ದಾವಣಗೆರೆ: ಮಟನ್ ಸಾಂಬರ್​ಗಾಗಿ ನಡೆದ ಕೊಲೆ ಪ್ರಕರಣ, ಆರೋಪಿಗೆ 6 ವರ್ಷ ಶಿಕ್ಷೆ

2022ರ ಫೆಬ್ರವರಿ 4 ರಂದು ದಾವಣಗೆರೆ ನಗರದ ಡಾಂಗೆ ಪಾರ್ಕ ಬಳಿ ಭೀಕರ ಕೊಲೆಯೊಂದು ನಡೆದಿತ್ತು. ಈ ಕೊಲೆ ಕ್ಷುಲ್ಲಕ ಕಾರಣಕ್ಕೆ ನಡೆದಿತ್ತು. ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕೆಟಿಜೆ ನಗರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಇದೀಗ ನಾಯ್ಯಾಲಯ ಕೊಲೆ ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ದಾವಣಗೆರೆ: ಮಟನ್ ಸಾಂಬರ್​ಗಾಗಿ ನಡೆದ ಕೊಲೆ ಪ್ರಕರಣ, ಆರೋಪಿಗೆ 6 ವರ್ಷ ಶಿಕ್ಷೆ
ಸಾಂದರ್ಭಿಕ ಚಿತ್ರ
Edited By:

Updated on: Feb 16, 2024 | 10:31 AM

ದಾವಣಗೆರೆ, ಫೆಬ್ರವರಿ 16: ಕೊಲೆ ಮಾಡಿದ ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ದಾವಣಗೆರೆ (Davangere) ಎರಡನೇ ಹೆಚ್ಚುವರಿ ಜಿಲ್ಲಾ‌ಮತ್ತು ಸತ್ರ ನ್ಯಾಯಾಲಯ (Court) ತೀರ್ಪು ನೀಡಿದೆ. ದಾವಣಗೆರೆ ನಗರದ ಕೆಟಿಜೆ ನಗರದ ನಿವಾಸಿ ಜಮೀರಾ ಭಾಷಾ ಕೊಲೆ ಮಾಡಿದ ಅಪರಾಧಿ. ಶೌಕತ್ ಅಲಿ (38) ಕೊಲೆಯಾದ ವ್ಯಕ್ತಿ. 2022ರ ಜುಲೈ 24 ರಂದು ದಾವಣಗೆರೆ ನಗರದ ಡಾಂಗೆ ಪಾರ್ಕ ಬಳಿ ಮಟನ್​ ಊಟಕ್ಕೆ ಬಂದ ಜಮೀರ್ ಭಾಷಾ ಮತ್ತು ಕೊಲೆಯಾದ ಶೌಕತ್ ಅಲಿ ನಡುವೆ ಮಟನ್​ ಸಾಂಬರ್​ ವಿಚಾರವಾಗಿ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಕೊನೆಗೆ‌ ಜಮೀರ್ ಭಾಷಾ ಶೌಕತ್ ಅಲಿಗೆ ಚಾಕುವಿನಿಂದ ತಿವಿದಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಶೌಕತ್ ಅಲಿ ಚಿಕಿತ್ಸೆ ಫಲಿಸದೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೆಟಿಜೆ ನಗರ ಪೊಲೀಸ್ (Police) ಠಾಣೆಯಲ್ಲಿ‌‌ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜಮೀರ್ ಭಾಷಾನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಪ್ರವೀಣಕುಮಾರ ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಯೂಟ್ಯೂಬ್ ನೋಡಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ಯೂಟ್ಯೂಬ್ ನೋಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸುನೀಲ್​ ಅಲಿಯಾಸ್​​ ತಮಟೆ ಸುನೀಲ್​​ ಬಂಧಿತ ಆರೋಪಿ. ಆರೋಪಿ ಸುನೀಲ್​ನಿಂದ ಮೈಕೋಲೇಔಟ್ ಪೊಲೀಸರು 300 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಊರಿಗೆ ಹೊರಟಿದ್ದ ಮಹಿಳೆಯನ್ನ ಮನೆಗೆ ಕರೆದೊಯ್ದು ಕೊಲೆ; ಚಿನ್ನಾಭರಣ ಕಿತ್ಕೊಂಡು ಶವ ಸಂಪ್​​ಗೆ ಎಸೆದು ದಂಪತಿ ಎಸ್ಕೇಪ್

ಕಲಬುರಗಿಯ ಗೋಶಾಲೆಗಳಿಗೆ ದನಗಳ್ಳರ ಕಾಟ

ಕಲಬುರಗಿ: ಆಜಾಧಪುರ ಗ್ರಾಮದ ಹೊರವಲಯದಲ್ಲಿರುವ ರೇವಣಸಿದ್ದಪ್ಪ ಪಾಟೀಲ್ ಎಂಬುವರ ಮಾಧವ ಗೋಶಾಲೆಯಲ್ಲಿನ ಆರು ದನಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. 1.5 ಲಕ್ಷ ಬೆಲೆ ಬಾಳುವ ಎರಡು ಆಕಳು, ನಾಲ್ಕು ಹೋರಿಗಳನ್ನು ಖದೀಮರು ಕದ್ದಿದ್ದಾರೆ. ಗೂಡ್ಸ್ ವಾಹನದಲ್ಲಿ ದನಗಳನ್ನು ಹಾಕಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ