ಥಾಣೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆಯ ಕುಟುಂಬವೊಂದರಲ್ಲಿ ಅಪ್ಪ-ಮಗನ ನಡುವೆ ಜಗಳ ನಡೆದಿತ್ತು. ಈ ವೇಳೆ ಮಗನೊಬ್ಬ ತನ್ನ ತಂದೆಯ ಹೆಬ್ಬೆರಳಿನ ತುದಿಯನ್ನು ಕಚ್ಚಿ ತುಂಡು ಮಾಡಿದ ಘಟನೆ ಥಾಣೆಯ ವಾಗ್ಲೆ ಎಸ್ಟೇಟ್‌ನಲ್ಲಿ ಇಂದು (ಶುಕ್ರವಾರ) ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 14ರಂದು ರಾಮನಗರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ರಂಜಿತ್ ಸರೋಜ್ ಎಂದು ಗುರುತಿಸಲಾಗಿದೆ ಎಂದು ಶ್ರೀ ನಗರ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Crime News: ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ; ಉತ್ತರಾಖಂಡದಲ್ಲೂ ಭೀಕರ ಕೃತ್ಯ
ತಂದೆ ವಿಜಯಪ್ರಕಾಶ್ ಜೊತೆ ಜಗಳವಾಡಿದಾಗ, ಆ ಸಮಯದಲ್ಲಿ ಕುಡಿದ ಅಮಲಿನಲ್ಲಿದ್ದ ಆರೋಪಿ ರಂಜಿತ್ ತಂದೆಯ ಹೆಬ್ಬೆರಳಿನ ಭಾಗವನ್ನು ಕಚ್ಚಿದ್ದಾನೆ. 53 ವರ್ಷದ ಆತನ ತಂದೆ ಥಾಣೆಯ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾವು ರಂಜಿತ್ ವಿರುದ್ಧ ಭಾರತೀಯ ನ್ಯಾಯದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಕ್ರಿಮಿನಲ್ ಬೆದರಿಕೆ ಮತ್ತು ಇತರ ಅಪರಾಧಗಳಿಗೆ ಕಾರಣರಾದ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ