Crime News: ಆಸ್ತಿಯಲ್ಲಿ ಭಾಗ ಕೇಳುವಂತೆ ಪೀಡಿಸುತ್ತಿದ್ದ ಭಾವನನ್ನೇ ಹತ್ಯೆಗೈದ ಬಾಮೈದ!

ಆಸ್ತಿಯಲ್ಲಿ ಭಾಗ ಕೇಳುವಂತೆ ಸಹೋದರಿಯನ್ನು ಪೀಡಿಸುತ್ತಿದ್ದ ಭಾವನನ್ನು ಬಾಮೈದನೇ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಸೂಲಗಿರಿ ಸಮೀಪದ ತ್ಯಾಗರಸನಪಲ್ಲಿಯಲ್ಲಿ ನಡೆದಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Crime News: ಆಸ್ತಿಯಲ್ಲಿ ಭಾಗ ಕೇಳುವಂತೆ ಪೀಡಿಸುತ್ತಿದ್ದ ಭಾವನನ್ನೇ ಹತ್ಯೆಗೈದ ಬಾಮೈದ!
ಪ್ರಾತಿನಿಧಿಕ ಚಿತ್ರ
Updated By: Rakesh Nayak Manchi

Updated on: Jun 09, 2022 | 4:43 PM

ಚೆನ್ನೈ: ಆಸ್ತಿ ವಿಚಾರಕ್ಕೆ ಭಾವನನ್ನೇ ಬಾಮೈದ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ತಮಿಳುನಾಡಿನ ಸೂಲಗಿರಿ ಸಮೀಪದ ತ್ಯಾಗರಸನಪಲ್ಲಿಯಲ್ಲಿ ನಡೆದಿದೆ. ಬಿ.ಕೊತ್ತಪಲ್ಲಿ ಗ್ರಾಮದ ಸಂತೋಷ್ ಮೃತ ವ್ಯಕ್ತಿ. ಕುಮುದೇಪಲ್ಲಿಯ ಮೀನಾ ಅವರನ್ನು ವಿವಾಹವಾಗಿದ್ದ ಸಂತೋಷ್, ಆಸ್ತಿಗಾಗಿ ನಿತ್ಯವೂ ಪೀಡಿಸುತ್ತಿದ್ದ. ಇದೇ ಕಾರಣಕ್ಕೆ ಬಾಮೈದ ಮುರುಗೇಶ್ ತನ್ನ ಸ್ನೇಹಿತನೊಂದಿಗೆ ಸೇರಿ ಸಂತೋಷ್​ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: Crime News: ಕುಡುಕ ಪತಿಯ ಕಾಟ ತಾಳಲಾರದೆ ಕತ್ತು ಹಿಚುಕಿ ಪತ್ನಿಯಿಂದಲೇ ಪತಿಯ ಕೊಲೆ!

ಕುಮುದೇಪಲ್ಲಿಯ ಮೀನಾಳ ಸಹೋದರ ಮುರುಗೇಶ್ ಮತ್ತು ಸಂತೋಷ್ ಸ್ನೇಹಿತರಾಗಿದ್ದರು. ಈ ನಡುವೆ ಮನೆಗೆ ಬಂದು ಹೋಗುತ್ತಿದ್ದ ಸಂತೋಷ್, ಮೀನಾಳನ್ನು ಪ್ರೀತಿಸಲು ಪ್ರಾರಂಭಿಸಿದ್ದನು. ಮೀನಾ ಕೂಡ ಪ್ರೀತಿಸುತ್ತಿದ್ದರಿಂದ ಕಳೆದ ಒಂದು ವರ್ಷದ ಹಿಂದೆ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದರು.

ಇದನ್ನೂ ಓದಿ: Crime News: ಬೈಕ್ ಮೇಲೆ ಬಂದು ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿ

ಇತ್ತೀಚೆಗೆ ಮೀನಾಳ ಸಹೋದರ ಮುರುಗೇಶ್ ಜಮೀನು ಮಾರಾಟ ಮಾಡುಲು ಮುಂದಾಗಿದ್ದಾನೆ. ಈ ವಿಚಾರ ತಿಳಿದ ಸಂತೋಷ್, ಆಸ್ತಿಯಲ್ಲಿ ಭಾಗ ಕೇಳುವಂತೆ ಪತ್ನಿಯನ್ನೇ ಪೀಡಿಸಲು ಆರಂಭಿಸಿದ್ದಾನೆ. ಅದರಂತೆ ಮೀನಾ ತನ್ನ ಸಹೋದರನ ಬಳಿ ಆಸ್ತಿ ಕೇಳಿದ್ದಾಳೆ.  ಪದೇ ಪದೇ ಆಸ್ತಿಯಲ್ಲಿ ಭಾಗ ತರುವಂತೆ ಹಿಂಸೆ ನೀಡುತ್ತಿದ್ದರಿಂದ ಕೋಪಗೊಂಡ ಮುರಗೇಶ್ ಸಂತೋಷ್​ನನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದಾನೆ.

ಇದನ್ನೂ ಓದಿ: ಹಿಂದೂ ನಾಯಕ ಯಶಪಾಲ ಸುವರ್ಣಗೆ ಕೊಲೆ ಬೆದರಿಕೆ! ಆರೋಪಿಗಳಿಗೆ ಕ್ರಮ ಜರಗಿಸುವಂತೆ ಒತ್ತಾಯ

ಅದರಂತೆ ಮುರುಗೇಶ್ ಮತ್ತು ಸ್ನೇಹಿತರಾದ ಕುಮಾರ್ ಹಾಗೂ ಮತ್ತೋರ್ವ ಬಾಲಾಪರಾಧಿ ಸೇರಿ ಇದ್ದ ಗ್ಯಾಂಗ್ ಸಂತೋಷ್​ ಮನೆಗೆ ವಾಪಸ್ ಆಗುವುದನ್ನು ಕಾಯುತ್ತಾ ಕೂತಿತ್ತು. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಸಂತೋಷ್​ನನ್ನು ಅಡ್ಡಗಟ್ಟಿದ ಗ್ಯಾಂಗ್,  ಮಾವಿನ ತೋಪಿನೊಳಗೆ ಎಳೆದೊಯ್ದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡ ಸೂಲಗಿರಿ ಪೋಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Thu, 9 June 22