ್​​ನಿಂದ ಪಿಸಿಆರ್ ಕರೆ ಬಂದಿತು. ಸಿಬ್ಬಂದಿ ಫ್ಲೈಓವರ್‌ಗೆ ಹೋಗಿ ನೋಡಿದಾಗ ಬಿಎಂಡಬ್ಲ್ಯು ಕಾರು ಮತ್ತು ಸೈಕಲ್ ಎರಡೂ ರಸ್ತೆಯ ಮೂಲೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ.ವಿಚಾರಣೆಯಲ್ಲಿ ಕಾರಿನ ಟೈರ್ ಒಡೆದಿರುವುದು ಕಂಡುಬಂದಿದೆ. ಕಾರು ಚಾಲಕನಿಗೆ ನಿಯಂತ್ರಿಸಲು ಸಾಧ್ಯವಾಗದೆ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಕಾರು ಚಾಲಕ ಆಸ್ಪತ್ರೆಗೆ ಸಾಗಿಸಿದ್ದಾನೆ. ಆದರೆ, ಬರುವಷ್ಟರಲ್ಲಿ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಡಿಸಿಪಿ (ನೈಋತ್ಯ) ಮನೋಜ್ ಸಿ ಹೇಳಿದ್ದಾರೆ.

ಬಿಎಂಡಬ್ಲ್ಯು ಚಾಲಕನ ವಿರುದ್ಧ ಅಜಾಗರೂಕತೆಯಿಂದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಚಾಲಕನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಚಟರ್ಜಿ ಅವರು ಬೆಳಗ್ಗೆ ಸೈಕಲ್ ತುಳಿಯುತ್ತಿದ್ದಾಗ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈತ ಹೆಲ್ಮೆಟ್ ಹಾಕಿಕೊಂಡಿದ್ದು, ಪ್ರತಿದಿನ ಅವರು ಸೈಕಲ್ ನಲ್ಲಿ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಉತ್ಸಾಹದ ಸೈಕ್ಲಿಸ್ಟ್ ಆಗಿದ್ದು ಪ್ರತಿದಿನ ಸೈಕಲ್ ತುಳಿಯುತ್ತಿದ್ದರು. ಅವರು ದೆಹಲಿ ಮತ್ತು ಎನ್​​ಸಿಆರ್​​ನಲ್ಲಿ ಸೈಕ್ಲಿಂಗ್ ಸಮುದಾಯದ ಭಾಗವಾಗಿದ್ದರು. ವಾರಾಂತ್ಯದಲ್ಲಿ, ನಾವು ಗುರ್ಗಾಂವ್‌ನಿಂದ ದೆಹಲಿಗೆ ಗುಂಪಿನಲ್ಲಿ ಸೈಕ್ಲಿಂಗ್‌ಗೆ ಹೋಗುತ್ತಿದ್ದೆವು. ಇಂದು ಅವರು ಒಬ್ಬರೇ ಸವಾರಿ ಮಾಡುತ್ತಿದ್ದರು, ಅದು ಅಸಾಮಾನ್ಯವೇನಲ್ಲ. ರೈಡ್​​ಗೆ ಹೋಗುತ್ತೇನೆ ಎಂದು ವಾಟ್ಸಾಪ್​​ನಲ್ಲಿ ನಮ್ಮ ಸೈಕ್ಲಿಸ್ಟ್ ಗ್ರೂಪ್​​ನಲ್ಲಿ ಪೋಸ್ಟ್ ಮಾಡಿದ್ದರು. ಕಳೆದ ಭಾನುವಾರ, ಅವರು ಗುರ್ಗಾಂವ್‌ನ ಜೆನ್‌ಪ್ಯಾಕ್ ಚೌಕ್‌ನಲ್ಲಿ ರಸ್ತೆ ಸಂಚಾರ ಸಂತ್ರಸ್ತರಿಗಾಗಿ ವಿಶ್ವ ದಿನಾಚರಣೆಯ ಸಂದರ್ಭದಲ್ಲಿ ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಗುರ್ಗಾಂವ್‌ನ ಬೈಸಿಕಲ್ ಮೇಯರ್, ಚಟರ್ಜಿ ಅವರ ಸ್ನೇಹಿತೆ ಸಾರಿಕಾ ಪಾಂಡ ಭಟ್ ಹೇಳಿದ್ದಾರೆ.

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ