ಲುಧಿಯಾನದಲ್ಲಿ ಯುವಕನ ದೇಹ ಕತ್ತರಿಸಿ ಕೊಂದ ಮೂವರು ಗೆಳೆಯರು

|

Updated on: Jun 05, 2024 | 11:01 PM

ಲುಧಿಯಾನಾ ಬಳಿಯ ಬರೇವಾಲ್ ಗ್ರಾಮದಲ್ಲಿ ಮೂವರು ವ್ಯಕ್ತಿಗಳು ತಮ್ಮ ಸ್ನೇಹಿತನನ್ನು ಬರ್ಬರವಾಗಿ ಕೊಂದಿದ್ದಾರೆ. ವಿಕಾಸ್ ಕುಮಾರ್ ಎಂಬಾತನ ಮೇಲೆ ಆತನ ಸ್ನೇಹಿತರಾದ ಸೂರಜ್, ಮನೋಜ್ ಮತ್ತು ಅಜಯ್ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಲುಧಿಯಾನದಲ್ಲಿ ಯುವಕನ ದೇಹ ಕತ್ತರಿಸಿ ಕೊಂದ ಮೂವರು ಗೆಳೆಯರು
ಕೊಲೆ
Follow us on

ಲುಧಿಯಾನ: ಚಂಡೀಗಢದ ಬರೇವಾಲ್ ಗ್ರಾಮದ ಸುವಾ ರಸ್ತೆಯಲ್ಲಿ ಮಂಗಳವಾರ ರಾತ್ರಿ ಮೂವರು ವ್ಯಕ್ತಿಗಳು ತಮ್ಮ ಸ್ನೇಹಿತನನ್ನು ಭೀಕರವಾಗಿ ಕೊಂದು (Murder News), ಆತನನ್ನು ಖಾಲಿ ಜಾಗದಲ್ಲಿ ಎಸೆದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಸರಭನಗರ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕೊಲೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ.

ಕೊಲೆಗೀಡಾದವನನ್ನು ಬರೇವಾಲ್ ಗ್ರಾಮದ ವಿಕಾಸ್ ಕುಮಾರ್ (26) ಎಂದು ಗುರುತಿಸಲಾಗಿದೆ. ಆತ ಕೂಲಿ ಕಾರ್ಮಿಕನಾಗಿದ್ದ. ಪೊಲೀಸರು ಆತನ ಮೂವರು ಸ್ನೇಹಿತರಾದ ಸೂರಜ್ ಕುಮಾರ್, ಮನೋಜ್ ಸಾಹ್ನಿ ಮತ್ತು ಅಜಯ್ ಸಾಹ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ 24 ವರ್ಷದ ಯುವಕನ ಸಾವು; ಪೋಷಕರಿಂದ ಕೊಲೆಯ ಶಂಕೆ

ಕೊಲೆಯಾದ ಯುವಕನ ಸಹೋದರ ಬಿಕು ಕುಮಾರ್ ಹೇಳಿಕೆಯ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಈತನ ಸಹೋದರ ವಿಕಾಸ್ ಕುಮಾರ್ ಪೇಂಟರ್ ಆಗಿದ್ದು, ರಾತ್ರಿ 10.30 ಗಂಟೆಯಾದರೂ ಮನೆಗೆ ಬಾರದೇ ಇದ್ದಾಗ ಆತನಿಗಾಗಿ ಹುಡುಕಾಟ ಆರಂಭಿಸಲಾಗಿತ್ತು. ಸಹೋದರನನ್ನು ಹುಡುಕುತ್ತಾ ಬಿಕು ಕುಮಾರ್ ಬರೇವಾಲ್‌ನ ಸುವಾ ರಸ್ತೆಯನ್ನು ತಲುಪಿದಾಗ, ಮೂವರು ವ್ಯಕ್ತಿಗಳು ತನ್ನ ಸಹೋದರನನ್ನು ಥಳಿಸುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು.

ಇದನ್ನೂ ಓದಿ: ರಾಮನಗರ: ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಕೊಲೆ ಮಾಡಿ ಶವ ಹೂತಿಟ್ಟ

ನಾನು ನೋಡಿದಾಗ ನನ್ನ ಸಹೋದರನ ಗೆಳೆಯರಾದ ಮನೋಜ್ ಮತ್ತು ಅಜಯ್ ಆತನನ್ನು ಹಿಡಿದಿದ್ದರೆ, ಸೂರಜ್ ಆತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಆತನ ದೇಹವನ್ನು ಎಸೆದಿದ್ದಾರೆ. ಆಗ ಬಿಕು ಕುಮಾರ್ ಕೂಗಿಕೊಂಡಿದ್ದಾನೆ. ಇದರಿಂದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕೂಡಲೆ ನಮ್ಮ ಕುಟುಂಬದವರಿಗೆ ಫೋನ್ ಮೂಲಕ ವಿಷಯ ತಿಳಿಸಿ ವಿಕಾಸ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ವೈದ್ಯರು ಆತ ಆಸ್ಪತ್ರೆಗೆ ಬರುವಷ್ಟರಲ್ಲಿ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಯ ಹಿಂದಿನ ಕಾರಣದ ಬಗ್ಗೆ ಕುಟುಂಬಕ್ಕೆ ಯಾವುದೇ ಸುಳಿವಿಲ್ಲ. ಈ ಬಗ್ಗೆ ಇನ್ನೂ ವಿಚಾರಣೆ ವೇಳೆ ತಿಳಿಯಬೇಕಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ