ಮುಂಬೈ ದುರ್ಘಟನೆ ಬಳಿಕ ಎಚ್ಚೆತ್ತುಕೊಳ್ಳದ ಬಿಬಿಎಂಪಿ; ಬೆಂಗಳೂರಿನಲ್ಲೂ ಬಲಿಗಾಗಿ ಕಾದು ಕುಂತಿವೆ ಬೃಹತ್ ಹೋರ್ಡಿಂಗ್ಸ್‌

ಇದೇ ಮೇ.13 ರಂದು ಮುಂಬೈ ನಗರದಲ್ಲಿ ಬೃಹತ್ ಜಾಹೀರಾತು ಹೋರ್ಡಿಂಗ್ ಕುಸಿತವಾಗಿ (Hoarding Collapse) 14 ಜನ ಸಾವನ್ನಪ್ಪಿದ್ದು, 74 ಜನರಿಗೆ ಗಾಯವಾಗಿತ್ತು. ಇತ್ತ ಬೆಂಗಳೂರಿನಲ್ಲೂ ಇಂತಹ ಅನಧಿಕೃತ ಹೋರ್ಡಿಂಗ್ಸ್​ಗಳು ಇದ್ದು, ಮುಂಬೈ ದುರ್ಘಟನೆ ಬಳಿಕವೂ ಈ ಕುರಿತು ಬಿಬಿಎಂಪಿ(BBMP) ಎಚ್ಚೆತ್ತುಕೊಂಡಿಲ್ಲ. ಈ ಕುರಿತು ಸಾಮಾಜಿಕ ಕಾರ್ಯಕರ್ತ ಅಮರೇಶ್ ಎಂಬುವವರು ಸಿಎಂ ಗೆ ದೂರು ಸಲ್ಲಿಸಿದ್ದಾರೆ.

ಮುಂಬೈ ದುರ್ಘಟನೆ ಬಳಿಕ ಎಚ್ಚೆತ್ತುಕೊಳ್ಳದ ಬಿಬಿಎಂಪಿ; ಬೆಂಗಳೂರಿನಲ್ಲೂ ಬಲಿಗಾಗಿ ಕಾದು ಕುಂತಿವೆ ಬೃಹತ್ ಹೋರ್ಡಿಂಗ್ಸ್‌
; ಬೆಂಗಳೂರಿನಲ್ಲೂ ಬಲಿಗಾಗಿ ಕಾದು ಕುಂತಿವೆ ಬೃಹತ್ ಹೋರ್ಡಿಂಗ್ಸ್‌; ಬಿಬಿಎಂಪಿ ಡೋಂಟ್​ಕೇರ್​
Follow us
Shivaraj
| Updated By: ಕಿರಣ್ ಹನುಮಂತ್​ ಮಾದಾರ್

Updated on: May 15, 2024 | 5:20 PM

ಬೆಂಗಳೂರು, ಮೇ.15: ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಸೋಮವಾರ(ಮೇ.13)ದಂದು ಬೃಹತ್ ಜಾಹೀರಾತು ಹೋರ್ಡಿಂಗ್ ಕುಸಿತವಾಗಿ (Hoarding Collapse) 14 ಜನ ಸಾವನ್ನಪ್ಪಿದ್ದು, 74 ಜನರಿಗೆ ಗಾಯವಾಗಿತ್ತು. ಇತ್ತ ಬೆಂಗಳೂರಿನಲ್ಲೂ ಅನಧಿಕೃತ ಫ್ಲೆಕ್ಸ್ ಹೋರ್ಡಿಂಗ್ಸ್‌ಗಳು ತಲೆಎತ್ತಿದ್ದು, ಮುಂಬೈ ದುರ್ಘಟನೆ ಬಳಿಕವೂ ಈ ಕುರಿತು ಬಿಬಿಎಂಪಿ(BBMP) ಎಚ್ಚೆತ್ತುಕೊಂಡಿಲ್ಲ. ಈಗಾಗಲೇ ನಗರದಲ್ಲಿ ಅನಧಿಕೃತ ಹೋರ್ಡಿಂಗ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಹೆಬ್ಬಾಳ ರಸ್ತೆ ಸೇರಿದಂತೆ ನಗರದಲ್ಲಿ ಬೃಹತ್ ಹೋರ್ಡಿಂಗ್ಸ್‌ಗಳು ಬಲಿಗಾಗಿ ಕಾದು ಕುಂತಿವೆ.

ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಕೆ ಆರೋಪ

ಇನ್ನು ಕೆಲವೆಡೆ ಒಂದಕ್ಕೆ ಅನುಮತಿ ಪಡೆದು ಬೇರೆ ಕಡೆಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಕೆ ಆರೋಪ ಕೂಡ ಕೇಳಿಬಂದಿದ್ದು, ಈ ಕುರಿತು ಸಾಮಾಜಿಕ ಕಾರ್ಯಕರ್ತ ಅಮರೇಶ್ ಸಿಎಂ ಗೆ ದೂರು ಸಲ್ಲಿಸಿದ್ದಾರೆ. ಪತ್ರದಲ್ಲಿ‘ ಮಳೆ, ಗಾಳಿಯಿಂದ ಈಗಾಗಲೇ ಹಲವೆಡೆ ಮರಗಳು ಬಿದ್ದಿದ್ದರಿಂದ ಜನರಿಗೆ ಆತಂಕ ಹೆಚ್ಚಾಗಿದೆ. ಹೆಬ್ಬಾಳ ರಸ್ತೆ ಸೇರಿದಂತೆ ಹಲವೆಡೆ ಇರೋ ಬೃಹತ್ ಫ್ಲೆಕ್ಸ್​ಗಳ ಗಾತ್ರಗಳನ್ನು ಕುಗ್ಗಿಸಬೇಕು. ಕೂಡಲೇ ಅನಧಿಕೃತವಾಗಿ ಅಳವಡಿಕೆ ಮಾಡಿರುವ ಹೋರ್ಡಿಂಗ್ಸ್‌ಗಳನ್ನ ತೆರವುಗೊಳಿಸುವಂತೆ ಅಮರೇಶ್‌ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಮುಂಬೈನಲ್ಲಿ ಹೋರ್ಡಿಂಗ್ ಕುಸಿತ; ಮೃತರ ಸಂಖ್ಯೆ 14ಕ್ಕೆ ಏರಿಕೆ, ಸಿಎಂ ಏಕನಾಥ್ ಶಿಂಧೆ ಪರಿಹಾರ ಘೋಷಣೆ

ಜೊತೆಗೆ ಬೃಹತ್ ಫ್ಲೆಕ್ಸ್​​ಗಳಿಂದ ಎನಾದರೂ ಅನಾಹುತಗಳಾದರೆ ಜಿಲ್ಲಾಧಿಕಾರಿ, ಪಾಲಿಕೆಯೇ ನೇರ ಹೊಣೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್‌ಗಳು ಹೈಕೋರ್ಟ್ ಸೂಚನೆ ಮೇರೆಗೆ ಬ್ಯಾನ್ ಆಗಿತ್ತು. ಅದ್ರೆ, ಕಳೆದ ಒಂದು ವರ್ಷದಿಂದ ಮತ್ತೆ ಹೋಲ್ಡಿಂಗ್​​ಗಳು ನಗರದ ಸುತ್ತ ತಲೆ ಎತ್ತಿವೆ.

ಅಕ್ರಮ ಬ್ಯಾನರ್​​ ​ಕಂಡರೆ ಬಿಬಿಎಂಪಿಯ ಈ ನಂಬರ್​ಗೆ ವಾಟ್ಸಪ್​ ಮಾಡಿ

ಅನಧಿಕೃತವಾಗಿ ನಗರದಲ್ಲಿ ಹೋರ್ಡಿಂಗ್ಸ್​, ಫ್ಲೆಕ್ಸ್​, ಬ್ಯಾನರ್​ ಹಾಕುವುದನ್ನು ಬಿಬಿಎಂಪಿ ನಿಷೇಧಿಸಿದೆ. ಆದರೂ ಕೂಡ ನಮ್ಮ ಕಣ್ಣು ತಪ್ಪಿಸಿ ಅಕ್ರಮವಾಗಿ ಹೋರ್ಡಿಂಗ್ಸ್​, ಫ್ಲೆಕ್ಸ್​, ಬ್ಯಾನರ್ ಹಾಕಿದರೇ, ಆ ಸ್ಥಳ ಮತ್ತು ಜಾಹಿರಾತು ಫೋಟೋ ತೆಗೆದು ನಮಗೆ ಕಳುಹಿಸಿ ಎಂದು ಬಿಬಿಎಂಪಿ ಕೆಳ ದಿನಗಳ ಹಿಂದೆ 94806 85700 ವಾಟ್ಸಪ್​ ಸಂಖ್ಯೆ ನೀಡಿತ್ತು. ಅನಧಿಕೃತವಾಗಿ ಬ್ಯಾನರ್‌ಗಳನ್ನು ಹಾಕಿ ಸಾರ್ವಜನಿಕರಿಗೆ ದಕ್ಕೆ ತರುವುದು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಇಂತಹ ಅನಧಿಕೃತ ಪೋಸ್ಟರ್ ಅಥವಾ ಬ್ಯಾನರ್‌ಗಳನ್ನು ಹಾಕಿದರೆ ಎಫ್‌ಐಆರ್‌ ದಾಖಲಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್