AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೇಟಿಂಗ್ ಆ್ಯಪ್ ತಂದ ಅವಾಂತರ, ಯುವಕನ ಪಾಡು ಹೇಳೋದೇ ಬೇಡ… ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಲವ್ ಸ್ಟೋರಿ

ಇದು ಡೇಟಿಂಗ್ ಆ್ಯಪ್ ತಂದ ಅವಾಂತರ, ಪಾಪ ಯುವಕನ ಪಾಡು ಹೇಳೋದೇ ಬೇಡ.. ಆಕೆಗೆ ಈತನ ಮೇಲೆ, ಕೊನೆಯದಾಗಿ ನಿನ್ನನ್ನು ನೋಡಬೇಕು ಎಂದಿದ್ದಕ್ಕೆ ಓಡೋದಿ ಬಂದ ಪ್ರಿಯಕರನನ್ನು ಅಪಹರಿಸಿದ ಪ್ರಿಯತಮೆ ತನ್ನ ಸಹಚರರೊಂದಿಗೆ ಸೇರಿ ಹಲ್ಲೆ ನಡೆಸಿದಳು.

ಡೇಟಿಂಗ್ ಆ್ಯಪ್ ತಂದ ಅವಾಂತರ, ಯುವಕನ ಪಾಡು ಹೇಳೋದೇ ಬೇಡ... ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಲವ್ ಸ್ಟೋರಿ
ಸಾಂದರ್ಭಿಕ ಚಿತ್ರImage Credit source: fanpop.com
TV9 Web
| Updated By: Rakesh Nayak Manchi|

Updated on:Aug 27, 2022 | 9:44 AM

Share

ಡೇಟಿಂಗ್ ಆ್ಯಪ್​ನಲ್ಲಿ ಪರಪಸ್ಪರ ಪರಿಚಯ ಮಾಡಿಕೊಂಡ ಯುವಕ ಮತ್ತು ಯುವತಿ ದಿನಗಳು ಕಳೆಯುತ್ತಿದ್ದಂತೆ ಪ್ರೀತಿಗೆ ಬಿದ್ದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಜೋಡಿ ಹಕ್ಕಿ, ಲಿವಿಂಗ್ ಟುಗೆದರ್ ಸಂಬಂಧವನ್ನು ಆರಂಭಿಸಿತು. ಅದೇನೋ ಗೊತ್ತಿಲ್ಲ, ಇಬ್ಬರು ಕೂಡಿ ಸುಖವಾಗಿ ಬಾಳು ನಡೆಸಬೇಕು ಎಂದು ಕನಸು ಕಂಡಿದ್ದ ಜೋಡಿ ಹಕ್ಕಿಯ ಸುತ್ತಲೂ ನಿಧಾನವಾಗಿ ಅನುಮಾನದ ಹುತ್ತ ಬೆಳೆದು ನಿಂತಿತು. ಆಕೆಗೆ ಈತನ ಮೇಲೆ, ಈತನಿಗೆ ಆಕೆಯ ಮೇಲೆ ಅನುಮಾನ. ಕೊನೆಯದಾಗಿ ನಿನ್ನನ್ನು ನೋಡಬೇಕು ಎಂದು ಪ್ರಿಯಕರನ ಜೊತೆ ಹೇಳಿಕೊಂಡಿದ್ದಕ್ಕೆ ಪ್ರಿಯಕರ ಓಡೋಡಿ ಬಂದಿದ್ದಾನೆ. ಈ ವೇಳೆ ಕಾರಿನಲ್ಲಿ ಎಂಟ್ರಿ ಕೊಟ್ಟ ಪ್ರಿಯತಮೆಯ ಗುಂಪೊಂದು ಆತನನ್ನು ಅಪಹರಿಸಿ ಹಲ್ಲೆ ನಡೆಸಿತು. ಈ ವಿಚಿತ್ರ ಪ್ರೇಮ್ ಕಹಾನಿ ನಡೆದಿದ್ದು ಬೆಂಗಳೂರು ನಗರದಲ್ಲಿ.

ಮಹದೇವಪ್ರಸಾದ್ ಮತ್ತು ಕ್ಲಾರಾ ಎಂಬ ಯುವಕ-ಯುವತಿ ಡೇಟಿಂಗ್ ಆ್ಯಪ್​ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ದಿನಗಳು ಉರುಳುತ್ತಿದ್ದಂತೆ ಇಬ್ಬರ ನಡುವಿನ ಸಲುಗೆ ಹೆಚ್ಚಾಗಿ ಸ್ನೇಹ ಸಂಬಂಧ ಪ್ರೀತಿಗೆ ಮರಳಿದೆ. ನಂತರ ಒಂದು ಹೆಜ್ಜೆ ಮುಂದಿಟ್ಟ ಜೋಡಿ ಹಕ್ಕಿ ಲಿವಿಂಗ್ ಟುಗೆದರ್ ಸಂಬಂಧವನ್ನು ಆರಂಭಿಸಿತು. ಹಾಗೋ ಹೀಗೋ ಆರಂಭದಲ್ಲಿ ಸುಖವಾಗಿ ಇದ್ದರು. ದಿನಗಳು ಉರುಳುತ್ತಿದ್ದಂತೆ ಇಬ್ಬರ ತಲೆಯಲ್ಲಿ ಅನುಮಾನ ಎಂಬ ಭೂತ ಹೊಕ್ಕಿತು. ಅದರಂತೆ ಕ್ಲಾರಾಗೆ, ಮಹದೇವಪ್ರಸಾದ್​ಗೆ ಬೇರೆ ಸಂಬಂಧ ಇದೆ ಎಂಬ ಅನುಮಾನ, ಇತ್ತ ಮಹದೇವಪ್ರಸಾದ್​ಗೆ ಕ್ಲಾರಾಗೆ ಬೇರೆ ಸಂಬಂಧ ಇದೆ ಎಂಬ ಅನುಮಾನ ಹುಟ್ಟುಕೊಂಡಿದೆ.

ಜೋಡಿ ಹಕ್ಕಿಯ ನಡುವೆ ವಿಲನ್ ಆಗಿ ಬಂದ ಅನುಮಾನವು ಅವರ ಸಂಬಂಧದಲ್ಲಿ ಬಿರುಕು ಉಂಟುಮಾಡಿತು. ಪರಸ್ಪರ ಇಬ್ಬರ ಮೇಲೆ ಅನುಮಾನ ಹುಟ್ಟಿಕೊಂಡ ಹಿನ್ನೆಲೆ ಕ್ಲಾರಾ ಮತ್ತು ಮಹದೇವಪ್ರಸಾದ್ ಲಿವಿಂಗ್ ಟುಗೆದರ್ ಸಂಬಂಧ ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಆದರೆ ಕ್ಲಾರಾಗೆ ಮಾತ್ರ ಮಹದೇವಪ್ರಸಾದ್ ಮೇಲೆ ತೀವ್ರ ಕೋಪಗೊಂಡ ಹಿನ್ನೆಲೆ ತನ್ನ ಸಹಚರರೊಂದಿಗೆ ಸೇರಿಕೊಂಡು ಅಪಹರಿಸುವ ಪ್ಲಾನ್ ಅನ್ನು ಮಾಡಿಕೊಂಡಳು.

ಅದರಂತೆ, ಕಳೆದ 10 ದಿನಗಳ ಹಿಂದೆ ಕೊನೆಯ ಬಾರಿ ನಿನ್ನನ್ನು ನೋಡಬೇಕು ಎಂದು ಕ್ಲಾರಾ ತನ್ನ ಮನೆ ಬಳಿ ಮಹದೇವಪ್ರಸಾದ್​ನನ್ನು ಕರೆಸಿಕೊಂಡಿದ್ದಾಳೆ. ಅದರಂತೆ 11.30ರ ಸುಮಾರಿಗೆ ಕ್ಲಾರಾ ಇದ್ದಲ್ಲಿಗೆ ಓಡೋಡಿ ಹೋಗಿದ್ದಾನೆ. ಈ ವೇಳೆ ಒಟ್ಟು ಎಂಟು ಮಂದಿಯ ತಂಡವೊಂದು ಸೇರಿಕೊಂಡು ಮಹದೇವಪ್ರಸಾದ್​ನನ್ನು ಕಾರಿನಲ್ಲಿ ಅಪರಹಣ ಮಾಡಿದೆ. ಈ ತಂಡದಲ್ಲಿ ಕ್ಲಾರಾ ಕೂಡ ಒಬ್ಬಳು. ಮಹದೇವಪ್ರಸಾದ್​ನನ್ನು ಅಪಹರಿಸಿ ಹಲ್ಲೆ ನಡೆಸಿದ ಗುಂಪು ಆತನನ್ನು ವಾಪಸ್ಸು ಮನೆಗೆ ತಂದು ಬಿಟ್ಟು ಹೋಗಿದೆ.

ಘಟನೆ ಸಂಬಂಧ ಹನುಂತನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಎಂದು ಮಂದಿಯನ್ನು ಬಂಧಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 am, Sat, 27 August 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್