ಬೆಂಗಳೂರು: ಕಿಲ್ಲರ್ ಕೊರೊನಾ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಆದ್ರೆ ಈ ಸಮಯದಲ್ಲಿ ರಾಜ್ಯದಲ್ಲಿ ಸೈಬರ್ ಕ್ರೈಂಗಳು ಸಹ ಹೆಚ್ಚಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳ ಫೋಟೋ ಹಾಕದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಟೈಂ ಪಾಸ್ ಮಾಡುವ ವೇಳೆ ದುರುಳರ ಆಫರ್ಸ್ಗಳನ್ನ ನಂಬಿ ಪಂಗನಾಮ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿರುವ ಮಹಿಳೆಯರ ಫೋಟೋ ಕದ್ದು ನಗ್ನ ಫೋಟೋಗಳಿಗೆ ಎಡಿಟ್ ಮಾಡಿ ಕೃತ್ಯ ಎಸಗುತ್ತಿದ್ದಾರೆ. ಕುಟುಂಬಸ್ಥರೆಲ್ಲಾ ಮನೆಯಲ್ಲಿದ್ದುಕೊಂಡು ಆನ್ಲೈನ್ನಲ್ಲಿ […]
ಸೈಬರ್ ಕ್ರೈಂ
Follow us on
ಬೆಂಗಳೂರು:ಕಿಲ್ಲರ್ ಕೊರೊನಾ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಆದ್ರೆ ಈ ಸಮಯದಲ್ಲಿ ರಾಜ್ಯದಲ್ಲಿ ಸೈಬರ್ ಕ್ರೈಂಗಳು ಸಹ ಹೆಚ್ಚಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳ ಫೋಟೋ ಹಾಕದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಟೈಂ ಪಾಸ್ ಮಾಡುವ ವೇಳೆ ದುರುಳರ ಆಫರ್ಸ್ಗಳನ್ನ ನಂಬಿ ಪಂಗನಾಮ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿರುವ ಮಹಿಳೆಯರ ಫೋಟೋ ಕದ್ದು ನಗ್ನ ಫೋಟೋಗಳಿಗೆ ಎಡಿಟ್ ಮಾಡಿ ಕೃತ್ಯ ಎಸಗುತ್ತಿದ್ದಾರೆ. ಕುಟುಂಬಸ್ಥರೆಲ್ಲಾ ಮನೆಯಲ್ಲಿದ್ದುಕೊಂಡು ಆನ್ಲೈನ್ನಲ್ಲಿ ಬ್ಯುಸಿಯಾಗಿದ್ದೆ ಹ್ಯಾಕರ್ಸ್ಗೆ ಬಂಡವಾಳವಾಗಿದೆ.
ಆನ್ಲೈನ್ ಫ್ರಾಡ್, ಸೆಕ್ಸ್ ದೋಖಾ, ಆಫರ್ಸ್ ಮೂಲಕ ವಂಚನೆ ಮಾಡುತ್ತಿದ್ದಾರೆ. ದಯವಿಟ್ಟು ಹೆಣ್ಣು ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ. ಮನೆಯಲ್ಲಿರುವವರು ಎಚ್ಚರಿಕೆಯಿಂದಿರುವಂತೆ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ. ಇದೇ ವೇಳೆ ಸಾರ್ವಜನಿಕರಿಗೂ ಸಹ ಎಚ್ಚರಿಕೆ ನೀಡಿದ್ದಾರೆ.