ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿ ಮೇಲೆ ವಿದ್ಯಾರ್ಥಿ ಮೃತದೇಹ ಪತ್ತೆ, ಆತ್ಮಹತ್ಯೆಯಲ್ಲ ಕೊಲೆ ಎಂದ ಪೋಷಕರು

ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಬಿಟೆಕ್ ವಿದ್ಯಾರ್ಥಿ ನಿಶಾಂಕ್ ರಾಥೋಡ್ ಮೃತದೇಹ ರೈಲ್ವೆ ಹಳಿಯೊಂದರ ಮೇಲೆ ಪತ್ತೆಯಾಗಿದೆ. ಪೊಲೀಸರು ಸಲ್ಲಿಸಿದ ವರದಿಯ ಪ್ರಕಾರ, ಚಲಿಸುತ್ತಿರುವ ರೈಲಿಗೆ ಅಡ್ಡಬಂದ ಪರಿಣಾಮ ದೇಹವು ತುಂಡು ತುಂಡಾಗಿದೆ ಎಂದು ಹೇಳಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ ವಿದ್ಯಾರ್ಥಿಯ ತಂದೆಗೆ ಬಂದಿರುವ ಸಂದೇಶವು ಪ್ರಕರಣವನ್ನು ತಲೆಕೆಳಕು ಮಾಡಿದೆ.

ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿ ಮೇಲೆ ವಿದ್ಯಾರ್ಥಿ ಮೃತದೇಹ ಪತ್ತೆ, ಆತ್ಮಹತ್ಯೆಯಲ್ಲ ಕೊಲೆ ಎಂದ ಪೋಷಕರು
NishankImage Credit source: News 18
Follow us
TV9 Web
| Updated By: ನಯನಾ ರಾಜೀವ್

Updated on: Jul 26, 2022 | 1:07 PM

ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಬಿಟೆಕ್ ವಿದ್ಯಾರ್ಥಿ ನಿಶಾಂಕ್ ರಾಥೋಡ್ ಮೃತದೇಹ ರೈಲ್ವೆ ಹಳಿಯೊಂದರ ಮೇಲೆ ಪತ್ತೆಯಾಗಿದೆ. ಪೊಲೀಸರು ಸಲ್ಲಿಸಿದ ವರದಿಯ ಪ್ರಕಾರ, ಚಲಿಸುತ್ತಿರುವ ರೈಲಿಗೆ ಅಡ್ಡಬಂದ ಪರಿಣಾಮ ದೇಹವು ತುಂಡು ತುಂಡಾಗಿದೆ ಎಂದು ಹೇಳಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ ವಿದ್ಯಾರ್ಥಿಯ ತಂದೆಗೆ ಬಂದಿರುವ ಸಂದೇಶವು ಪ್ರಕರಣವನ್ನು ತಲೆಕೆಳಕು ಮಾಡಿದೆ.

ಮೃತನ ತಂದೆಗೆ ‘ಗುಸ್ತಾಖ್-ಎ-ನಬಿ ಕಿ ಏಕ್ ಹಿ ಸಜಾ, ಸರ್ ತನ್ ಸೆ ಜುದಾ’ ಎಂಬ ಸಂದೇಶ ಬಂದಿದೆ. ಉದಯಪುರದಲ್ಲಿ ಟೈಲರ್​ ಅನ್ನು ಹತ್ಯೆ ಮಾಡುವಾಗ ಕೂಡ ಹಂತಕರು ಇದೇ ವಾಖ್ಯವನ್ನು ಉಲ್ಲೇಖಿಸಿದ್ದರು. ಹಾಡಹಗಲೇ ಟೈಲರ್ ಹತ್ಯೆ ಮಾಡಿ ವಿಡಿಯೋ ಚಿತ್ರೀಕರಿಸಿದ್ದರು.

ಇದೀಗ ತಂದೆಗೆ ಸಂದೇಶ ಕಳುಹಿಸಿದ್ದು ಯಾರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಫೋನ್‌ನಿಂದ ಸಂದೇಶ ಕಳುಹಿಸಲಾಗಿದೆ ಈ ಕುರಿತು ನ್ಯೂಸ್ 18 ವರದಿ ಮಾಡಿದೆ.

ಪೊಲೀಸರು ಫೋನ್‌ನಲ್ಲಿ ಫೊರೆನ್ಸಿಕ್ ವಿಶ್ಲೇಷಣೆ ನಡೆಸುತ್ತಿದ್ದಾರೆ. ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಯ ತಂದೆ ಸಮರ್ಥಿಸಿಕೊಂಡಿದ್ದಾರೆ.

ತಂದೆ ಮತ್ತು ಅಪರಿಚಿತ ವ್ಯಕ್ತಿಯ ನಡುವಿನ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಪಠ್ಯಗಳು “ರಾಥೋಡ್ ಸಾಹಬ್ ಬಹುತ್ ಬಹದ್ದೂರ್ ಥಾ ಆಪ್ಕಾ ಬೇಟಾ” ಎಂದು ಬರೆದಿದ್ದಾರೆ ಅಂದರೆ ರಾಥೋಡ್ ಸಾಹೇಬರೇ ನಿಮ್ಮ ಮಗ ತುಂಬಾ ಧೈರ್ಯಶಾಲಿಯಾಗಿದ್ದ ಎಂದರ್ಥ.

ಪೊಲೀಸ್ ವರದಿಯ ಪ್ರಕಾರ, ಅವನು ತನ್ನ ಸಹೋದರಿಯನ್ನು ಭೇಟಿಯಾಗಲು ಮಧ್ಯಾಹ್ನ 3:45 ರ ಸುಮಾರಿಗೆ ತೆರಳಿದ್ದ, ಸಂಜೆಯಾದರೂ ಬರದಿದ್ದಾಗ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಲಾಯಿತು ಬಳಿಕ ಪೊಲೀಸರಿಗೆ ದೂರು ನೀಡಲಾಯಿತು.