ಬಲ್ಹರ್ಷಾ ರೈಲ್ವೆ ಜಂಕ್ಷನ್ನಲ್ಲಿ ಸ್ಕೈವಾಕ್‌ನ ಸ್ಲಾಬ್ ಕುಸಿತ, ಕೆಲವರಿಗೆ ಗಾಯ, ಪರಿಹಾರ ಘೋಷಿಸಿದ ರೈಲ್ವೆ ಇಲಾಖೆ
ಬಲ್ಹರ್ಷಾ ರೈಲ್ವೆ ಜಂಕ್ಷನ್ನಲ್ಲಿ ಸ್ಕೈವಾಕ್‌ನ ಸ್ಲಾಬ್ ಕುಸಿದಿದ್ದು, ಕೆಲವರಿಗೆ ಗಾಯಗಳಾಗಿವೆ. ಇನ್ನು ಗಾಯಗೊಂಡವರಿಗೆ ರೈಲ್ವೆ ಇಲಾಖೆ ಪರಿಹಾರ ಘೋಷಿಸಿದೆ.
ಮುಂಬೈ: ಬಲ್ಹರ್ಷಾ ರೈಲ್ವೆ ಜಂಕ್ಷನ್ನ ಸ್ಕೈವಾಕ್ ಸ್ಲ್ಯಾಬ್ ಕುಸಿದು ಬಿದ್ದಿದ್ದು, ನಾಲ್ವರಿಗೆ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಇಂದು(ನವೆಂಬರ್ 27) ಮಹಾರಾಷ್ಟ್ರದ ಚಂದಾಪುರದ ಬಲ್ಹರ್ಷಾ ಜಂಕ್ಷನ್ನಲ್ಲಿರುವ ಸ್ಕೈವಾಕ್ ಸ್ಲ್ಯಾಬ್ ಕುಸಿದುಬಿದ್ದಿದೆ.
ಘಟನೆಯಲ್ಲಿ ನಾಲ್ವರಿಗೆ ಮಾತ್ರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಇದರಿಂದ ಭಾರಿ ದುರಂತ ತಪ್ಪಿದೆ.
#WATCH | Slabs fall off of a foot over bridge at Balharshah railway junction in Maharashtra’s Chandrapur; people feared injured pic.twitter.com/5VT8ry3ybe
— ANI (@ANI) November 27, 2022
ಇನ್ನು ಘಟನೆಯಲ್ಲಿ ಗಾಯಗೊಂಡಿರುವವರಿಗೆ ರೈಲ್ವೆ ಇಲಾಖೆ ಪರಿಹಾರ ಘೋಷಣೆ ಮಾಡಿದೆ. ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.