ಮುಂಬೈ: ಮಹಾರಾಷ್ಟ್ರದ (Maharashtra) ಮುಂಬೈ ನಗರದ ಮಾಟುಂಗಾ ಪ್ರದೇಶದಲ್ಲಿ ಜನಪ್ರಿಯ ಕೆಫೆ ನಡೆಸುತ್ತಿರುವ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ 6 ದರೋಡೆಕೋರರು ತಾವು ಮುಂಬೈ ಕ್ರೈಂ ಬ್ರಾಂಚ್ (Mumbai Crime Branch) ಸಿಬ್ಬಂದಿ ಎಂದು ಹೇಳಿ ಸಿಯಾನ್ ಆಸ್ಪತ್ರೆ ಬಳಿಯ ಆ ಮಾಲೀಕರ ಮನೆಗೆ ಹೋಗಿ 25 ಲಕ್ಷ ರೂ. ಹಣ ದೋಚಿರುವ ಘಟನೆ ನಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಪೋಲೀಸರಂತೆ ಪೋಸು ಕೊಟ್ಟು ಕೆಫೆ ಮಾಲೀಕರ ಮನೆಗೆ ನುಗ್ಗಿದ ಆರು ಮಂದಿ 25 ಲಕ್ಷ ರೂ. ಹಣ ಕದ್ದಿದ್ದಾರೆ. ಅವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕ್ರೈಂ ಬ್ರಾಂಚ್‌ನವರು ಎಂದು ಹೇಳಿಕೊಂಡ 6 ಮಂದಿ ಮುಂಬೈನ ಸಿಯೋನ್ ಪ್ರದೇಶದಲ್ಲಿ ಕೆಫೆ ಮಾಲೀಕರ ಮನೆಗೆ ನುಗ್ಗಿ 25 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ: ‘ಇದು ದರೋಡೆ ಪ್ಲ್ಯಾನ್’: ಬೆಂಗಳೂರಿನಲ್ಲಿ ನಡೆದ ಹಲ್ಲೆ ಬಗ್ಗೆ ವಿವರ ನೀಡಿದ ಹರ್ಷಿಕಾ
ನಮ್ಮನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ನೀವು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಣ ಇಟ್ಟುಕೊಂಡಿದ್ದೀರಿ ಎಂಬ ಮಾಹಿತಿ ಇದೆ ಎಂದು ಆ ಪೊಲೀಸರ ವೇಷದಲ್ಲಿ ಬಂದ ದರೋಡೆಕೋರರು ಹೇಳಿದ್ದಾರೆ. ಇದನ್ನು ಕೇಳಿ ಗಾಬರಿಯಾದ ಕೆಫೆ ಮಾಲೀಕರು ತಮ್ಮ ಮನೆಯನ್ನು ಸರ್ಚ್ ಮಾಡಲು ಅವಕಾಶ ನೀಡಿದ್ದಾರೆ. ಈ ವೇಳೆ ಅವರು 25 ಲಕ್ಷ ರೂ. ಹಣ ದೋಚಿಕೊಂಡು ಹೋಗಿದ್ದಾರೆ ಎಂದು ದೂರು ನೀಡಲಾಗಿದೆ.
ಮುಂಬೈನಲ್ಲಿ ಮೇ 20ರಂದು ಐದನೇ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಗನ್ ತೋರಿಸಿ 40 ಲಕ್ಷ ಹಣ ದರೋಡೆ
ಕೆಫೆ ವ್ಯಾಪಾರದಿಂದ ಸಂಗ್ರಹವಾಗಿದ್ದ 25 ಲಕ್ಷ ರೂ. ಹಣ ಮಾತ್ರ ನಮ್ಮ ಮನೆಯಲ್ಲಿದೆ. ಇದು ನನ್ನ ಸ್ವಂತ ದುಡ್ಡು. ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆಫೆ ಮಾಲೀಕರು ದರೋಡೆಕೋರರಿಗೆ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ತನಿಖೆಯ ವೇಳೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಅಪರಾಧದಲ್ಲಿ ನಿವೃತ್ತ ಪೊಲೀಸ್ ಪೇದೆ ಮತ್ತು ಪೊಲೀಸ್ ಮೋಟಾರು ಸಾರಿಗೆ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ