Mandya News: ಚಲಿಸುತ್ತಿದ್ದ KSRTC ಬಸ್ನಿಂದ ಬಿದ್ದು ಪ್ರಯಾಣಿಕ ಸಾವು
ಚಲಿಸುತ್ತಿದ್ದ KSRTC ಬಸ್ನಿಂದ ಆಯತಪ್ಪಿ ಬಿದ್ದು ಪ್ರಯಾಣಿಕ ಸಾವನ್ನಪ್ಪಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಬಳಿ ನಡೆದಿದೆ.
ಮಂಡ್ಯ: ಚಲಿಸುತ್ತಿದ್ದ KSRTC ಬಸ್ನಿಂದ ಆಯತಪ್ಪಿ ಬಿದ್ದು ಪ್ರಯಾಣಿಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಬಳಿ ನಡೆದಿದೆ. ಚಲುವೇಗೌಡ ಮೃತ ಪ್ರಯಾಣಿಕ. ಬಸ್ ಭರ್ತಿಯಾದ ಹಿನ್ನೆಲೆ ಫುಟ್ಬೋರ್ಡ್ನಲ್ಲಿ ನಿಂತಿದ್ದ ಚಲುವೇಗೌಡ, ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಜಕ್ಕನಹಳ್ಳಿ ಕಡೆಯಿಂದ ಮಂಡ್ಯ ಕಡೆ KSRTC ಬಸ್ ಹೊರಟಿದ್ದಾಗ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮೇಲುಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸರ್ಕಾರಿ ಬಸ್ನಿಂದ ಬಿದ್ದು ಪ್ರೌಢಶಾಲೆ ವಿದ್ಯಾರ್ಥಿನಿ ಸಾವು
ಹಾವೇರಿ: ಸರ್ಕಾರಿ ಬಸ್ನಿಂದ ಬಿದ್ದು ಪ್ರೌಢಶಾಲೆ ವಿದ್ಯಾರ್ಥಿನಿ ಮೃತಪಟ್ಟಿರುವಂತಹ ಘಟನೆ ಇತ್ತೀಚೆಗೆ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿತ್ತು. ಮಧು ಕುಂಬಾರ(14) ಮೃತ ದುರ್ದೈವಿ ವಿದ್ಯಾರ್ಥಿನಿ. ವಾಸನ ಗ್ರಾಮದಿಂದ ಕುಸನೂರು ಶಾಲೆಗೆ ಹೋಗಲು ಸರ್ಕಾರಿ ಬಸ್ ಹತ್ತಿದ್ದ ವಧು, ರಶ್ ಇದ್ದುದರಿಂದ ಬಾಗಿಲ ಬಳಿ ನಿಂತಿದ್ದಳು. ಆದರೆ ನಿಯಂತ್ರಣ ತಪ್ಪಿ ಬಸ್ನಿಂದ ಬಿದ್ದು ಸಾವನ್ನಪ್ಪಿದ್ದಳು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಅಪಘಾತಕ್ಕೆ ವ್ಯಕ್ತಿ ಸಾವು, ಮತ್ತೊಂದೆಡೆ ದೇವರ ಕೋಣ ದಾಳಿಗೆ ರೈತ ಬಲಿ
ಮಹಿಳೆಯರು ಸೇರಿದಂತೆ ಶಾಲಾ ಮಕ್ಕಳಿಂದ ಸರ್ಕಾರಿ ಬಸ್ ತುಂಬಿದೆ. ಈ ಹಿನ್ನೆಲೆಯಲ್ಲಿ ಮಧು ಬಸ್ ಬಾಗಿಲು ಬಳಿ ನಿಂತುಕೊಂಡಿದ್ದಳು. ರಸ್ತೆ ತಿರುವಿನಲ್ಲಿ ಬಸ್ ಟರ್ನ್ ಆಗುವಾಗ ಕೈಜಾರಿ ನೆಲಕ್ಕೆ ಬಿದ್ದಿದ್ದಳು. ಈ ಸಂಬಂಧ ಮೃತ ಮಧು ಪೋಷಕರು, ಸರ್ಕಾರಿ ಬಸ್ ಚಾಲಕನ ವಿರುದ್ಧ ಆಡೂರು ಠಾಣೆಗೆ ದೂರು ದಾಖಲಿಸಿದ್ದರು.
ಆಟೋ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ: 2 ಮಹಿಳೆಯರು ಸಾವು, ಐವರಿಗೆ ಗಾಯ
ದೊಡ್ಡಬಳ್ಳಾಪುರ: ಆಟೋ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ್ದು, ಆಟೋದಲ್ಲಿದ್ದ ಇಬ್ಬರು ಮಹಿಳೆಯರ ದುರ್ಮರಣ ಹೊಂದಿದ್ದು, ಐದು ಜನರಿಗೆ ಗಾಯಗಳಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ತಾಂಡಾ ಬಳಿ ಘಟನೆ ನಡೆದಿದೆ.
ಇದನ್ನೂ ಓದಿ: Gadag News: ಜೀವನದಲ್ಲಿ ಜಿಗುಪ್ಸೆ, ಬಾವಿಗೆ ಹಾರಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆತ್ಮಹತ್ಯೆಗೆ ಶರಣು
ಆಟದಲ್ಲಿ ಗ್ರಾಮಕ್ಕೆ ಆರು ಜನ ಪ್ರಯಾಣಿಕರು ತೆರಳುತ್ತಿದ್ದರು. ಈ ವೇಳೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಗಾಯಾಳುಗಳು ದೊಡ್ಡಬಳ್ಳಾಪುರ ಸರ್ಕಾರಿ ಆಸ್ವತ್ರೆಗೆ ದಾಖಲು ಚಿಕಿತ್ಸೆ ನೀಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.