ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ಸೈಬರ್ ಕ್ರೈಂ (Cyber Crime) ಪ್ರಕರಣಗಳು ಹೆಚ್ಚುತ್ತಿವೆ. ಮೊಬೈಲ್, ಸಿಸ್ಟಮ್ ಹ್ಯಾಕ್ ಅಥವಾ ಕರೆ ಮಾಡಿ ನಿಮ್ಮ ವೈಯಕ್ತಿ ದಾಖಲೆಗಳ ಮಾಹಿತಿ ಪಡೆದು ವಂಚಿಸುತ್ತಿರುವ ಸಂಖ್ಯೆ ಹೆಚ್ಚಿತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುತ್ತಿದೆ ಮತ್ತು ಸಾರ್ವಜನಿಕರಲ್ಲೂ ಅರಿವು ಮೂಡಿಸುತ್ತಿದೆ. ಇದೀಗ ಮತ್ತೊಂದು ಸೈಬರ್ ಕ್ರೈಂ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರ (Delhi Police) ಹೆಸರಿನಲ್ಲಿ ಕರೆ ಮಾಡಿ 54 ಸಾವಿರ ರೂ. ಹಣ ನೀಡುವಂತೆ ಬೆದರಿಕೆ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
2023ರ ಆಗಸ್ಟ್ 17 ಮತ್ತು 18 ರಂದು ರಾಜು ತಿವಾರಿ ಎಂಬಾತ ನಗರದ ಹೆಚ್ಎಎಲ್ ಲೇಔಟ್ ನಿವಾಸಿಯಾದ ಪ್ರೋಮಿತ್ ಮೌಲಿಕ್ ಅವರಿಗೆ ಕರೆ ಮಾಡಿ ನಾನು (ರಾಜು ತಿವಾರಿ) ದೆಹಲಿ ಪೊಲೀಸ್, ನಿಮ್ಮ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ ಎಂದು ಹೆದರಿಸುತ್ತಾನೆ. ನಂತರ ನಿಮ್ಮನ್ನು ಹಾಗೂ ನಿಮ್ಮ ಕುಟುಂಬಸ್ಥರನ್ನು ಅರೆಸ್ಟ್ ಮಾಡದಿರಲು ಹಣ ನೀಡುವಂತೆ ಹೇಳುತ್ತಾನೆ. ಇದಕ್ಕೆ ಬೆದರಿ ಪ್ರೋಮಿತ್ ಮೌಲಿಕ್ ಅವರು ಒಂದಿಷ್ಟು ಹಣ ನೀಡುತ್ತಾರೆ.
ಇದನ್ನೂ ಓದಿ: ಸೈಬರ್ ಕ್ರೈಂ ಪ್ರಕರಣ ತಡೆಗಟ್ಟಲು ಪ್ರತ್ಯೇಕ CEN ಘಟಕಗಳ ಆರಂಭ
ಆರೋಪಿ ಮತ್ತೆ ಪ್ರೋಮಿತ್ ಮೌಲಿಕ್ ಅವರಿಗೆ ಕರೆ ಮಾಡಿ ಈ ಪ್ರಕರಣವನ್ನು ಮುಚ್ಚಿ ಹಾಕಲು 54 ಸಾವಿರ ರೂ. ನೀಡಿ ಎಂದು ಹೇಳುತ್ತಾನೆ. ಹಣ ನೀಡುವಂತೆ ಪದೇ ಪದೇ ಕರೆ ಮಾಡುತ್ತಾನೆ. ನಿರಂತರವಾಗಿ ಕರೆ ಬಂದ ಹಿನ್ನೆಲೆಯಲ್ಲಿ ಪ್ರೋಮಿತ್ ಮೌಲಿಕ್ ಅವರು ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 am, Tue, 12 September 23