Crime News: ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಅತ್ಯಾಚಾರ ಪ್ರಕರಣ ಬೆಳಕಿಗೆ, ಸೋದರಮಾವ ಅರೆಸ್ಟ್
ಸೋದರ ಮಾವನಿಂದಲೇ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಯಾದಗಿರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಮತ್ತು ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯಾದಗಿರಿ: ಸೋದರ ಮಾವನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ (Rape) ಎಸಗಿದ ಘಟನೆ ಯಾದಗಿರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 8 ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ಕಳೆದ 7 ತಿಂಗಳ ಹಿಂದೆ ಕಾಮುಕ ಮಾವ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಏಳು ತಿಂಗಳ ಗರ್ಭಿಣಿ ಎಂದು ಪೋಷಕರಿಗೆ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದ ಸಂತ್ರಸ್ತ ಬಾಲಕಿ, ಆಗಾಗ ಯಾದಗಿರಿಗೆ ಬರುತ್ತಿದ್ದಳು. ಈ ವೇಳೆ ಬಾಲಕಿ ಮೇಲೆ ಸೋದರ ಮಾವ ಅತ್ಯಾಚಾರ ಎಸಗಿದ್ದು, ಬಾಲಕಿ 7ತಿಂಗಳ ಗರ್ಭಿಣಿಯಾಗುತ್ತಿದ್ದಂತೆ ದುಷ್ಕೃತ್ಯ ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗಳು ನೀಡಿದ ದೂರಿನಂತೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Crime News ಕಾಲ್ ಕನ್ವರ್ಟ್ ಅಡ್ಡೆಗಳ ಮೇಲೆ ಸೇನೆಯ ಸದರ್ನ್ ಕಮಾಂಡ್, ಸಿಸಿಬಿ ಪೊಲೀಸರ ಜಂಟಿ ದಾಳಿ, 2144 ಡಿವೈಸ್ ಜಪ್ತಿ
ರೈತರಿಗೆ ಮಹಾಮೋಸ
ಗದಗ: ಹಾವೇರಿ ಜಿಲ್ಲೆಯ ರೈತರಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಗದಗ ನಗರದ ನರಸಾಪೂರ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಇರುವ ಸೋಮನಾಥ್ ಸೀಡ್ಸ್ ಕಂಪೆನಿ ವಿರುದ್ಧ ಅಕ್ರೋಶ ವ್ಯಕ್ತವಾಗುತ್ತಿದೆ. ವಾಗೀಶಗೌಡ ಪಾಟೀಲ್, ಪ್ರವೀಣಗೌಡ ಪಾಟೀಲ್ ಸಹೋದರರು ಈ ಕಂಪನಿಯನ್ನು ನಡೆಸುತ್ತಿದ್ದರು. ಇದೀಗ ರೈತರಿಗೆ ನೀಡಬೇಕಾಗಿದ್ದ ಲಕ್ಷಾಂತರ ರೂಪಾಯಿ ಹಣವನ್ನು ನೀಡದೆ ಪರಾರಿಯಾಗಿದ್ದು, ಏಜೆಂಟ್ ಮಲ್ಲನಗೌಡ ಮರೆಕನವರ ಕರೆ ತಂದು ರೈತರು ಧರಣಿ ನಡೆಸಿದ್ದಾರೆ.
ಇದನ್ನೂ ಓದಿ: ಕಲಬುರಗಿ ಬಳಿ ಕೆಎಸ್ಆರ್ಟಿಸಿ ಮತ್ತು ಕ್ರೂಸರ್ ವಾಹನ ಡಿಕ್ಕಿ; ಓರ್ವ ಸಾವು, ಹಲವರಿಗೆ ಗಾಯ
ಆರಂಭದಲ್ಲಿ ವಾಗೀಶಗೌಡ ಹಾಗೂ ಪ್ರವೀಣ ಗೌಡ ಅವರು ರೈತರಿಂದ ಟೊಮ್ಯಾಟೋ ಬೀಜ ಖರೀದಿಸಿ ಸರಿಯಾಗಿ ಹಣವನ್ನು ನೀಡುತ್ತಿದ್ದರು. ನಂತರ ಹಣವನ್ನು ನೀಡದೇ ರೈತರನ್ನು ಸತಾಯಿಸಿದ್ದು, ಅನ್ನದಾತರು ಹಣಕ್ಕಾಗಿ ಮೂರು ವರ್ಷಗಳಿಂದ ಅಳೆದಾಡಿದ್ದಾರೆ. ಈ ನಡುವೆ ಕಂಪನಿಗೂ ಬಾರದೆ ನಾಪತ್ತೆಯಾದ ಸಹೋದರರು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ರೈತರಿಗೆ ಈ ಸಹೋದರರು 20 ಲಕ್ಷ ರೂಪಾಯಿ ವಂಚನೆ ಮಾಡಿ ಪರಾರಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ, ಕುಂಚೂರ, ಲಿಂಗದೇವರಕೊಪ್ಪ, ರಾಣೆಬೆಣ್ಣೂರ ತಾಲೂಕಿನ ಡ್ಡದಬೇವಿನಹಳ್ಳಿ ಗ್ರಾಮದ ರೈತರಿಗೆ ವಂಚಕ ಸಹೋದರರು ಮೋಸ ಮಾಡಿದ್ದು, ಧರಣಿ ನಡೆಸಿ ತಮ್ಮ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ