BTM Layout: ಸೆಕೆಂಡುಗಳಲ್ಲಿ ಹತ್ತಾರು ಬೈಕ್ ಬ್ಯಾಟರಿಗಳ ಕಳ್ಳತನ, ಸಿಸಿ ಕ್ಯಾಮರಾದಲ್ಲಿ ಸೆರೆ
Crime News: ಐದು ರಿಂದ ಹತ್ತು ಸೆಕೆಂಡ್ ಗಳಲ್ಲಿ ಬೈಕ್ ಬ್ಯಾಟರಿಗಳನ್ನು ಎಸ್ಕೇಪ್ ಮಾಡುವ ಖದೀಮತನ ಇವನದ್ದಾಗಿದೆ. ಖದೀಮ ಬೈಕ್ ನ ಬ್ಯಾಟರಿಗಳನ್ನು ಕದ್ದು ಗೋಣಿಚೀಲ ದಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗುವುದು ಪತ್ತೆಯಾಗಿದೆ.
ಬೆಂಗಳೂರು: ನಗರದ ಪ್ರತಿಷ್ಠಿತ ಬಿಟಿಎಂ ಲೇಔಟ್ ನಲ್ಲಿ ಬೈಕ್ ವಾಹನಗಳ ಬ್ಯಾಟರಿ ಕಳ್ಳರ ಹಾವಳಿ ವಿಪರೀತವಾಗಿದೆ. ಒಂದೇ ದಿನ ಸುಮಾರು 20ಕ್ಕೂ ಹೆಚ್ಚು ಬೈಕ್ ಗಳ ಬ್ಯಾಟರಿಗಳು ಕಳ್ಳತನವಾಗಿವೆ. ಒಬ್ಬನೇ ಏಕಾಂಗಿಯಾಗಿ ಬಂದು ಆಕ್ಟಿವಾ ವೆಹಿಕಲ್ ನಲ್ಲಿ ಬಂದು ಬೈಕ್ ಬ್ಯಾಟರಿಗಳನ್ನು ಕಳ್ಳತನ ಮಾಡುವುದು ಗೋಚರಿಸಿದೆ. ಅದರಲ್ಲೂ ಬುಲೆಟ್ ಮತ್ತು ಪಲ್ಸರ್ ಬೈಕ್ ಬ್ಯಾಟರಿಗಳೇ ಇವನ ಟಾರ್ಗೆಟ್. ಐದು ರಿಂದ ಹತ್ತು ಸೆಕೆಂಡ್ ಗಳಲ್ಲಿ ಬೈಕ್ ಬ್ಯಾಟರಿಗಳನ್ನು ಎಸ್ಕೇಪ್ ಮಾಡುವ ಖದೀಮತನ ಇವನದ್ದಾಗಿದೆ. ಖದೀಮ ಬೈಕ್ ನ ಬ್ಯಾಟರಿಗಳನ್ನು ಕದ್ದು ಗೋಣಿಚೀಲ ದಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗುವುದು ಪತ್ತೆಯಾಗಿದೆ. ಒಂದೇ ದಿನ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಕಳ್ಳತನ ಆಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೈಕ್ ವಾಹನಗಳ ಬ್ಯಾಟರಿ ಕಳ್ಳತನ ಮಾಡ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಕಳವು
ಬೆಂಗಳೂರು: ಚಂದ್ರಾಲೇಔಟ್ನ ಶೆರ್ಲಾಕ್ ಬಾರ್ ಬಳಿ ಕಾರಿನ ಗಾಜು ಒಡೆದು ₹ 74 ಸಾವಿರ ನಗದು ಮತ್ತು ಲ್ಯಾಪ್ಟಾಪ್ ಅನ್ನು ಕಳವು ಮಾಡಲಾಗಿದೆ. ಈ ಸಂಬಂಧ ಅಮೋಘ ಎನ್ನುವವರು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಸ್ತೆ ಬದಿ ಕಾರು ನಿಲ್ಲಿಸಿ ಕೆಲಸದ ನಿಮಿತ್ತ ತೆರಳಿದ್ದಾಗ ಘಟನೆ ಕಳವು ಮಾಡಲಾಗಿದೆ.
ಕಾಲ್ ಕನ್ವರ್ಟ್ ಅಡ್ಡೆಗಳ ಮೇಲೆ ಸೇನೆಯ ಸದರ್ನ್ ಕಮಾಂಡ್, ಸಿಸಿಬಿ ಪೊಲೀಸರ ಜಂಟಿ ದಾಳಿ, 2144 ಡಿವೈಸ್ ಜಪ್ತಿ
ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಬದಲಿಸುತ್ತಿದ್ದ ಅಡ್ಡೆಗಳ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಪಾಕ್ ಗುಪ್ತಚರ ಇಲಾಖೆಗೆ ಕರೆ ಮಾಡಲು ಬಳಸಿದ್ದ 58 ಸಿಮ್ ಬಾಕ್ಸ್ ಹಾಗೂ 2,144 ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಭಾರತೀಯ ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನದ ಐಎಸ್ಐನಿಂದಲೂ ಕರೆಗಳು ಬಂದಿದ್ದವು. ಬೆಂಗಳೂರಿನ ನಾಲ್ಕು ಕಡೆ ಆರೋಪಿ ಸಿಮ್ಬಾಕ್ಸ್ ಇರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸಿಸಿಬಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಕಡೆ ಆರೋಪಿಯು ಸಿಮ್ಬಾಕ್ಸ್ ಇರಿಸಿದ್ದ. ಸೇನೆಯ ಬೆಂಗಳೂರು ಸದರ್ನ್ ಕಮಾಂಡ್ನ ವಿಶೇಷ ತಂಡ ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ