Crime News: ಮನೆ ನಿರ್ಮಾಣಕ್ಕೆ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಎಸಿಬಿ ಬಲೆಗೆ

| Updated By: Rakesh Nayak Manchi

Updated on: Jun 21, 2022 | 7:21 PM

ಮನೆ ನಿರ್ಮಾಣಕ್ಕೆ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಳ್ಳಾರಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆಯ ಪತಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

Crime News: ಮನೆ ನಿರ್ಮಾಣಕ್ಕೆ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಎಸಿಬಿ ಬಲೆಗೆ
ಸಾಂಕೇತಿಕ ಚಿತ್ರ
Follow us on

ಬಳ್ಳಾರಿ: ರಾಜ್ಯದಲ್ಲಿ ಲಂಚ ಸ್ವೀಕಾರ ಮಾಡುತ್ತಿರುವ ಅಧಿಕಾರಿಗಳ ಬೆನ್ನುಬಿದ್ದಿರುವ ಭ್ರಷ್ಟಾಚಾರ ನಿಗ್ರಹ ದಳ (ACB)ದ ಅಧಿಕಾರಿಗಳು ಇದೀಗ ಬಳ್ಳಾರಿಯಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಬಂಧಿಸಿದ್ದಾರೆ. ಮನೆ ನಿರ್ಮಾಣದ ಲೈಸೆನ್ಸ್​ ನೀಡಲು ಸಾವಿರಾರು ರೂಪಾಯಿ ಲಂಚ ಕೇಳಿದ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿ ಪಿಡಿಒ ಸಿದ್ದಲಿಂಗಪ್ಪ ಅವರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ: BTM Layout: ಸೆಕೆಂಡುಗಳಲ್ಲಿ ಹತ್ತಾರು ಬೈಕ್ ಬ್ಯಾಟರಿಗಳ ಕಳ್ಳತನ, ಸಿಸಿ ಕ್ಯಾಮರಾದಲ್ಲಿ ಸೆರೆ

ಸಿ.ಡಿ.ನಾಗಾರ್ಜುನ್​ ಎಂಬವರು ಮನೆ ಕಟ್ಟಲು ಮುಂದಾಗಿದ್ದರು. ಇದಕ್ಕಾಗಿ ಅವರಿಗೆ ಲೈಸನ್ಸ್ ಪಡೆಯುವುದು ಅವಶ್ಯವಾಗಿತ್ತು. ಈ ನಿಟ್ಟಿನಲ್ಲಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿದಾಗ ಪಿಡಿಒ ಸಿದ್ದಲಿಂಗಪ್ಪ ಮತ್ತು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮಹಾಲಕ್ಷ್ಮೀ ಅವರ ಪತಿ ಜಂಬಣ್ಣ ಅವರು ನಾಗಾರ್ಜುನ್ ಅವರಿಂದ 80,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಒ ಸಿದ್ದಲಿಂಗಪ್ಪ ಮತ್ತು ಜಂಬಣ್ಣ ಅವರ ವಿರುದ್ಧ ನಾಗಾರ್ಜುನ್ ಅವರು ಎಸಿಬಿಗೆ ದೂರು ನೀಡಿದ್ದರು. ದೂರಿನ ಅನ್ವಯ ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಟ್ರ್ಯಾಪ್ ದಾಳಿ ನಡೆಸಿದ್ದಾರೆ. ನಾಗಾರ್ಜುನ್​ರಿಂದ 80 ಸಾವಿರ ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದಾಗ ದಾಳಿ ನಡೆಸಿದ ಅಧಿಕಾರಿಗಳು, ಸಿದ್ದಲಿಂಗಪ್ಪ ಮತ್ತು ಜಂಬಣ್ಣ ಅವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Crime News: ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಅತ್ಯಾಚಾರ ಪ್ರಕರಣ ಬೆಳಕಿಗೆ, ಸೋದರಮಾವ ಅರೆಸ್ಟ್

ವಿದ್ಯುತ್ ತಂತಿ ತಗುಲಿ ಎತ್ತುಗಳು ಸಾವು

ವಿಜಯಪುರ: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಎರಡು ಎತ್ತುಗಳ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದ ಬಳಿ ನಡೆದಿದೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯ ರೈತ ದ್ಯಾಮಗೊಂಡ ಲಕ್ಷ್ಮಣ ಏಳಗಿ ಎಂಬುವರಿಗೆ ಸೇರಿದ ಎತ್ತುಗಳನ್ನು ಜಮೀನಿನಲ್ಲಿ ಮೇಯಲು ಬಿಡಲಾಗಿತ್ತು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಎತ್ತುಗಳು ಸಾವನ್ನಪ್ಪಿವೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:21 pm, Tue, 21 June 22