Crime News: ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಗಳೊಂದಿಗೆ ತಾನೂ ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

| Updated By: ಸುಷ್ಮಾ ಚಕ್ರೆ

Updated on: Jul 26, 2022 | 3:16 PM

ಪೂಂಗೋಡಿಯವರ ಪತಿ ಕಾಳಿದಾಸ್ 6 ವರ್ಷಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ಪೂಂಗೋಡಿ ತನ್ನ ಮಗಳು ವರ್ಷಾ ಜೊತೆಗೆ ತನ್ನ ತಾಯಿ ಸರಸ್ವತಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು.

Crime News: ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಗಳೊಂದಿಗೆ ತಾನೂ ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ
ಸಾಂಧರ್ಬಿಕ ಚಿತ್ರ
Follow us on

ಚೆನ್ನೈ: ತಮಿಳುನಾಡಿನ ತಿರುಪುರದಲ್ಲಿ ಮಹಿಳೆಯೊಬ್ಬರು ತನ್ನ 10 ವರ್ಷದ ಮಗಳೊಂದಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿರುಪ್ಪೂರ್ ಜಿಲ್ಲೆಯ ಧರ್ಮಪುರಂ ಬಳಿಯ ಅಲಂಗಿಯಂ ಕಾಮರಾಜರ್ ಪಟ್ಟಣದ 28 ವರ್ಷದ ಪೂಂಗೋಡಿ ಎಂಬ ವಿಧವೆ ಆತ್ಮಹತ್ಯೆ (Suicide) ಮಾಡಿಕೊಂಡಾಕೆ. ಪೂಂಗೋಡಿಯವರ ಪತಿ ಕಾಳಿದಾಸ್ ಅವರು ಸುಮಾರು 6 ವರ್ಷಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ಪೂಂಗೋಡಿ ತನ್ನ ಮಗಳು ವರ್ಷಾ ಜೊತೆಗೆ ತನ್ನ ತಾಯಿ ಸರಸ್ವತಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು.

ಪೂಂಗೋಡಿ ಧಾರಾಪುರಂ ಪ್ರದೇಶದ ಖಾಸಗಿ ಬಟ್ಟೆ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಮಗಳು ವರ್ಷಾ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಳು. ಪೂಂಗೋಡಿ 2 ತಿಂಗಳ ಹಿಂದೆ ತನ್ನ ಕೆಲಸವನ್ನು ತೊರೆದು ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ (TNPSC) ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಅವರು ಜುಲೈ 24ರಂದು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಅವರಿಗೆ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಸಾಧ್ಯವಾಗಿರಲಿಲ್ಲ. ಪರೀಕ್ಷೆಯಲ್ಲಿ ಪ್ರಶ್ನೆಗಳು ಕಠಿಣವಾಗಿತ್ತು ಎಂದು ಎಲ್ಲರ ಬಳಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ವಿದ್ಯಾರ್ಥಿನಿ ಆತ್ಮಹತ್ಯೆ: ತಮಿಳುನಾಡಿನ ಕಲ್ಲಾಕುರಿಚಿ ಉದ್ವಿಗ್ನ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಪೂಂಗೋಡಿ ತನಗೆ ಸರಿಯಾದ ಕೆಲಸ ಸಿಗುತ್ತಿಲ್ಲ ಎಂದು ನಿರಾಶೆಗೊಂಡಿದ್ದರು. ಇದೇ ಕಾರಣದಿಂದ ಸೋಮವಾರ ಬೆಳಗ್ಗೆ ಮನೆಯಲ್ಲಿ ಒಬ್ಬಳೇ ಇದ್ದ ಮಗಳು ವರ್ಷಾಳನ್ನು ನೇಣು ಬಿಗಿದು ಕೊಂದು, ತಾನೂ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೂಂಗೋಡಿ ಅವರ ತಾಯಿ ಸರಸ್ವತಿ ಮನೆಗೆ ಹಿಂದಿರುಗಿದಾಗ ಮಗಳು ಮತ್ತು ಮೊಮ್ಮಗಳು ಮೃತಪಟ್ಟಿರುವುದನ್ನು ಕಂಡು ಆಘಾತಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಅಲಂಗಿಯಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶವಪರೀಕ್ಷೆಗಾಗಿ ಅಧಿಕಾರಿಗಳು ತಿರುಪ್ಪೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

Published On - 3:13 pm, Tue, 26 July 22