ಮುಂಬೈನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಪ್ರೇಯಸಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಪ್ರೇಮಿ

ಮಾಹಿತಿ ಪ್ರಕಾರ ಮುಂಬೈನ ಸಕಿನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕೊಲೆ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ. ಆ ವ್ಯಕ್ತಿ ಚಾಕುವಿನಿಂದ ಆತನ ಗೆಳತಿಯ ಕೊಲೆ ಮಾಡಿದ್ದಾನೆ.

ಮುಂಬೈನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಪ್ರೇಯಸಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಪ್ರೇಮಿ
ಹತ್ಯೆ ನಡೆದ ಆಟೋವನ್ನು ಪೊಲೀಸರು ಪರಿಶೀಲಿಸುತ್ತಿರುವುದು
Follow us
ರಶ್ಮಿ ಕಲ್ಲಕಟ್ಟ
|

Updated on: Jun 19, 2023 | 7:58 PM

ಮುಂಬೈ: ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ಚಲಿಸುತ್ತಿದ್ದ ಆಟೋದಲ್ಲಿ ಸೋಮವಾರ ಕೊಲೆಯೊಂದು ನಡೆದಿದೆ. ಮಾಹಿತಿಯ ಪ್ರಕಾರ, ಮುಂಬೈನ ಸಕಿನಾಕಾ ಪ್ರದೇಶದಲ್ಲಿ ಜೋಡಿಯೊಂದು ಪ್ರಯಾಣಿಸುತ್ತಿತ್ತು. ಈ ನಡುವೆ ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ವ್ಯಕ್ತಿ ತನ್ನ ಜತೆಯಲ್ಲಿದ್ದ ಮಹಿಳೆಯ ಕತ್ತು  ಸೀಳಿದ್ದಾನೆ.  ಕೃತ್ಯವೆಸಗಿದ ನಂತರ ಚಲಿಸುತ್ತಿದ್ದ ಆಟೋದಿಂದ ಜಿಗಿದು ಅಪರಾಧ ನಡೆದ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ಸ್ವಲ್ಪ ದೂರದಲ್ಲಿ ಪೊಲೀಸ್ ಅಧಿಕಾರಿಗಳು ಇದ್ದಿದ್ದು, ಹಾಡಹಗಲೇ ಬರ್ಬರವಾಗಿ ಹತ್ಯೆ (murder) ಮಾಡಿ ಅಪರಾಧ ಸ್ಥಳದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

30 ವರ್ಷದ ಪಂಚಶಿಲಾ ಅಶೋಕ್ ಜಾಮ್ದಾರ್ ಎಂಬ ಮಹಿಳೆ ಕೊಲೆಯಾಗಿದ್ದಾರೆ. ಈಕೆ ಮುಂಬೈನ ಸಕಿನಾಕಾದಲ್ಲಿರುವ ಚಂಡಿವಾಲಿ ಪ್ರದೇಶದ ಸಂಘರ್ಷನಗರ ನಿವಾಸಿ. ಆರೋಪಿ ಕಟರ್ ಬಳಸಿ ಈಕೆಯ ಕತ್ತು ಸೀಳಿದ್ದಾನೆ.

ಮಾಹಿತಿ ಪ್ರಕಾರ ಮುಂಬೈನ ಸಕಿನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕೊಲೆ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ. ಆ ವ್ಯಕ್ತಿ ಚಾಕುವಿನಿಂದ ಆತನ ಗೆಳತಿಯ ಕೊಲೆ ಮಾಡಿದ್ದಾನೆ. ಇದಾದ ನಂತರ ಚಲಿಸುತ್ತಿದ್ದ ಆಟೋ ರಿಕ್ಷಾದಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು ಎಂದು ವಲಯ 10 ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ದತ್ತಾ ನಲವಾಡೆ ಹೇಳಿದ್ದಾರೆ.

ಇದನ್ನೂ ಓದಿ: Mandya News: ಚಲಿಸುತ್ತಿದ್ದ KSRTC ಬಸ್​ನಿಂದ ಬಿದ್ದು ಪ್ರಯಾಣಿಕ ಸಾವು

ಈ ಬರ್ಬರ ಕೃತ್ಯದ ಹಿಂದಿನ ಕಾರಣ ಮತ್ತು ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮತ್ತಷ್ಟು ಕ್ರೈ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ