Crime News: ನಿದ್ರೆಯಲ್ಲಿದ್ದಾಗಲೇ ಗರ್ಭಿಣಿ ಪತ್ನಿ, 4 ವರ್ಷದ ಮಗಳ ಕತ್ತು ಹಿಸುಕಿ ಕೊಂದ ಸೈನಿಕ

|

Updated on: Sep 13, 2023 | 6:17 PM

ಗರ್ಭಿಣಿಯಾಗಿದ್ದ ತನ್ನ ಹೆಂಡತಿಯನ್ನು ಕೊಂದ ನಂತರ ಆರೋಪಿ 4 ವರ್ಷದ ಮಗಳನ್ನು ಕೊಂದಿದ್ದಾರೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಂದಹಾರ್ ತಾಲೂಕಿನ ಬೋರಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ.

Crime News: ನಿದ್ರೆಯಲ್ಲಿದ್ದಾಗಲೇ ಗರ್ಭಿಣಿ ಪತ್ನಿ, 4 ವರ್ಷದ ಮಗಳ ಕತ್ತು ಹಿಸುಕಿ ಕೊಂದ ಸೈನಿಕ
ಕೊಲೆ ಮಾಡಿದ ಸೈನಿಕ, ಕೊಲೆಯಾದ ಆತನ ಹೆಂಡತಿ
Follow us on

ನಾಂದೇಡ್: ಭಾರತೀಯ ಸೇನೆಯ ಸೈನಿಕರು ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿದ್ದಾರೆ. ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಾರೆ. ಸೈನಿಕರು ತಾವು ಕರ್ತವ್ಯದಲ್ಲಿರುವಾಗ, ದೇಶದಲ್ಲಿ ಯಾವುದೇ ಬಿಕ್ಕಟ್ಟು ಎದುರಾದಾಗ ಹಿಂದೆ ಸರಿಯುವುದಿಲ್ಲ. ಅವರು ಭಯೋತ್ಪಾದಕರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುತ್ತಾರೆ. ಆದರೆ, ಕಂದಹಾರ್​ನಲ್ಲಿ ಸೈನಿಕನೊಬ್ಬರು ತನ್ನ ಗರ್ಭಿಣಿ ಪತ್ನಿ ಹಾಗೂ 4 ವರ್ಷದ ಮಗಳನ್ನು ಕೊಲೆ ಮಾಡಿದ್ದಾರೆ.

ಭಾರತೀಯ ಸೇನೆಯ ಯೋಧ ಏಕನಾಥ್ ಜೈಭಾಯೇ ರಾತ್ರಿ ಮಲಗಿದ್ದ ತನ್ನ ಪತ್ನಿ ಮತ್ತು ಮಗಳನ್ನು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಗರ್ಭಿಣಿಯಾಗಿದ್ದ ತನ್ನ ಹೆಂಡತಿಯನ್ನು ಕೊಂದ ನಂತರ ಆರೋಪಿ 4 ವರ್ಷದ ಮಗಳನ್ನು ಕೊಂದಿದ್ದಾರೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಂದಹಾರ್ ತಾಲೂಕಿನ ಬೋರಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ.

ಇದನ್ನೂ ಓದಿ: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಬಾಲಕನನ್ನು ಹೊಡೆದು ಕೊಲೆ ಮಾಡಿದ ತಂದೆ ಅರೆಸ್ಟ್

ಕೊಲೆ ಮಾಡಿದ ನಂತರ ಆರೋಪಿ ಏಕನಾಥ್ ಜಯಭಯೆ ಮಲಕೋಲಿ ಪೊಲೀಸ್ ಠಾಣೆ ಹಜಾರ್ ಝಾಲಾಕ್ಕೆ ತೆರಳಿ ಸ್ವಯಂಪ್ರೇರಿತವಾಗಿ ಪೊಲೀಸರ ಮುಂದೆ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆ ಸೈನಿಕ 8 ತಿಂಗಳ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ 4 ವರ್ಷದ ಮಗಳನ್ನು ಕೊಲ್ಲುವಂತಹ ಕಾರಣವಾದರೂ ಏನಿತ್ತು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಫ್ಲಾಟ್​ ಒಂದರ ವಿಷಯಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆದು ಈ ಕೊಲೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಧಾರವಾಡ: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

23 ವರ್ಷದ ಭಾಗ್ಯಶ್ರೀ ಮತ್ತು ಆಕೆಯ 4 ವರ್ಷದ ಮಗಳು ಸರಸ್ವತಿಯನ್ನು ಆರೋಪಿ ಸೈನಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮಲಕೋಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ. ಸದ್ಯಕ್ಕೆ ಆ ಸೈನಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯ ಬಳಿಕ ಕೊಲೆಯ ಹಿಂದಿರುವ ನಿಜವಾದ ಕಾರಣ ತಿಳಿಯಬೇಕಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ