ಚಿಕ್ಕಮಗಳೂರು: ಗುಂಡು ಹಾರಿಸಿ ದಲಿತ ಕೂಲಿ ಕಾರ್ಮಿಕ ಮಹಿಳೆಯ ಹತ್ಯೆಗೈದು ಸುಟ್ಟುಹಾಕಿದ ಹಂತಕರು

ಬಂದೂಕಿನಿಂದ ಗುಂಡು ಹಾರಿಸಿ ದಲಿತ ಕೂಲಿ ಕಾರ್ಮಿಕ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು: ಗುಂಡು ಹಾರಿಸಿ ದಲಿತ ಕೂಲಿ ಕಾರ್ಮಿಕ ಮಹಿಳೆಯ ಹತ್ಯೆಗೈದು ಸುಟ್ಟುಹಾಕಿದ ಹಂತಕರು
ಚಿಕ್ಕಮಗಳೂರಿನಲ್ಲಿ ಗುಂಡು ಹಾರಿಸಿ ದಲಿತ ಕೂಲಿ ಕಾರ್ಮಿಕ ಮಹಿಳೆಯ ಹತ್ಯೆಗೈದು ಸುಟ್ಟುಹಾಕಿದ ಹಂತಕರು
Follow us
Rakesh Nayak Manchi
|

Updated on: Jun 19, 2023 | 9:14 PM

ಚಿಕ್ಕಮಗಳೂರು: ಬಂದೂಕಿನಿಂದ ಗುಂಡು ಹಾರಿಸಿ ದಲಿತ ಕೂಲಿ ಕಾರ್ಮಿಕ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ಸುಟ್ಟುಹಾಕಿದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಜಯಮ್ಮ (54) ಹತ್ಯೆಯಾದ‌ ದಲಿತ ಮಹಿಳೆ. ಕಾಫಿ ಎಸ್ಟೇಟ್​​ನಲ್ಲಿ ನಡೆದಿರುವ ಮಹಿಳೆಯ ಹತ್ಯೆಯ ಹಿಂದೆ ನೂರಾರು ಅನುಮಾನಗಳು ಹುಟ್ಟುಕೊಂಡಿವೆ.

ಸಿದ್ದಾಪುರ ಗ್ರಾಮದಲ್ಲಿ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಸ್ಥಳದಿಂದ 2 ಕಿಮೀ ದೂರದಲ್ಲಿರುವ ಸುಪ್ರೀಮ್ ಎಸ್ಟೇಟ್​​ನಲ್ಲಿ ಹಂತಕರು ಸುಟ್ಟುಹಾಕಿ ಎಸ್ಕೇಪ್ ಆಗಿದ್ದಾರೆ. ಹತ್ಯೆ ನಡೆದು 7 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಗ್ರಾಮಸ್ಥರು ಇಂದು ಎಸ್​ಪಿ ಉಮಾ ಪ್ರಶಾಂತ್ ಅವರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಪ್ರೇಯಸಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಪ್ರೇಮಿ

ಮಲ್ಲಂದೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್​ಪಿ ಉಮಾ ಅವರು ಪರಿಶೀಲನೆ ನಡೆಸಿದ್ದು, ಎಸ್ಟೇಟ್ ಮಾಲೀಕ ‌ಹೆಗಡೆಗೌಡ, ಮಗ ಸುಪೀಂಗೌಡ ಸೇರಿದಂತೆ ಕೆಲವು ಕಾರ್ಮಿಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ದಲಿತ ಮಹಿಳೆಯ ಹತ್ಯೆಯ ಹಿಂದೆ ನೂರಾರು ಅನುಮಾನಗಳು ಹುಟ್ಟುಕೊಂಡಿರುವ ಹಿನ್ನೆಲೆ ಪೊಲೀಸರು ಹತ್ಯೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ