ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ 24 ವರ್ಷದ ಯುವಕನ ಸಾವು; ಪೋಷಕರಿಂದ ಕೊಲೆಯ ಶಂಕೆ
ಉತ್ತರ ಪ್ರದೇಶದ ತಾರ್ಯಾ ಸುಜನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸುನೀಲ್ ಕುಮಾರ್ ಅವರ ಹುಟ್ಟುಹಬ್ಬದ ಪಾರ್ಟಿಯಂದೇ ಸಂದೀಪ್ ಎಂಬಾತ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಗ್ರಾಮದ ಪಾರ್ಕ್ನಲ್ಲಿ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ದುರಂತ ಸಂಭವಿಸಿದೆ.
ನೊಯ್ಡಾ: ಉತ್ತರ ಪ್ರದೇಶದ (Uttar Pradesh) ಖುಷಿನಗರದಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ (Birthday Party) ಸಂಭ್ರಮಾಚರಣೆಯ ಗೋಲಿಬಾರ್ ವೇಳೆ 24 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಗಿದೆ. ಮಂಗಳವಾರ (ಮೇ 28) ಸಂಜೆ ಈ ಘಟನೆ ನಡೆದಿದೆ. 24 ವರ್ಷದ ಸಂದೀಪ್ ಪಾಸ್ವಾನ್ ಎಂಬ ಯುವಕನ ಕುಟುಂಬದವರು ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.
ಹುಟ್ಟುಹಬ್ಬದ ಸಮಾರಂಭದಲ್ಲಿದ್ದ ಅಪರಿಚಿತ ಐವರು ಸೇರಿದಂತೆ 11 ಜನರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಎಲ್ಲ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಾರ್ಯಾ ಸುಜನ್ ಪ್ರದೇಶದ ಎಸ್‌ಎಚ್‌ಒ ಅಶುತೋಷ್ ಸಿಂಗ್ ಹೇಳಿದ್ದಾರೆ. “ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆಗಳನ್ನು ತೆಗೆದುಕೊಂಡಿದ್ದೇವೆ. ಇದು ಸಂಭ್ರಮಾಚರಣೆಯ ವೇಳೆ ನಡೆದ ಗುಂಡಿನ ದಾಳಿಯ ಘಟನೆಯಾಗಿದೆ” ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಗಂಡ ಹೆಂಡತಿ ಜಗಳ 3 ವರ್ಷದ ಮಗುವಿನ ಕೊಲೆಯಲ್ಲಿ ಅಂತ್ಯ
ಇದು ತಾರ್ಯಾ ಸುಜನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸುನೀಲ್ ಕುಮಾರ್ ಎಂಬುವವರ ಹುಟ್ಟುಹಬ್ಬದ ಪಾರ್ಟಿ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮದ ಉದ್ಯಾನವನದಲ್ಲಿ ಪಾರ್ಟಿ ನಡೆಯುತ್ತಿತ್ತು. ಸಂದೀಪ್ ಅವರ ಕುಟುಂಬದ ಪ್ರಕಾರ, ಅವರು ಉದ್ಯಾನವನಕ್ಕೆ ಬಂದ ಸ್ವಲ್ಪ ಸಮಯದ ನಂತರ, ನಾಲ್ವರು ಯುವಕರು ಕಾರಿನಲ್ಲಿ ಬಂದು ಸಂದೀಪ್ ಅವರನ್ನು ಮಾರಣಾಂತಿಕವಾಗಿ ಹೊಡೆದಿದ್ದಾರೆ. ಜೋರಾಗಿ ಸಂಗೀತವನ್ನು ಹಾಕಿದ ಸಮಯದಲ್ಲಿ ಗುಂಡು ಹಾರಿಸಿದ್ದರಿಂದ ಆ ಶಬ್ದದಿಂದ ಗುಂಡೇಟಿನ ಶಬ್ದ ಕೇಳಿಸಲಿಲ್ಲ.
ಹುಟ್ಟು ಹಬ್ಬದ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗೀತದ ಧ್ವನಿಯು ಗುಂಡೇಟಿನ ಶಬ್ದವನ್ನು ಕೇಳದಂತೆ ಮಾಡಿತು. ವಿಷಯ ಗೊತ್ತಾದ ಕೂಡಲೆ ಸಂದೀಪ್ ಅವರನ್ನು ಸುನೀಲ್ ತಮ್ಮ ಕಾರಿನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಇದನ್ನೂ ಓದಿ: ತುಮಕೂರು: ಪತಿಯಿಂದಲೇ ಪತ್ನಿಯ ಭೀಕರ ಕೊಲೆ, ದೇಹದ ಅಂಗಾಂಗ ಕತ್ತರಿಸಿ ವಿಕೃತಿ
ಘಟನೆ ನಡೆದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯ ನಂತರ, ಸುನೀಲ್ ಮತ್ತು ಇನ್ನೊಬ್ಬ ನೆರೆಹೊರೆಯವರು ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಆಫ್ ಮಾಡಲಾಗಿದೆ. “ನಾವು ಸಂದೀಪ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ” ಎಂದು ಸಿಂಗ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ