ಮುಂಬೈನಲ್ಲಿ ಹೋರ್ಡಿಂಗ್ ಕುಸಿತ; ಮೃತರ ಸಂಖ್ಯೆ 14ಕ್ಕೆ ಏರಿಕೆ, ಸಿಎಂ ಏಕನಾಥ್ ಶಿಂಧೆ ಪರಿಹಾರ ಘೋಷಣೆ

Mumbai Hoarding Collapse: ಮುಂಬೈನ ಘಾಟ್‌ಕೋಪರ್‌ನಲ್ಲಿ ಅಕ್ರಮ ಹೋರ್ಡಿಂಗ್‌ನ ಕುಸಿತ ಉಂಟಾಗಿ 14 ವ್ಯಕ್ತಿಗಳ ಜೀವವನ್ನು ಬಲಿ ತೆಗೆದುಕೊಂಡಿದೆ. ಪೆಟ್ರೋಲ್ ಪಂಪ್ ಮೇಲೆ ಹೋರ್ಡಿಂಗ್ ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ. ಮೃತಪಟ್ಟವರಲ್ಲಿ ಪೆಟ್ರೋಲ್ ಪಂಪ್ ಸಿಬ್ಬಂದಿ, ಇಂಜಿನಿಯರ್ ಮತ್ತು ಆಟೋ ರಿಕ್ಷಾ ಚಾಲಕರು ಕೂಡ ಇದ್ದರು. ಅವರ ಜೀವನವು ಕೆಲವೇ ಕ್ಷಣಗಳಲ್ಲಿ ದುರಂತವಾಗಿ ಬಲಿಯಾಯಿತು.

ಮುಂಬೈನಲ್ಲಿ ಹೋರ್ಡಿಂಗ್ ಕುಸಿತ; ಮೃತರ ಸಂಖ್ಯೆ 14ಕ್ಕೆ ಏರಿಕೆ, ಸಿಎಂ ಏಕನಾಥ್ ಶಿಂಧೆ ಪರಿಹಾರ ಘೋಷಣೆ
ಮುಂಬೈನಲ್ಲಿ ಹೋರ್ಡಿಂಗ್ ಕುಸಿತ
Follow us
ಸುಷ್ಮಾ ಚಕ್ರೆ
|

Updated on: May 14, 2024 | 10:38 PM

ಮುಂಬೈ: ಮುಂಬೈನ ಘಾಟ್‌ಕೋಪರ್ (Ghatkopar) ಪ್ರದೇಶದಲ್ಲಿ ಸೋಮವಾರ ಬೃಹತ್ ಹೋರ್ಡಿಂಗ್ ಕುಸಿತವಾಗಿ (Hoarding Collapse) ಅದರಡಿ ಬಹಳಷ್ಟು ಜನರು ಸಿಲುಕಿದ್ದರು. ಈ ದುರಂತ ಘಟನೆಯ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡವು ಹೋರ್ಡಿಂಗ್ ಕುಸಿದ ಸ್ಥಳಕ್ಕೆ ತಲುಪಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು (Rescue Operation) ಪ್ರಾರಂಭಿಸಿತು. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 70 ಮಂದಿ ಗಾಯಗೊಂಡಿದ್ದಾರೆ.

ಬಿಎಂಸಿ ಅಧಿಕಾರಿಗಳ ಪ್ರಕಾರ, 120 x 120 ಅಡಿ ಅಳತೆಯ ಹೋರ್ಡಿಂಗ್ ಪೆಟ್ರೋಲ್ ಪಂಪ್‌ ಮೇಲೆ ಅಪ್ಪಳಿಸಿತು. ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಪೆಟ್ರೋಲ್ ಪಂಪ್‌ನ ಮೇಲೆ 100 ಅಡಿ ಎತ್ತರದ ಜಾಹೀರಾತು ಫಲಕ ಬಿದ್ದಿದ್ದರಿಂದ ಸಾವಿನ ಸಂಖ್ಯೆ 14ಕ್ಕೆ ಏರಿದೆ ಮತ್ತು 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ 88 ಜನರನ್ನು ರಕ್ಷಿಸಲಾಗಿದೆ ಮತ್ತು ಅವರಲ್ಲಿ ಕನಿಷ್ಠ 31 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಾಗರಿಕ ಅಧಿಕಾರಿಗಳ ಪ್ರಕಾರ, ಜಾಹೀರಾತು ಫಲಕವು ಅಕ್ರಮವಾಗಿದ್ದು, ಗಾಳಿ ಮತ್ತು ಮಳೆಯ ನಡುವೆ ಘಾಟ್ಕೋಪರ್‌ನ ಚೆಡ್ಡಾನಗರ ಜಂಕ್ಷನ್‌ನಲ್ಲಿರುವ ಪೆಟ್ರೋಲ್ ಪಂಪ್‌ನ ಮೇಲೆ ಉರುಳಿ ಬಿದ್ದಿದೆ. ಅದರಡಿ ಸಿಲುಕಿ ಮೃತಪಟ್ಟ ಬಹುತೇಕ ಎಲ್ಲರ ದೇಹಗಳನ್ನು ಹೊರತೆಗೆಯಲಾಗಿದೆ.

ಇದನ್ನೂ ಓದಿ: Monsoon 2024: ಮೇ ತಿಂಗಳಲ್ಲೇ ಭಾರತ ಪ್ರವೇಶಿಸಲಿದೆ ಮುಂಗಾರು, ಯಾವ್ಯಾವ ರಾಜ್ಯಗಳಲ್ಲಿ ಯಾವಾಗ ಮಳೆ?

ಸುಮಾರು 80 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಮತ್ತು ಬಹುತೇಕ ಎಲ್ಲಾ ದೇಹಗಳನ್ನು ಹೊರತೆಗೆಯಲಾಗಿದೆ. ಅಕಾಲಿಕ ಮಳೆ ಮತ್ತು ಧೂಳಿನ ಬಿರುಗಾಳಿಯಿಂದಾಗಿ ಇಂದು ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು 1 ಗಂಟೆಯವರೆಗೆ ಸ್ಥಗಿತಗೊಳಿಸಲಾಯಿತು, ಸ್ಥಳೀಯ ರೈಲುಗಳ ಸೇವೆಗಳು ವಿಳಂಬಗೊಂಡವು ಮತ್ತು ಹಲವಾರು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿತು. 15 ವಿಮಾನಗಳನ್ನು ವಿವಿಧ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು.

ಇದನ್ನೂ ಓದಿ: Mumbai Dust Storm: ಮುಂಬೈನಲ್ಲಿ ಧೂಳು ಸಹಿತ ಬಿರುಗಾಳಿ; ಹೋರ್ಡಿಂಗ್ ಬಿದ್ದು 8 ಸಾವು, 64 ಜನರಿಗೆ ಗಾಯ

ಮುಖ್ಯಮಂತ್ರಿಯಿಂದ ಪರಿಹಾರ ಘೋಷಣೆ:

ಈ ಘಟನೆಯ ಮಾಹಿತಿ ಪಡೆದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಇದು ದುರದೃಷ್ಟಕರ ಎಂದು ಹೇಳಿದ್ದಾರೆ. ಮುಂಬೈನಲ್ಲಿರುವ ಎಲ್ಲಾ ಹೋರ್ಡಿಂಗ್‌ಗಳನ್ನು ಲೆಕ್ಕ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.

“ಇದು ಅತ್ಯಂತ ದುರದೃಷ್ಟಕರ ಘಟನೆ. ಸರಕಾರ ಇದರ ಬಗ್ಗೆ ತನಿಖೆ ನಡೆಸುತ್ತದೆ ಮತ್ತು ಹೊಣೆಗಾರರು ಕ್ರಮ ಎದುರಿಸಬೇಕಾಗುತ್ತದೆ. ನಗರದ ಎಲ್ಲಾ ಹೋರ್ಡಿಂಗ್‌ಗಳ ಸ್ಟ್ರಕ್ಚರಲ್ ಆಡಿಟ್ ನಡೆಸುವಂತೆ ನಾನು ಬಿಎಂಸಿ ಆಯುಕ್ತರನ್ನು ಕೇಳಿದ್ದೇನೆ. ಅಕ್ರಮ ಮತ್ತು ಅಪಾಯಕಾರಿ ಎಂದು ಕಂಡುಬಂದರೆ ಅವುಗಳನ್ನು ತೆಗೆದುಹಾಕಲಾಗುವುದು” ಎಂದು ಸಿಎಂ ಏಕನಾಥ್ ಶಿಂಧೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ