AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಸುಳ್ಳಿನ ಸರದಾರ, ಅವರು ಸಹಾನುಭೂತಿ ಬಯಸುತ್ತಾರೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಅದೆಷ್ಟು ಎಷ್ಟು ಬಾರಿ ಸುಳ್ಳು ಹೇಳುತ್ತಿದ್ದೀರಿ? ಸುಳ್ಳಿನ ನಂತರ ಸುಳ್ಳು. ಮೋದಿ ಸುಳ್ಳುಗಾರರ ಮುಖ್ಯಸ್ಥ. ಅದಕ್ಕೂ ಮಿಗಿಲಾಗಿ ಈ ಕಾಂಗ್ರೆಸ್​​ನವರು ದೇಶವನ್ನು ಲೂಟಿ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅವರೀಗ ಆದಿವಾಸಿಗಳಿಗೆ ಭೂಮಿ ಕೊಡದೆ ಬಡವರ ಭೂಮಿಯನ್ನೂ ಲೂಟಿ ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

ಪ್ರಧಾನಿ ಮೋದಿ ಸುಳ್ಳಿನ ಸರದಾರ, ಅವರು ಸಹಾನುಭೂತಿ ಬಯಸುತ್ತಾರೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
TV9 Web
| Edited By: |

Updated on:Nov 27, 2022 | 10:53 PM

Share

ಡೇಡಿಯಾಪಾಡ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ (Narendra Modi)ಅವರನ್ನು “ಸುಳ್ಳುಗಾರರ ಮುಖ್ಯಸ್ಥ” ಎಂದು ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge)ಹೇಳಿದ್ದಾರೆ. ಅವರು ತಮ್ಮನ್ನು ಬಡವರೆಂದು ಕರೆದುಕೊಳ್ಳುವ ಮೂಲಕ, ಜನರು ತನ್ನನ್ನು ನಿಂದಿಸುತ್ತಾರೆ ಎಂದು ಹೇಳುವ ಮೂಲಕ ಮೋದಿ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಡಿಸೆಂಬರ್ 1 ಮತ್ತು 5 ರಂದು ಅಸೆಂಬ್ಲಿ ಚುನಾವಣೆಗಳು ನಡೆಯಲಿರುವ ಗುಜರಾತ್‌ನ ಬುಡಕಟ್ಟು ಪ್ರಾಬಲ್ಯದ ನರ್ಮದಾ ಜಿಲ್ಲೆಯ ಡೇಡಿಯಾಪಾಡದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ನಾನು ಬಡವರ ಮತ್ತು ಅಸ್ಪೃಶ್ಯ ಜಾತಿಗೆ ಸೇರಿರುವ ಜಾತಿಯಿಂದ ಬಂದವನು ಎಂದಿದ್ದಾರೆ. 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿಜಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಳುತ್ತಾರೆ. 70 ವರ್ಷಗಳಲ್ಲಿ ನಾವು ಏನನ್ನೂ ಮಾಡದಿದ್ದರೆ ನಿಮಗೆ ಪ್ರಜಾಪ್ರಭುತ್ವ ಸಿಗುತ್ತಿರಲಿಲ್ಲ. ನಿಮ್ಮಂತಹ ಜನರು ಯಾವಾಗಲೂ ಬಡವರು ಎಂದು ಹೇಳಿಕೊಳ್ಳುತ್ತಾರೆ. “ನಾನೂ ಬಡವನೇ. ನಾನು ಕಡು ಬಡತನದಿಂದ ಬಂದವನು. ನಾನು ಅಸ್ಪೃಶ್ಯ ಜಾತಿಯಿಂದ ಬಂದವನು. ಜನರು ನಿಮ್ಮ ಚಹಾವನ್ನು ಕುಡಿಯುತ್ತಾರೆ. ಜನರು ನನ್ನ ಚಹಾವನ್ನು ಸಹ ಕುಡಿಯುವುದಿಲ್ಲ ಎಂದಿದ್ದಾರೆ.

ಸಂತ್ರಸ್ತರಂತೆ ಆಡುವ ಮೂಲಕ ಪ್ರಧಾನಿ ಮೋದಿ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ ನಾನು ಮೋದಿ ಬಡವ, ಯಾರೋ ನನ್ನನ್ನು ನಿಂದಿಸಿದ್ದಾರೆ. ನನ್ನ ಬಗ್ಗೆ ಏನೋ ಹೇಳಿದರು, ನನ್ನ ಸ್ಥಿತಿ ಪ್ರಶ್ನಿಸಿದ್ದಾರೆ ಅಂತಾರೆ ಮೋದಿ. ಅವರು ಅಂತಹ ವಿಷಯಗಳನ್ನು ಹೇಳುವ ಮೂಲಕ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದರೆ, ಜನರು ಈಗ ಬುದ್ಧಿವಂತರಾಗಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಅವರು ಅರ್ಥವಾಗದಷ್ಟು ಮೂರ್ಖರಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಏತನ್ಮಧ್ಯೆ, ಖೇಡಾದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷರು ನನಗೆ ತಮ್ಮ ಔಕಾತ್ (ಸ್ಟೇಟಸ್) ತೋರಿಸುವುದಾಗಿ ಹೇಳಿದ್ದಾರೆ.ನನಗೆ ಯಾವುದೇ ಸ್ಥಾನಮಾನವಿಲ್ಲ. ನಾನು ಸಾಮಾನ್ಯ ಮನುಷ್ಯನಾಗಿ ಹುಟ್ಟಿದ್ದೇನೆ. ಅವರು ನನ್ನ ಔಕಾತ್ ಅನ್ನು ಹೇಗೆ ತೋರಿಸುತ್ತಾರೆ ಎಂದು ನೋಡೋಣ ಎಂದಿದ್ದಾರೆ.

ಒಂದೋ ಎರಡೋ ಸುಳ್ಳು ಹೇಳಿದರೆ ಜನ ಕೇಳುತ್ತಾರೆ. ಆದರೆ ಎಷ್ಟು ಬಾರಿ ಸುಳ್ಳು ಹೇಳುತ್ತೀರಿ?. ಪ್ರಧಾನಿ ಮೋದಿಯವರು ಸುಳ್ಳಿನ ನಂತರ ಸುಳ್ಳು ಹೇಳಿದರು. ಕಾಂಗ್ರೆಸ್ ದೇಶವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. ಆದರೆ ಅವರು ಶ್ರೀಮಂತರ ಹೆಗಲಾಗಿದ್ದಾರೆ.

“ಅದೆಷ್ಟು ಎಷ್ಟು ಬಾರಿ ಸುಳ್ಳು ಹೇಳುತ್ತಿದ್ದೀರಿ? ಸುಳ್ಳಿನ ನಂತರ ಸುಳ್ಳು. ಮೋದಿ ‘ಝೂಠೋಂಕಾ ಕಾ ಸರ್ದಾರ್’ (ಸುಳ್ಳುಗಾರರ ಮುಖ್ಯಸ್ಥ). ಅದಕ್ಕೂ ಮಿಗಿಲಾಗಿ ಈ ಕಾಂಗ್ರೆಸ್​​ನವರು ದೇಶವನ್ನು ಲೂಟಿ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅವರೀಗ ಆದಿವಾಸಿಗಳಿಗೆ ಭೂಮಿ ಕೊಡದೆ ಬಡವರ ಭೂಮಿಯನ್ನೂ ಲೂಟಿ ಮಾಡುತ್ತಿದ್ದಾರೆ.  ನೆಲ, ಜಲ ಮತ್ತು ಅರಣ್ಯವನ್ನು ಹಾಳು ಮಾಡುತ್ತಿರುವವರು ಯಾರು? ನೀವು ಮತ್ತು ನಿಮ್ಮೊಂದಿಗೆ ನಿಂತಿರುವ ಶ್ರೀಮಂತರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಪಕ್ಷವನ್ನು ವಿಭಜಿಸುವ ಉದ್ದೇಶದಿಂದ ಮೋದಿ, ಸರ್ದಾರ್ ವಲ್ಲಭಬಾಯಿ ಪಟೇಲ್ ನ್ನು ಕಾಂಗ್ರೆಸ್ ಪಕ್ಷದಿಂದ ದೂರವಿಡುತ್ತಿದೆ ಎಂದು ಹೇಳುತ್ತಿದ್ದಾರೆ. 20-30 ವರ್ಷಗಳ ಹಿಂದೆ ಬಿಜೆಪಿಯ ಕಚೇರಿಗಳಲ್ಲಿ ಭಾರತದ ಉಕ್ಕಿನ ಮನುಷ್ಯ ಫೋಟೋ ಕೂಡ ಇರಲಿಲ್ಲ.ಬಿಜೆಪಿಯು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು “ಎಂದಿಗೂ ಇಷ್ಟಪಡಲಿಲ್ಲ” ಆದರೆ ಮತಕ್ಕಾಗಿ ಅವರನ್ನು ನೆನಪಿಸಿಕೊಳ್ಳುತ್ತಿದೆ ಎಂದು ಖರ್ಗೆ ಹೇಳಿದರು.

ಈ ಜನರು (ಕಾಂಗ್ರೆಸ್ ನಾಯಕರು) ಸರ್ದಾರ್ ಪಟೇಲ್ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಅವರು ಮೋದಿ ಹೇಳುತ್ತಾರೆ. ಪಟೇಲ್, ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಅವರು ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸಲು ಮತ್ತು ಅದನ್ನು ಸುರಕ್ಷಿತವಾಗಿಡಲು ಒಟ್ಟಾಗಿ ಕೆಲಸ ಮಾಡಿದರು.

20-30 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಚೇರಿಗಳಲ್ಲಿ ಸರ್ದಾರ್ ಪಟೇಲ್ ಅವರ ಫೋಟೋ ಸ್ಥಾನ ಪಡೆದಿತ್ತಾ? ಅವರು ಒಳ್ಳೆಯವರು ಎಂದು ಅವರು ಎಂದಾದರೂ ಹೇಳಿದ್ದಾರಾ? ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಬಗ್ಗೆ ಮಾತನಾಡಿದ ಖರ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಮಹಾತ್ಮಾ ಗಾಂಧಿಯನ್ನು ಕೊಂದವರು ಯಾರು? ನಾಥೂರಾಂ ಗೋಡ್ಸೆ. ಗೋಡ್ಸೆ ಯಾರು? ಅವರು ಈ ಜನರಿಗೆ ಹತ್ತಿರವಾಗಿದ್ದರು. ಆರೆಸ್ಸೆಸ್ ಮತ್ತು ಮೊದಲು ಜನಸಂಘ ಮತ್ತು ಹಿಂದೂ ಮಹಾಸಭಾ ಎಂದು ಕರೆಯಲ್ಪಡುವ ಜನರು ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದರು. ಈಗ ಅವರಿಗೆ ಗಾಂಧೀಜಿ ಮೇಲಿನ ಪ್ರೀತಿ ಕಂಡು ಬಂದಿದೆ. ಗುಜರಾತ್ ಅನ್ನು ಮಹಾತ್ಮ ಗಾಂಧಿ, ನೆಹರು ಮತ್ತು ವಲ್ಲಭಭಾಯಿ ಪಟೇಲ್ ರೂಪಿಸಿದ್ದಾರೆ.

ಗುಜರಾತ್‌ನ 10-20 ನಾಯಕರು ರಾಜ್ಯಕ್ಕಾಗಿ ಏನನ್ನೂ ಮಾಡಿಲ್ಲವೇ? ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಪ್ರಶ್ನಿಸುವಂತೆ ಖರ್ಗೆ ಜನರಿಗೆ ಮನವಿ ಮಾಡಿದರು. ಮೋದಿ ಮತ್ತು ಶಾ ಕಳೆದ ಎಂಟು ವರ್ಷಗಳಲ್ಲಿ ಅಥವಾ ಕಳೆದ 27 ವರ್ಷಗಳಲ್ಲಿ ಗುಜರಾತ್‌ನಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆಯೇ?” ಬಿಜೆಪಿ ಕಳೆದ 27 ವರ್ಷಗಳಿಂದ (ಗುಜರಾತ್‌ನಲ್ಲಿ) ಅಧಿಕಾರದಲ್ಲಿದ್ದರೂ ಜನರು ಇನ್ನೂ ಹಸಿವಿನಿಂದ ಸಾಯುತ್ತಿದ್ದಾರೆ. ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರು ಅದಾನಿ ಮತ್ತು ಅಂಬಾನಿಯನ್ನು ಕೊಬ್ಬಿಸುವ ಕೆಲಸ ಮಾಡಿದ್ದಾರೆ, ಅವರು ಮಕ್ಕಳಿಗಾಗಿ ಏನು ಮಾಡುತ್ತಾರೆ? ಎಂದು ಖರ್ಗೆ ಕೇಳಿದ್ದಾರೆ.

ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳ ಕುರಿತು ಮೋದಿಯನ್ನು ಪ್ರಶ್ನಿಸಿದ ಖರ್ಗೆ, ಈಗ ಚುನಾವಣೆ ಸಮೀಪಿಸುತ್ತಿರುವಾಗ ನೀವು ಉದ್ಯೋಗ ನೀಡುವ ಬಗ್ಗೆ ಮಾತನಾಡುತ್ತಿದ್ದೀರಿ. ಮೋದಿಜಿ ನೇಮಕಾತಿ ಪ್ರಮಾಣಪತ್ರಗಳನ್ನು ವಿತರಿಸುತ್ತಿದ್ದಾರೆ, ಅದನ್ನು ಸಂಬಂಧಪಟ್ಟ ಇಲಾಖೆಗಳ ಗುಮಾಸ್ತರು ಮಾಡುತ್ತಾರೆ ಎಂದಿದ್ದಾರೆ.

Published On - 10:46 pm, Sun, 27 November 22

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ