Crime News: ಶಾಲಾ ಶಿಕ್ಷಕನಿಗೆ ಜೀವ ಬೆದರಿಕೆ ಪತ್ರದ ಜೊತೆ ಬುಲೆಟ್ ಪಾರ್ಸಲ್

| Updated By: ಸುಷ್ಮಾ ಚಕ್ರೆ

Updated on: Aug 20, 2021 | 12:49 PM

ಶಿಕ್ಷಕನಿಗೆ ಬಂದಿರುವ ಬೆದರಿಕೆ ಪತ್ರದಲ್ಲಿ ನಿನ್ನ ಸಾವಿನ ಸಂದೇಶವಿದು ಎಂದು ಬರೆದು ಕಳುಹಿಸಲಾಗಿದೆ. ಈ ಘಟನೆ ಕಳೆದ ವಾರ ನಡೆದಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

Crime News: ಶಾಲಾ ಶಿಕ್ಷಕನಿಗೆ ಜೀವ ಬೆದರಿಕೆ ಪತ್ರದ ಜೊತೆ ಬುಲೆಟ್ ಪಾರ್ಸಲ್
ಗನ್
Follow us on

ಮುಂಬೈ: ಮಹಾರಾಷ್ಟ್ರದ ದಹಿಸರ್ ಬಳಿ ಇರುವ ಶಾಲಾ ಶಿಕ್ಷಕನಿಗೆ ಜೀವ ಬೆದರಿಕೆ ಪತ್ರದ ಜೊತೆಗೆ ಬುಲೆಟ್​ಗಳನ್ನು ಪಾರ್ಸಲ್​​ನಲ್ಲಿ ಕಳುಹಿಸಲಾಗಿದೆ. ಈ ಕುರಿತು ದಹಿಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಬೆದರಿಕೆಯೊಡ್ಡಿರುವುದು ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಶಿಕ್ಷಕನಿಗೆ ಬಂದಿರುವ ಬೆದರಿಕೆ ಪತ್ರದಲ್ಲಿ ನಿನ್ನ ಸಾವಿನ ಸಂದೇಶವಿದು ಎಂದು ಬರೆದು ಕಳುಹಿಸಲಾಗಿದೆ. ಈ ಘಟನೆ ಕಳೆದ ವಾರ ನಡೆದಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಶಿಕ್ಷಕನ ಪೋಷಕರ ಮನೆಗೆ ಬಂದಿದ್ದ ಈ ಪತ್ರ ಹಾಗೂ ಪಾರ್ಸಲ್ ಅನ್ನು ಲೆಟರ್ ಬಾಕ್ಸ್​ನಲ್ಲಿ ಹಾಕಿ ಹೋಗಲಾಗಿತ್ತು. ಮಗನ ಹೆಸರಿಗೆ ಪಾರ್ಸಲ್ ಬಂದಿರುವುದರಿಂದ ಅದನ್ನು ಆ ಪೋಷಕರು ಶಿಕ್ಷಕನಿಗೆ ತಲುಪಿಸಿದ್ದರು. ಆ ಪಾರ್ಸಲ್ ಅನ್ನು ಟೀಚರ್ ಪೊಲೀಸ್ ಠಾಣೆಗೆ ತಂದು ದೂರು ನೀಡಿದ್ದಾರೆ.

ಈ ಪ್ರಕರಣದಲ್ಲಿ ಇದುವರೆಗೂ ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ. ಆದರೆ, ಇದಕ್ಕೂ ಮೊದಲು ಅತ್ಯಾಚಾರ ಹಾಗೂ ಪೋಕ್ಸೋ ಕೇಸ್​ನಲ್ಲಿ ಆ ಶಿಕ್ಷಕನ ಹೆಸರು ಕೂಡ ಕೇಳಿಬಂದಿತ್ತು. ಆತನ ವಿರುದ್ಧ ಕೇಸ್ ದಾಖಲಾಗಿತ್ತು. ಆ ಪ್ರಕರಣಕ್ಕೂ ಈ ಲೆಟರ್​ಗೂ ಏನಾದರೂ ಸಂಬಂಧವಿದೆಯಾ? ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಪತ್ರವನ್ನು ಲೆಟರ್ ಬಾಕ್ಸ್​ನಲ್ಲಿ ಹಾಕಿ ಹೋದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ: Crime News: ಹಣಕ್ಕಾಗಿ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ತಂದೆ-ತಾಯಿ; ಹೆತ್ತವರೇ ವಿಲನ್ ಆದ ಕತೆಯಿದು

Crime News: ಕತ್ತು ಸೀಳಿ ಮಗನ ಕೊಂದ ತಾಯಿ: ವಿಚಾರಣೆ ವೇಳೆ ಬಯಲಾಯ್ತು ಎರಡು ಕೊಲೆ ರಹಸ್ಯ

(Crime News: Mumbai Teacher receives a Life threatening note bullets as parcel)